fbpx

ಎಸ್.ಎಸ್.ಎಲ್.ಸಿ. ಹಿಂದಿ ಪೂರಕ ಪರೀಕ್ಷೆ : ೫೭ ವಿದ್ಯಾರ್ಥಿಗಳು ಗೈರು

 ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯಲ್ಲಿ ಶುಕ್ರವಾರ ನಡೆದ ಹಿಂದಿ ವಿಷಯದ ಪರೀಕ್ಷೆಗೆ ಜಿಲ್ಲೆಯ ೫೩೫ ವಿದ್ಯಾರ್ಥಿಗಳು ಹಾಜರಾಗಿದ್ದು, ೫೭ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.  ಯಾವುದೇ ಡಿಬಾರ್ ಪ್ರಕರಣ ವರದಿಯಾಗಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
  ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಹಿಂದಿ ವಿಷಯಕ್ಕೆ ಬಾಲಕರು- ೩೬೨, ಬಾಲಕಿಯರು- ೨೩೦ ಸೇರಿದಂತೆ ಒಟ್ಟು ೫೯೨ ವಿದ್ಯಾರ್ಥಿಗಳು ದಾಖಲಾಗಿದ್ದರು. ಇದರಲ್ಲಿ ಬಾಲಕರು- ೩೨೬, ಬಾಲಕಿಯರು- ೨೦೯ ಸೇರಿದಂತೆ ಒಟ್ಟು ೫೩೫ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದು, ೩೬-ಬಾಲಕರು, ೨೧- ಬಾಲಕಿಯರು ಗೈರು ಹಾಜರಾಗಿದ್ದಾರೆ. 
ಕೊಪ್ಪಳ ತಾಲೂಕಿನಲ್ಲಿ ೨೭೦ ವಿದ್ಯಾರ್ಥಿಗಳ ಪೈಕಿ ೨೪೫ ವಿದ್ಯಾರ್ಥಿಗಳು ಹಾಜರಾಗಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೧೬೬ ವಿದ್ಯಾರ್ಥಿಗಳ ಪೈಕಿ ೧೪೯, ಕುಷ್ಟಗಿ ತಾಲೂಕಿನಲ್ಲಿ ೭೨ ವಿದ್ಯಾರ್ಥಿಗಳ ಪೈಕಿ ೬೧, ಯಲಬುರ್ಗಾ ತಾಲೂಕಿನಲ್ಲಿ ೮೪ ವಿದ್ಯಾರ್ಥಿಗಳ ಪೈಕಿ ೮೦ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಕೊಪ್ಪಳ ತಾಲೂಕಿನಲ್ಲಿ ೨೫, ಗಂಗಾವತಿ- ೧೭, ಕುಷ್ಟಗಿ-೧೧ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೦೪ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. 
Please follow and like us:
error

Leave a Reply

error: Content is protected !!