ಬಿಜೆಪಿ ಇಬ್ಭಾಗವಾಗಲಿದೆ- ರಾಯರಡ್ಡಿ

ಕೊಪ್ಪಳ :  ಈಗಾಗಲೇ ಬಣಗಳಲ್ಲಿ ಒಡೆದುಹೋಗಿರುವ ಬಿಜೆಪಿ ಕೊಪ್ಪಳ  ಉಪಚುನಾವಣೆಯ ನಂತರ  ಇಬ್ಭಾಗವಾಗಲಿದೆ ಎಂದು ಕೆಪಿಸಿಸಿ ಮಹಾಕಾರ್ಯದರ್ಶಿ ಬಸವರಾಜ ರಾಯರಡ್ಡಿ ಹೇಳಿದರು. ಅವರು ಕೆಪಿಸಿಸಿಯ ತಾತ್ಕಾಲಿಕ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಆಪರೇಷನ್ ಕಮಲದಿಂದ ಜನತೆ ರೋಸಿಹೋಗಿದ್ದಾರೆ ಎಂದು ಹೇಳಿದರು. 
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ದ ಶೀಘ್ರದಲ್ಲಿಯೇ ಹತ್ತಾರು ಪ್ರಕರಣಗಳು ದಾಖಲಾಗಲಿವೆ.  ಈ ಸಲ ಕೊಪ್ಪಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಗೆಲುವು ಖಚಿತ ಎಂದರು. ವೀರಣ್ಣ ಮತ್ತಿಕಟ್ಟಿ, ಅಮರೇಗೌಡ ಬಯ್ಯಾಪೂರ, ಎನ್.ಎಸ್.ಭೋಸರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು. 
Please follow and like us:
error