೩೭೧ನೇ (ಜೆ) ಕಲಂ ತಿದ್ದುಪಡಿ ಜಾರಿವರೆಗೆ ಹುದ್ದೆಗಳ ಭರ್ತಿ ಮುಂದೂಡಿಕೆ

ಮನವಿಗೆ ತಡವಾಗಿ ಸ್ಪಂದನೆ, ಸಂಸದರ ಹರ್ಷ; ಸಿಎಂಗೆ ಅಭಿನಂದನೆ
೩೭೧ನೇ (ಜೆ) ಕಲಂ ತಿದ್ದುಪಡಿಯಾಗಿದ್ದು, ಅದು ಜಾರಿಯಾಗುವವರೆಗೆ ಕೆಪಿಎಸ್‌ಸಿಯು ನಿರ್ಧರಿಸಿರುವ ೨೬೭ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸುವುದನ್ನು ತಡೆಹಿಡಿದು, ನಂತರ ನಿಯಮಗಳನ್ನು ರೂಪಿಸಿ ಅಗತ್ಯ ಕ್ರಮವಹಿಸುವುದರೊಂದಿಗೆ ಈ ಭಾಗದ ಜನರ ಆಶಯವನ್ನು ಈಡೇರಿಸಬೇಕೆಂದು ಜನವರಿ ೦೭ ರಂದು ಸಿರುಗುಪ್ಪದಲ್ಲಿ ಮಾನ್ಯ ಮುಖ್ಯಮಂತ್ರಿಯವರಿಗೆ ಸ್ವತಃ ಭೇಟಿಯಾಗಿ ಮನವಿ ಸಲ್ಲಿಸಿದ್ದು, ತಮ್ಮ ಮನವಿಗೆ ತಡವಾಗಿಯಾದರೂ ಸ್ಪಂದಿಸಿದ  ಮುಖ್ಯಮಂತ್ರಿ  ಜಗದೀಶ ಶೆಟ್ಟರ್ ರವರಿಗೆ ಕೊಪ್ಪಳ ಲೋಕಸಭಾ ಸದಸ್ಯ ಶಿವರಾಮಗೌಡರು ಅಭಿನಂದನೆ ತಿಳಿಸಿದ್ದಾರೆ.
ಮನವಿಯ ಸಾರಾಂಶ:
೩೭೧ನೇ (ಜೆ) ಕಲಂ ತಿದ್ದುಪಡಿಯಿಂದ ವೃತ್ತಿ ಶಿಕ್ಷಣದಲ್ಲಿ ತರಬೇತಿ ಮತ್ತು ಅವಕಾಶ, ಅಭಿವೃದ್ಧಿಗೆ ವಿಶೇಷ ಅನುದಾನ ಲಭ್ಯತೆ, ಉದ್ಯೋಗದಲ್ಲಿ ಸ್ಥಳೀಯರಿಗೆ ಅವಕಾಶ ಮತ್ತು ಸೌಲಭ್ಯ, ಹುಟ್ಟಿನಿಂದ ಮತ್ತು ವಾಸದ ಆಧಾರಿತವಾಗಿ ಮೀಸಲಾತಿ, ನೇರ ನೇಮಕಾತಿ ಮತ್ತು ಬಡ್ತಿಗೆ ಅವಕಾಶ ಸಿಕ್ಕಂತಾಗುತ್ತದೆ. ಆದರೆ, ಕರ್ನಾಟಕ ಲೋಕಸೇವಾ ಆಯೋಗವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ೨೬೭ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಭರ್ತಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸುವುದಾಗಿ ತಿಳಿದುಬಂದಿರುತ್ತದೆ.
೩೭೧ನೇ (ಜೆ) ಕಲಂ ತಿದ್ದುಪಡಿಯಾಗಿರುವುದರಿಂದ ರಾಜ್ಯ ಸರ್ಕಾರವು ಸೂಕ್ತ ನಿಯಮಗಳನ್ನು ರಚಿಸುವಲ್ಲಿ ಮತ್ತು ಅಳವಡಿಸಿಕೊಳ್ಳುವಲ್ಲಿ ಶೀಘ್ರವೇ ತಜ್ಞರನ್ನೊಳಗೊಂಡಂತೆ ಈ ಭಾಗದ ಜನಪ್ರತಿನಿಧಿ ಪ್ರಮುಖರ ಸಲಹಾ ಸಮಿತಿಯನ್ನು ರಚಿಸಲು ಸಕಾರಾತ್ಮಕವಾಗಿ ಮುನ್ನಡಿಯಿಟ್ಟದ್ದು, ಇಂತಹ ಸಂದರ್ಭದಲ್ಲಿ ಕೆಪಿಎಸ್‌ಸಿ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ೨೬೭ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಭರ್ತಿಗೆ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸುವುದರಿಂದ, ಈ ಭಾಗದ ಉದ್ಯೋಗಾಕಾಂಕ್ಷಿಗಳು ೩೭೧ನೇ (ಜೆ) ಕಲಂ ತಿದ್ದುಪಡಿಯ ಸದುಪಯೋಗದಿಂದ ವಂಚಿತರಾದಂತಾಗುತ್ತದೆ.
ಕಾರಣ, ಕೆಪಿಎಸ್‌ಸಿಯು ನಿರ್ಧರಿಸಿರುವ ೨೬೭ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸುವುದನ್ನು ೩೭೧ನೇ (ಜೆ) ಕಲಂ ತಿದ್ದುಪಡಿಯ ಜಾರಿಯಾಗುವವರೆಗೆ ತಡೆಹಿಡಿದು, ನಂತರ ನಿಯಮಗಳನ್ನು ರೂಪಿಸಿ ಅಗತ್ಯ ಕ್ರಮವಹಿಸುವುದರೊಂದಿಗೆ ಈ ಭಾಗದ ಜನರ ಆಶಯವನ್ನು ಈಡೇರಿಸಬೇಕೆಂದು ಮಾನ್ಯ ಸಂಸದರು ಕೋರಿದ ಮನವಿಗೆ, ತಡವಾಗಿಯಾದರೂ ಮುಖ್ಯಮಂತ್ರಿಗಳು ಸ್ಪಂದಿಸಿದ್ದಕ್ಕೆ ಲೋಕಸಭಾ ಸದಸ್ಯ ಶಿವರಾಮಗೌಡರವರು ಹರ್ಷ ವ್ಯಕ್ತಪಡಿಸಿದ್ದಾರೆ.
Please follow and like us:
error