fbpx

ಭಾಗ್ಯನಗರ-ಯತ್ನಟ್ಟಿ ಸೇತುವೆ ಸಚಿವ ಶಿವರಾಜ್ ತಂಗಡಗಿ ಅವರಿಂದ ಲೋಕಾರ್ಪಣೆ.

ಕೊಪ್ಪಳ ಆ. ೧೫ (ಕ ವಾ) ಕೊಪ್ಪಳ ತಾಲೂಕಿನ ಭಾಗ್ಯನಗರ-ಯತ್ನಟ್ಟಿ ಮಧ್ಯೆ ಹಿರೇಹಳ್ಳಕ್ಕೆ ೭. ೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಸೇತುವೆಯ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಶನಿವಾರದಂದು ನೆರವೇರಿಸಿದರು. ಯತ್ನಟ್ಟಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಹಿರೇಹಳ್ಳ ದಾಟಿ ಭಾಗ್ಯನಗರ ಅಥವಾ ಕೊಪ್ಪಳಕ್ಕೆ ಬರಲು ತೀವ್ರ ತೊಂದರೆ ಅನುಭವಿಸುತ್ತಿದ್ದರು.  ಸೇತುವೆಯನ್ನು ಲೋಕಾರ್ಪಣೆಗೊಳಿಸುವ ಮೂಲಕ ಯತ್ನಟ್ಟಿ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರ ಬಹುದಿನಗಳ ಬೇಡಿಕೆ ಇದೀ

ಗ ಈಡೇರಿದಂತಾಗಿದೆ.  ಸೇತುವೆಯನ್ನು ೭. ೫ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಸೇತುವೆಯ ಉದ್ದ ೧೬೪ ಮೀ., ಅಗಲ- ೮. ೫ ಮೀ. ಇದೆ.  ಸೇತುವೆಗೆ ೨೪ ತೂಬುಗಳನ್ನು ಅಳವಡಿಸಲಾಗಿದ್ದು, ಸೇತುವೆಯ ನಿರ್ಮಾಣದಿಂದ ಕೊಪ್ಪಳ, ಭಾಗ್ಯನಗರ, ಯತ್ನಟ್ಟಿ, ಮಾದಿನೂರು, ದದೇಗಲ್ ಗ್ರಾಮಸ್ಥರು ಸಂತಸಗೊಂಡಿದ್ದಾರೆ.  ಲೋಕೋಪಯೋಗಿ ಇಲಾಖೆ ಸೇತುವೆ ನಿರ್ಮಾಣದ ಹೊಣೆ ವಹಿಸಿಕೊಂಡು, ನಿಗದಿತ ಕಾಲಮಿತಿಯೊಳಗೆ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿದೆ.  ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜುಲ್ಲು ಖಾದ್ರಿ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಲಷ್ಕರಿ ನಾಯಕ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!