ಸನ್ಮಾನ ಮನುಷ್ಯನ ಜವಾಬ್ದಾರಿ ಹೆಚ್ಚಿಸುತ್ತದೆ : ಶರಣಪ್ಪ

ಸನ್ಮಾನ, ಪ್ರಶಸ್ತಿಗಳು ಮನುಷ್ಯನಿಗೆ ಲಭಿಸಿದಾಗ ಅದರಿಂದ ಆ ವ್ಯಕ್ತಿಯ ಜವಾಬ್ದಾರಿ ಹೆಚ್ಚಿಸುತ್ತದೆ. ಸಾಮಾಜಿಕ ಮತ್ತು ತನ್ನ ಕರ್ತವ್ಯದಲ್ಲಿನ ಸೇವೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪರಿಣಾಮಕಾರಿಯಾಗಿ ಮಾಡಲು ಇದು ಸಹಕಾರಿಯಾಗಿದೆ ಎಂದು ಜಿಲ್ಲಾ ಸರ್ಕಾರಿ ವಕೀಲರಾದ ಬಿ.ಶರಣಪ್ಪ ಹೇಳಿದರು.
ಅವರು ನಗರದ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್‌ನಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ ಸರಳ ಸಾಂಕ್ಯೇತಿಕ ಸನ್ಮಾನ ಸಮಾರಂಭದಲ್ಲಿ ಸನ್ಮಾನಿತರಾಗಿ ಪಾಲ್ಗೊಂಡು ಸನ್ಮಾನವನ್ನು ಸ್ವೀಕರಿಸಿದ ಬಳಿಕ ಮಾತನಾಡುತ್ತ, ಮನುಷ್ಯ ತನ್ನ ಕರ್ತವ್ಯ ಜವಾಬ್ದಾರಿ ಕ್ಷೇತ್ರದಲ್ಲಿ ಹೆ

ಚ್ಚಿನ ರೀತಿಯಲ್ಲಿ ಜನತೆಗೆ ಉತ್ತಮ ಸೇವೆ ಒದಗಿಸಿಕೊಡುವಲ್ಲಿ ಸನ್ಮಾನಗಳು ಪ್ರೇರಣಿ ನೀಡುತ್ತವೆ ಎಂದು ಜಿಲ್ಲಾ ಸರ್ಕಾರಿ ವಕೀಲರಾದ ಬಿ.ಶರಣಪ್ಪ ಹೇಳಿದರು.

ನಂತರ ವಿಶ್ವೇಶ್ವರಯ್ಯ ಜಿಲ್ಲಾ ಗುತ್ತಿಗೆದಾರರಾಗಿ ಆಯ್ಕೆಗೊಂಡಿರುವ ದೇವಪ್ಪ ಅರಕೇರಿಯವರು ಕೂಡ ಈ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಪಾಲ್ಗೊಂಡು ಸನ್ಮಾನವನ್ನು ಸ್ವೀಕರಿಸಿ ಮಾತನಾಡಿ, ಸಂಘದ ಮತ್ತು ಸಮಾಜದ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುವುದಾಗಿ ಅವರು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್‌ನ ಅಧ್ಯಕ್ಷ ಜಿ.ಎಸ್.ಗೋನಾಳ ವಹಿಸಿದ್ದರು. ಉಪಾಧ್ಯಕ್ಷ ಮಹಾಂತಗೌಡ್ರ ಪಾಟೀಲ್ ಸೇರಿದಂತೆ ಆಡಳಿತ ಮಂಡಳಿಯ ನಿರ್ದೇಶಕರಾದ ಸಂಗಪ್ಪ ವಕ್ಕಳದ್, ಎಸ್.ಡಿ.ಡಂಬಳ, ಚಂದ್ರಕಾಂತ ಶಿಂಗಟಾಲೂರು, ವೆಂಕನಗೌಡ ಮೇಟಿ, ಶರಣಗೌಡ ಪಾಟೀಲ್, ವಿ.ಜಿ.ಯತ್ನಳ್ಳಿ, ವೆಂಕನಗೌಡ ಹಿರೇಗೌಡ ಸೇರಿದಂತೆ ವ್ಯವಸ್ಥಾಪಕ ಬಸವರಾಜ ರಾಮದುರ್ಗ, ವೆಂಕಾರೆಡ್ಡಿ, ಕೆಂಚರೆಡ್ಡಿ ಇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

Leave a Reply