fbpx

ಮಹಾನ್ ಆರ್ಥಿಕ ತಜ್ಞ ಬಸವೇಶ್ವರ – ಶರಣಬಸಪ್ಪ ಬಿಳಿಎಲಿ.

ಕೊಪ್ಪಳ-25-  ಶ್ರೀ ಬಸವೇಶ್ವರರು ಪ್ರತಿಪಾದಿಸಿದ  ಕಾಯಕ  ಮತ್ತು  ದಾಸೋಹ  ಸಿದ್ಧಾಂತವು  ಆರ್ಥಿಕ, ಆಧ್ಯಾತ್ಮಿಕ, ಸಾಮಾಜಿಕ, ನೈತಿಕ  ದೃಷ್ಠಿಯಿಂದ ಸರ್ವ ಶ್ರೇಷ್ಠ ಸಿದ್ದಾಂತವಾಗಿದೆ.  ಇವರು ಹೇಳಿದ  ಸತ್ಯ ಶುದ್ಧ  ಕಾಯಕದಿಂದ  ಮಾನಸಿಕ, ಬೌದ್ಧಿಕ, ಆರ್ಥಿಕ, ಸಾಮಾಜಿಕ  ಪ್ರತಿಫಲಗಳಿವೆ.  ಬಸವಣ್ಣನವರ  ಕಾಯಕ  ಪರಿಕಲ್ಪನೆಯಲ್ಲಿ  ಮೇಲು-ಕೀಳು, ಜಾತಿ-ಮತ, ಹಿರಿಯ-ಕಿರಿಯಗಳೆಂಬ  ಬೇದಭಾವವಿಲ್ಲ.  ಗುರು-ಲಿಂಗ ಜಂಗಮರಿಗೂ  ಕಾಯಕದಿಂದಲೇ  ಮುಕ್ತಿ ಎಂದು ಸಾರಿದ  ಬಸವಣ್ಣನವರು  ಮಹಾನ್ ಆರ್ಥಿಕ  ತಜ್ಞರು  ಎಂದು  ಶ್ರೀ ಗವಿಸಿದ್ಧೇಶ್ವರ  ಪದವಿ ಮಹಾವಿದ್ಯಾಲಯದ  ಅರ್ಥ ಶಾಸ್ತ್ರ ಪ್ರಾಧ್ಯಾಪಕರಾದ  ಶರಣಬಸಪ್ಪ  ಬಿಳಿಎಲಿಯವರು  ವಿಶ್ವ ಗುರು ಬಸವೇಶ್ವರ ಟ್ರಸ್ಟ್ ಆಯೋಜಿಸಿದ್ದ  ನಗರದ ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ವಚನ ಶ್ರಾವಣ ಮತ್ತು ವ್ಯಕ್ತಿತ್ವ ವಿಕಸನ  ಕಾರ್ಯಕ್ರಮದ  ಅತಿಥಿ ಉಪ

ನ್ಯಾಸಕರಾಗಿ ಮಾತನಾಡಿದರು. ಮುಂದುವರೆದು  ಮಾತನಾಡಿದ  ಇವರು  ಕಾಯಕ ತತ್ವ  ಅನುಸರಿಸಿದ  ಬಹುತೇಕ  ರಾಷ್ಟ್ರಗಳು ಮತ್ತು ವ್ಯಕ್ತಿಗಳು ಸಮೃದ್ಧರಾಗಿದ್ದಾರೆ.  ವಚನ  ಸಾಹಿತ್ಯ ಕೇವಲ  ಧಾರ್ಮಿಕ ಸಾಹಿತ್ಯವನ್ನಾಗಿ  ನೋಡದೆ ವ್ಯಕ್ತಿತ್ವ  ವಿಕಸನ ಸಾಹಿತ್ಯವೆಂದು  ಪರಿಗಣಿಸಿ ಅಧ್ಯಯನ  ಕೈಗೊಳ್ಳಿ ಎಂದರು.

ಪ್ರಾಸ್ತಾವಿಕವಾಗಿ ವಿಶ್ವಗುರು ಬಸವೇಶ್ವರ ಟ್ರಸ್ಟಿನ ಕಾರ್ಯದರ್ಶಿ ರಾಜೇಶ ಸಸಿಮಠ ಮಾತನಾಡಿ ಸತ್ಯ ಶುದ್ಧ  ಪ್ರಾಮಾಣಿಕ, ಸಮಾಜಮುಖಿ  ಜನನಾಯಕರು  ಇಂದಿನ ಅಗತ್ಯವಾಗಿದೆ.  ಇಂದಿನ ಹಲವಾರು ಸಮಸ್ಯೆಗಳಿಗೆ  ವಚನ ಸಾಹಿತ್ಯದಲ್ಲಿ  ಪರಿಹಾರವಿದೆ.  ಅಂಧಾನಕರಣೆ ಮಾಡದೆ  ವಚನಗಳನ್ನು  ಜೀವನದಲ್ಲಿ  ಅಳವಡಿಸಿಕೊಂಡರೆ  ವಿದ್ಯಾರ್ಥಿಗಳಲ್ಲಿ  ಸ್ವಂತಿಕೆ, ಸ್ವಾಭಿಮಾನ  ಹೆಚ್ಚುತ್ತದೆ  ಎಂದರು.  ವೇದಿಕೆಯ  ಮೇಲೆ ಉಪಸ್ಥಿತರಿದ್ದ   ಬಸವಯ್ಯ  ಸಸಿಮಠ ಅಲ್ಲಮಪ್ರಭುವಿನ ವಚನವನ್ನು  ವಿಶ್ಲೇಷಿಸಿದರು.   
ಕಾರ್ಯಕ್ರಮದ  ಅಧ್ಯಕ್ಷತೆ  ವಹಿಸಿ ಮಾತನಾಡಿದ  ಪ್ರಾಚಾರ್ಯರಾದ  ಪ್ರಭುರಾಜ ನಾಯಕರವರು  ಬಸವ ಸಾಹಿತ್ಯದಲ್ಲಿ ಕಾಯಕ, ದಾಸೋಹ, ಮಾನವಿಯತೆ ಸಾಮಾಜಿಕ ನ್ಯಾಯಗಳಂತಹ  ಹಲವಾರು ಜೀವನ ಮೌಲ್ಯಗಳಿಗೆ  ಬಸವೇಶ್ವರರ ವಚನಗಳು  ಸಂಕುಚಿತ ವ್ಯಾಪ್ತಿಯಲ್ಲಿರದೆ   ವಿಶಾಲ ತಳಹದಿಯ ಮೇಲೆ  ರಚಿತವಾಗಿವೆ  ಎಂದರು.  
ವೇದಿಕೆಯ ಮೇಲೆ  ಕನ್ನಡ ಪ್ರಾಧ್ಯಾಪಕ ಶಿವಪ್ರಸಾದ  ಹಾದಿಮನಿ ಉಪಸ್ಥಿತರಿದ್ದರು.  ಟ್ರಸ್ಟಿನ  ಹನುಮೇಶ ಕಲ್ಮಂಗಿ ಕಾರ್ಯಕ್ರಮ ನಿರೂಪಿಸಿದರು.
 
Please follow and like us:
error

Leave a Reply

error: Content is protected !!