ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆ ರೂ ೫೦,೦೦೦ ಪರಿಹಾರ ಧನ ವಿತರಣೆ

 ಕೊಪ್ಪಳ ತಾಲೂಕಿನ ವದಗನಾಳ ಗ್ರಾಮದ   ಹನುಮಗೌಡ ತಂದೆ ಫಕೀರಗೌಡ ಕರ್ಕಿಹಳ್ಳಿ ಇವರು ಹೊಲದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವಾಗ ಅಪಘಾತ ಹೊಂದಿ ಮರಣಹೊಂದಿದ್ದರಿಂದ ಮೃತರ ಪತ್ನಿಯಾದ ಶ್ರೀಮತಿ ಶಾಂತವ್ವ ಕರ್ಕಿಹಳ್ಳಿ ಸಾ: ವದಗನಾಳ ಇವರಿಗೆ ರೈತ ಸಂಜೀವಿನಿ ಅಪಘಾತ ವಿಮಾ ಯೋಜನೆಯಡಿಯಲ್ಲಿ ಮಂಜೂರಾದ ರೂ. ೫೦,೦೦೦-೦೦ ಗಳ ಪರಿಹಾರ ಧನದ ಚೆಕ್ಕನ್ನು ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷರಾದ  ಗವಿಸಿದ್ದಪ್ಪ ಮುದಗಲ್ ಇವರು ವಿತರಿಸಿದರು. ಆ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಶ್ರೀ ಹನುಮರಡ್ಡಿ ಹಂಗನಕಟ್ಟಿ,  ಶೇಕರಪ್ಪ ನಾಗರಳ್ಳಿ,   ಶಿವಲಿಂಗಪ್ಪ ತಿಪ್ಪನವರ,   ಫಕೀರಯ್ಯಾ ಹಿರೇಮಠ,   ನೀಲಪ್ಪ ಮೇಟಿ ಮತ್ತು   ಜಯಪ್ಪ ಕಂಚಿ ಹಾಗೂ ಕಾರ್ಯದರ್ಶಿಗಳಾದ   ವಿ.ಜಿ. ಹಿರೇಮಠರವರು ಹಾಜರಿದ್ದರು. 

Leave a Reply