ಹಿರೇಹಳ್ಳ ಎಡ ದಂಡೆ ಕಾಲುವೆಗೆ ನೀರು ಬಿಡುವ ಬಗ್ಗೆ ಮನವಿ.

ಕೊಪ್ಪಳ-14- ತಾಲೂಕ ಪಂಚಾಯತ ಸದಸ್ಯ ರಮೇಶ ಚೌಡಕಿ ನೇತೃತ್ವದಲ್ಲಿ ತಾಲೂಕಿನ ದೇವಲಾಪೂರ, ಕಲಕೇರಿ, ಚಿಲವಾಡಗಿ, ಓಜನಹಳ್ಳಿ ರೈತರು ಕೊಪ್ಪಳದ ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಿದ್ದರು.
 ನೀರಾವರಿ ಅಧಿಕಾರಿಗಳು ಎಡ ದಂಡೆ ಕಾಲುವೆಗೆ ನೀರು ಬಿಡಲು ತಾರ ತಮ್ಯ ಮಾಡುತ್ತಿದ್ದಿರಿ ನಿಮ್ಮ ನಿರ್ಲಕ್ಷತನದಿಂದ ಜಾನುವಾರಗಳಿಗೆ, ಪಶುಪಕ್ಷಿಗಳಿಗೆ. ಮೂಮದೆ ಇರುವ ರೈತರ ಜಮೀನುಗಳಿಗೆ ಸರಿಯಾಗಿ ನೀರು ಬರುತ್ತಿಲ್ಲ ಹಾಗೂ ಎಡದಂಡೆಯ ಎಲ್ಲಾ ಶಿಳು ಕಾಲುವೆಗಳಲ್ಲಿ ಗಿಡ ಗಂಟೆಗಳು ಬೆಳೆದು ಮಣ್ಣು ತುಂಬಿ ಹೋಗಿವೆ. ಆ ಶಿಳುಕಾಲುವೆಯ ಊಳನ್ನು ತೆಗೆಸಬೇಕು. ಈ ನಮ್ಮ ಬೇಡಿಕೆಗಳು ಮುಂಬರುವ ದಿನಗಳಲ್ಲಿ ಇಡೇರದಿದ್ದರೆ ಎಡ ದಂಡೆ ಬಾಗದ ಎಲ್ಲಾ ರೈತರು ತಾ. ಪಂ ಸದಸ್ಯ ರಮೇಶ ಚೌಡಕಿ ನೇತೃತ್ವದಲ್ಲಿ ತಮ್ಮ ನಿರಾವರಿ ಕಛೇರಿಗೆ ಬೀಗಾ ಹಾಕಿ ಉಗ್ರ ಹೋರಾಟ ಮಾಡಬೇಗುತ್ತದೆಂದು ಮನವಿ ಮೂಲಕ ಎಚ್ಚರಿಸಿದ್ದಾರೆ.

Leave a Reply