You are here
Home > Koppal News > ರಾಜ್ಯಮಟ್ಟದ ಕ್ರೀಯಾಶೀಲ ಶಿಕ್ಷಕರ ಶೈಕ್ಷಣಿಕ ಸಮಾವೇಶ.

ರಾಜ್ಯಮಟ್ಟದ ಕ್ರೀಯಾಶೀಲ ಶಿಕ್ಷಕರ ಶೈಕ್ಷಣಿಕ ಸಮಾವೇಶ.

ಕೊಪ್ಪಳ-22-  ಇತ್ತೀಚೆಗೆ ಕರ್ನಾಟಕ ರಾಜ್ಯ ಕ್ರೀಯಾಶೀಲ ಶಿಕ್ಷಕರ ವೇದಿಕೆ (ರಿ) ಬಳ್ಳಾರಿ ಜಿಲ್ಲಾ ಘಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕ್ರೀಯಾ ಶೀಲ ಶಿಕ್ಷಕರ ರಾಜ್ಯಮಟ್ಟದ ೨ ನೇ ಶೈಕ್ಷಣಿಕ ಸಮಾವೇಶದಲ್ಲಿ ಅಳವಂಡಿ ಗ್ರಾಮದ ಬಸವರಾಜ ಸಾರಂಗಮಠ ಇವರಿಗೆ ಯಲಬುರ್ಗಾ ತಾಲೂಕ ಕುದರಿಮೋತಿಯ ಸರಕಾರಿ ಹಿರಿಯ ಪ್ರಾಥಮಿಕಶಾಲೆಯಲ್ಲಿ ಸಲ್ಲಿಸಿದ ಉತ್ತಮ ಕ್ರೀಯಾಶೀಲ ಸೇವೆ ಮತ್ತು ಕಾರ್ಯದಕ್ಷತೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಕ್ರೀಯಾಶೀಲ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.
    ಈ ಸಭೆಯ ಅಧ್ಯಕ್ಷತೆಯನ್ನು ರಾಷ್ಟ್ರಪತಿ  ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಸಿ,ಎಮ್ ಗಂಘಾದರಯ್ಯಸ್ವಾಮಿ ವಹಿಸಿದ್ದರು. ಮುಖ್ಯ ಅತಿಥಿಗಾಳಗಿ ವಿಧಾನ ಪರಿಷತ್ತ ಸದಸ್ಯ ಅಮರನಾಥ ಪಾಟೀಲ,  ಮಾಜಿ ಜಿಲ್ಲಾ ಪಂಚಾಯತ ಉಪಾದ್ಯಕ್ಷ ಕೆ. ಎ. ರಾಮಲಿಂಗಪ್ಪ, ಮಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸುದಾಕರ ದೇಸಾಯಿ, ಕ್ರೀಯಾಶೀಲ ಶಿಕ್ಷಕರ ವೇದಿಕೆ ಗೌರವಾಧ್ಯಕ್ಷ ನಿಷ್ಠಿ ರುದ್ರಪ್ಪ, ಕೆ. ಬಸವರಾಜ, ಅಳವಂಡಿಗ್ರಾಮದ ಸುರೇಶ ದಾಸರಡ್ಡಿ, ಅನ್ವರ ಹುಸೇನ ಗಡಾದ, ಸಿದ್ದನಗೌಡ ಪಾಟೀಲ, ರವಿ, ನಾಗರಾಜ, ಹುಸೇನ್, ವಿಶ್ವನಾಥ, ಖಾದರಬಾಷಾ, ಸುರೇಶ ಮತ್ತು ಲಕ್ಕಪ್ಪ, ಲಿಂಗರಾಜ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave a Reply

Top