fbpx

ಕುಕನೂರು ಪಟ್ಟಣ ಪಂಚಾಯಿತಿ ವಾರ್ಡುಗಳ ವ್ಯಾಪ್ತಿ ನಿಗದಿ ಆಕ್ಷೇಪಣೆಗಳಿಗೆ ಆಹ್ವಾನ.

ಕೊಪ್ಪಳ,
ನ.೦೬ (ಕ ವಾ)  ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುಕನೂರು  ಪಟ್ಟಣ ಪಂಚಾಯಿತಿಯ
ಎಲ್ಲಾ ೧೯ ವಾರ್ಡುಗಳ ಪ್ರಸ್ತಾವಿತ ಕ್ಷೇತ್ರ ವಿಂಗಡಣೆ ಮಾಡಿ ಕರಡು ಅಧಿಸೂಚನೆ
ಹೊರಡಿಸಲಾಗಿದ್ದು, ವಿಂಗಡಣೆಯನ್ನು ಅಂತಿಮಗೊಳಿಸಲು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು
ಆಹ್ವಾನಿಸಲಾಗಿದೆ.
     ಕುಕನೂರು ಪಟ್ಟಣ ಪಂಚಾಯಿತಿಯನ್ನು ೨೦೧೧ ರ ಜನಗಣತಿ ಆಧಾರದ ಮೇರೆಗೆ ಕ್ಷೇತ್ರ ವಿಂಗಡಣೆ ಮಾಡಲಾಗಿದ್ದು, ವಿಂಗಡಣೆ ಮಾಡಲಾಗಿರುವ ವಿವರ ಈ ಕೆಳಗಿನಂತಿದೆ.
ವಾರ್ಡ್
ನಂ.೦೧ ರಲ್ಲಿ ರಾಯರೆಡ್ಡಿ ನಗರ, ಆಶ್ರಯ ನಗರ, ಹೆಚ್.ಜಿ.ರಾಮುಲು ನಗರ, ಆಶ್ರಯ ನಗರ
ಮಹಾಮಾಯಾ ಕಾಲೋನಿ, ಆಶ್ರಯ ನಗರ ಡಾ||ಬಾಬು ಜಗಜೀವನ್‌ರಾಂ ಕಾಲೋನಿ, ಡಾ||ರಾ.ಭೀ.ದೇಸಾಯಿ
ನಗರಗಳನ್ನು, ವಾರ್ಡ್ ನಂ.೦೨ ರಲ್ಲಿ ಬಸವೇಶ್ವರ ನಗರ, ನೇಕಾರ ಕಾಲೋನಿ, ವಿದ್ಯಾನಗರ,
ವಿದ್ಯಾನಂದ ಗುರುಕುಲ ಸಂಸ್ಥೆ, ಯತ್ನಟ್ಟಿಯವರ ಹೊಲ, ನೀರಿನ ಹೊಂಡ, ಮಠದ ಜಾಗೆ, ಶರಣಪ್ಪ
ಅರಕೇರಿ ಡಿಕಾಟಿಕೇಟರ್, ಶರಣಪ್ಪ ಆಯಿಲ್‌ಮಿಲ್, ಅರಕೇರಿ ಆಯಿಲ್‌ಮಿಲ್, ಅರಕೇರಿ
ಆಯಿಲ್‌ಮಿಲ್, ಸರ್ವೇ ನಂ.೫೭, ವಾರ್ಡ್ ನಂ.೦೩ ರಲ್ಲಿ ತೆಕ್ಕೇದ ಮಸೂದಿ, ಅನ್ನದಾನೇಶ್ವರ
ನಗರ ಭಾಗಶಃ, ವಾರ್ಡ್ ನಂ.೦೪ ರಲ್ಲಿ ಕಳ್ಳಿಮಠದ ಓಣಿ, ಅನ್ನದಾನೇಶ್ವರ ನಗರ ಉಳಿದ ಭಾಗ,
ನಂ.೦೫ ರಲ್ಲಿ ಬ್ರಾಹ್ಮಣರ ಓಣಿ, ಮಹಾಮಾಯಾ ದೇವಸ್ಥಾನ ಪ್ರದೇಶ, ವಾರ್ಡ್ ನಂ.೦೬ ರಲ್ಲಿ
ಕಿಲ್ಲೇದ ಓಣಿ, ನಂ.೦೭ ರಲ್ಲಿ ಕೋಳಿಪೇಟಿ, ಕುರ್ತುಕೋಟಿ ನಗರ, ಹಿಮಾಲಯ ಚಿತ್ರಮಂದಿರ
ವ್ಯಾಪ್ತಿ, ವಾರ್ಡ್ ನಂ.೦೮ ರಲ್ಲಿ ಮೋಚಿಯವರ ಓಣಿ, ಭಜೆಂತ್ರಿಯವರ ಓಣಿ, ಕಂಬಳಿಯವರ ಓಣಿ,
ಅಂಬೇಡ್ಕರ್ ಕಾಲೋನಿ, ಹೆಂಡದಗೇರಿ ಓಣಿ, ವಾರ್ಡ್ ನಂ.೦೯ ರಲ್ಲಿ ಇಟಗಿ ಮಸೂತಿ ಹತ್ತಿರ,
ಕುರಿಯವರ ಓಣಿ, ಹಟ್ಟಿಯವರ ಓಣಿ, ಹಣಜಗೇರಿಯವರ ಓಣಿ, ಹೆಂಡದಗೇರಿ ಓಣಿ, ಯಮನೂರಪ್ಪ ದರ್ಗಾ
ಭಾಗಶಃ, ವಾರ್ಡ್ ನಂ.೧೦ ರಲ್ಲಿ ಜೈನಮಠ, ಗುದ್ನೆಪ್ಪನ ಗುಡಿ, ಚಾಂದಬಾವಿಯವರ ಓಣಿ,
ಕರಿಯಮ್ಮನ ಗುಡಿ ಪ್ರದೇಶಗಳನ್ನು ಸೇರಿಸಲಾಗಿದೆ.
     ವಾರ್ಡ್ ನಂ.೧೧ ರಲ್ಲಿ
ಹೆಂಡದಗೇರಿ ಓಣಿ ಭಾಗಶಃ, ವಡ್ಡರ ಓಣಿ, ಯಮನೂರಪ್ಪ ದರ್ಗಾ ವ್ಯಾಪ್ತಿ, ಕವಲೂರ ಓಣಿ,
ವಾರ್ಡ್ ನಂ.೧೨ ರಲ್ಲಿ ಗಾಂಧಿ ನಗರ, ವಾರ್ಡ್ ನಂ.೧೩ ರಲ್ಲಿ ಸಂಜಯ ನಗರ, ದೇವಿ ನಗರ,
ಗಣೇಶನಗರ, ನೆಹರು ನಗರ, ವಾರ್ಡ್ ನಂ.೧೪ ರಲ್ಲಿ ವಿನೋಬ ನಗರ, ವಾರ್ಡ್ ನಂ.೧೫ ರಲ್ಲಿ
ವಿನೋಬ ನಗರ ಭಾಗಶಃ, ಇಂದ್ರಾನಗರ, ವಾರ್ಡ್ ನಂ.೧೬ ರಲ್ಲಿ ಗವಿಸಿದ್ಧೇಶ್ವರ ನಗರ,
ನೃಪತುಂಗ ನಗರ, ಸರ್ಕಾರಿ ಆಸ್ಪತ್ರೆ, ನಾಡ ತಹಶೀಲ್ದಾರರ ಕಾರ್ಯಾಲಯ, ಪಟ್ಟಣ ಪಂಚಾಯತ್
ಕಾರ್ಯಾಲಯ, ವಾರ್ಡ್ ನಂ.೧೭ ರಲ್ಲಿ ಮಹಾಮಾಯಾ ನಗರ, ಕನಕ ಕಾಲೋನಿ, ಕುಂತಳ ನಗರ,
ಆರೋಗ್ಯನಗರ, ವಿದ್ಯಾಶ್ರೀ ಶಾಲೆ, ಈದ್ಗಾ ಪ್ರದೇಶ, ಖಬರಸ್ಥಾನ, ಟಿಎಂಕೆ ಆಯಿಲ್
ಪ್ರದೇಶಗಳು, ವಾರ್ಡ್ ನಂ.೧೮ ರಲ್ಲಿ ಕಲ್ಲೇಶ್ವರ ನಗರ, ದತ್ತಕಾಲೋನಿ, ಪ್ರಶಾಂತ ನಗರ,
ರಾಧಾಕೃಷ್ಣ ಕಾಲೋನಿ, ಟೀಚರ್‍ಸ್ ಕಾಲೋನಿ, ರಾಧಾಸ್ವಾಮಿ ಕಾಲೋನಿ, ಚನ್ನಬಸವೇಶ್ವರ
ಕಾಲೋನಿ, ಯಕ್ಲಾಸಪೂರ ಬಡಾವಣೆ, ಜೈನ ಕಾಲೋನಿ, ಸಂಗೊಳ್ಳಿ ರಾಯಣ್ಣ ಕಾಲೋನಿ, ವಾಲ್ಮೀಕಿ
ನಗರ, ಎ.ಪಿ.ಎಮ್.ಸಿ, ವಾರ್ಡ್ ನಂ.೧೯ ರಲ್ಲಿ ಗುದ್ನೆಪ್ಪನ ಮಠ, ಲಿಂಗಾಯತರ ಓಣಿ, ವಡ್ಡರ
ಓಣಿ, ನವೋದಯ ಶಾಲೆ ಪ್ರದೇಶಗಳನ್ನು ಸೇರಿಸಿ, ಈ ರೀತಿಯಾಗಿ ಕ್ಷೇತ್ರ ವಿಂಗಡಗಣೆ
ಮಾಡಲಾಗಿದೆ.
     ಕರಡು ಅಧಿಸೂಚನೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಕೊಪ್ಪಳ,
ಸಹಾಯಕ ಆಯುಕ್ತರ ಕಚೇರಿ, ಕೊಪ್ಪಳ, ತಹಸಿಲ್ದಾರರ ಕಚೇರಿ, ಯಲಬುರ್ಗಾ ಹಾಗೂ ಪಟ್ಟಣ
ಪಂಚಾಯಿತಿ ಕುಕನೂರು  ಕಾರ್ಯಾಲಯದ ನೋಟಿಸ್ ಫಲಕದಲ್ಲಿ ಪ್ರಚುರಪಡಿಸಲಾಗಿದೆ. ವಾರ್ಡುಗಳ
ವಿಂಗಡಣೆ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕರಲ್ಲಿ
ಯಾವುದೇ ಆಕ್ಷೇಪಣೆಗಳು ಅಥವಾ ಸಲಹೆ, ಸೂಚನೆಗಳು ಇದ್ದಲ್ಲಿ, ಸೂಕ್ತ ದಾಖಲಾತಿಗಳೊಂದಿಗೆ
ಲಿಖಿತ ರೂಪದಲ್ಲಿ ತಮ್ಮ ಪೂರ್ಣ ವಿಳಾಸದೊಂದಿಗೆ ಕೊಪ್ಪಳ ಉಪವಿಭಾಗಾಧಿಕಾರಿಗಳ ಕಛೇರಿಗೆ
ನವೆಂಬರ್.೧೮ ರೊಳಗಾಗಿ ಸಲ್ಲಿಸಬಹುದಾಗಿದೆ. ನಂತರ ಬಂದಂತಹ ಆಕ್ಷೇಪಣೆಗಳನ್ನು
ಪರಿಗಣಿಸಲಾಗುವುದಿಲ್ಲ ಎಂದು ಉಪವಿಭಾಗಾಧಿಕಾರಿ ಇಸ್ಮಾಯಿಲ್‌ಸಾಹೇಬ್ ಶಿರಹಟ್ಟಿ ಅವರು
ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!