ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಯೇ ನನ್ನ ಗುರಿ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ-೦೧, ಸೋಮವಾರ- ಕೊಪ್ಪಳ ಕ್ಷೇತ್ರದ ತುಂಗಭದ್ರ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಲಿಂಗದಳ್ಳಿ ಶಾಹಪೂರು, ಮಟ್ಟಿ ಮುದ್ಲಾಪೂರ, ಹಿಟ್ನಾಳ, ಬೇವಿನಹಳ್ಳಿ, ಗ್ರಾಮಗಳಲ್ಲಿ ಎಸ್.ಸಿ.ಪಿ-ಟಿ.ಎಸ್.ಪಿ. ೨೦೧೪-೧೫ನೇ ಅನುದಾನದ ಅಡಿಯೋಜನೆಯಲ್ಲಿ ಸುಮಾರು ಅಂದಾಜು ಮೊತ್ತ- ರೂ.೯೯.೦೦ ಲಕ್ಷದ ಸಿಸಿ ರಸ್ತೆ ಮತ್ತು ಚರಂಡಿಕಾಮಗಾರಿಗಳ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಗ್ರಾಮವಿಕಾಸ ಯೋಜನೆಯಡಿಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ರಸ್ತೆ ಚರಂಡಿ ಶುದ್ದ ಕುಡಿಯುವ ನೀರಿನ ಘಟಕ ಸಮುದಾಯ ಭವನ ಶಾಲೆಗಳನ್ನು ನಿರ್ಮಿಸಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿ ಕೊಪ್ಪಳ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಹೊಂದಲು ಪ್ರಮಾಣಿಕ ಪ್ರಯತ್ನ ಮಾಡುವೆನು. ಶೀಘ್ರವೇ ಬರುವ ದಿನಗಳಲ್ಲಿ ಅಳವಂಡಿ-ಬೇಟಗೇರಿ ಗ್ರಾಮಗಳ ಏತ ನೀರಾವರಿ ಯೋಜನೆಗಳ ಶಂಕು ಸ್ಥಾಪನೆ ನೇರವೇರಿಸಲಾಗುವುದು. ಈಗಾಗಲೇ ಯತ್ನಟ್ಟಿ ಮತ್ತು ಹಿರೇಸಿಂದೋಗಿಯ ಚನ್ನಾಳ ಹಳ್ಳದ ಸೇತುವೆ ಕಾಮಗಾರಿಗಳು ತಿರ್ವಗತಿಯಲ್ಲಿ ಕಾರಾರ‍್ಯಂಬಿಸಿವೆ. ಅಭಿವೃದ್ದಿ ಕಾಮಗಾರಿಗಳಿಗೆ ಪ್ರತಿಯೋಬ್ಬರು ಕೈಜೋಡಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಟಿ.ಜನಾರ್ಧನ ಹುಲಗಿ, ಕೆ.ರಮೇಶ ಹಿಟ್ನಾಳ, ಗವಿಸಿದ್ದಪ್ಪ ಮುದುಗಲ್, ಯಂಕಪ್ಪ ಹೊಸಳ್ಳಿ, ಭರಮಪ್ಪ ಬೇಲ್ಲದ್, ಬಾಬು ಗೌಡ ಪಾಟೀಲ, ಬಾಲಚಂದರ್ ಮುನಿರಾಬಾದ್, ಗೌಸ್ ಮುನಿರಾಬಾದ್, ಬಾನುಬೇಗಂ, ಅಶೋಕ ಇಳಿಗೇರ, ವೀರಣ್ಣ ಹುಲಗಿ, ಜೀಯಾವುದ್ದಿನ್ ಹುಲಗಿ, ರವಿ ಮುನಿರಾಬಾದ್, ಪದ್ಮಾ ಡೇವಿಡ್, ಮಂಜುನಾಥ ಅಡಗಿ, ಕೃಷ್ಣಪ್ಪ ಮಡಿ, ಬಡವಪ್ಪ ಲಿಂಗದಳ್ಳಿ, ರಮೇಶ, ಅಸ್ಗರ್‌ಅಲಿ ಹಿಟ್ನಾಳ, ವಕ್ತಾರ ಅಕ್ಬರ ಪಾಷಾ ಪಲ್ಟಾನ, ಗ್ರಾಮಪಂಚಾಯತಿಯ ಅಧ್ಯಕ್ಷರು, ಸರ್ವಸದಸ್ಯರು ಹಾಗೂ ಗುತ್ತಿಗೆದಾರರಾದ ಇನಾಯತ್‌ಖಾನ್ ಮುನಿರಾಬಾದ, ವಲಿಸಾಬ್,ಅಭಿಯಂತರರಾದ ಆರ್.ಬಸಪ್ಪ ಉಪಸ್ತಿತರಿದ್ದರು.

Leave a Reply