ಮೇ ೧೧, ೧೨, ೧೩ ರಂದು ರಕ್ತದಾನ ಶಿಬಿರ

  ಕೊಪ್ಪಳ. ಜಿಲ್ಲೆಯ ಹುಲಗಿ, ಹಾಗೂ ಕುಷ್ಟಗಿ ತಾಲೂಕಿನ ಹನಮನಾಳ ಗ್ರಾಮದಲ್ಲಿ ಏಪ್ರಿಲ್ ೧೧, ೧೨, ೧೩ ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಹುಲಗಿ – ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿ ದಿ. ೧೧  ಮತ್ತು ೧೨ ರಂದು ಸೋಮವಾರ ಮತ್ತು ಮಂಗಳವಾರ ಜನನಿ ಸುರಕ್ಷಾ ಅಭಿಯಾನ ಕರ್ನಾಟಕದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ದೇವಸ್ಥಾನದ ಆವರಣದಲ್ಲಿ ಅಂದು ಬೆಳಿಗ್ಗೆ ೦೯ ರಿಂದ ೦೪ ಗಂಟೆಯವರೆಗೆ ಜರುಗಲಿದೆ. 
ಹನಮನಾಳ – ಕುಷ್ಟಗಿ ತಾಲೂಕಿನ ಹನಮನಾಳ ಗ್ರಾಮದಲ್ಲಿ ದಿ. ೧೨ ರಂದು ಬುಧವಾರ ಬೆಳಿಗ್ಗೆ ೧೦ ರಿಂದ ೦೪ ಗಂಟೆಯವರೆಗೆ ಐ. ಸಿ. ಟಿ. ಸಿ. ಘಟಕದ ವತಿಯಿಂದ ಐ. ಸಿ. ಟಿ. ಸಿ. ಘಟಕದ ಕ್ಯಾಂಪಸ್‌ನಲ್ಲಿ ಶಿಬಿರ ಆಯೋಜಿಸಲಾಗಿದೆ.
ಹುಲಗಿ – ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಲ್ಲಿ ದಿ. ೧೩ ರಂದು ಬುಧವಾರ ದಿ ಆರ್ಟ್ ಆಫ್ ಲಿವಿಂಗ್ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ದೇವಸ್ಥಾನದ ಆವರಣದಲ್ಲಿ ಅಂದು ಬೆಳಿಗ್ಗೆ ೦೯ ರಿಂದ ೦೪ ಗಂಟೆಯವರೆಗೆ ಜರುಗಲಿದೆ. 
ಎಲ್ಲಾ ಶಿಬಿರಗಳಲ್ಲಿ ಆಸಕ್ತರು ರಕ್ತದಾನ ಮಾಡಿ ಸಹಕರಿಸುವಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ   ಕೋರಿದ್ದಾರೆ
Please follow and like us:
error