೧೦೦. ೬೮ ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಜಿ.ಪಂ. ಅನುಮೋದನೆ.

ಕೊಪ್ಪಳ ಜು. ೧೪  ಜಿಲ್ಲಾ ಪಂಚಾಯತಿಯಿಂದ ಅನುಷ್ಠಾನಗೊಳಿಸಲಾಗುವ ೨೦೧೫-೧೬ ಸಾಲಿನ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ  ೧೦೦. ೬೮ ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಕೊಪ್ಪಳ ಜಿಲ್ಲಾ ಪಂಚಾಯತ್ ಅನುಮೋದನೆ ನೀಡಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಮರೇಶ್ ಕುಳಗಿ ಅವರು ಹೇಳಿದರು.  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ  ಮಂಗಳವಾರದಂದು ಏರ್ಪಡಿಸಲಾಗಿದ್ದ ಜಿ.ಪಂ. ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.

ಪ್ರಸಕ್ತ ಸಾಲಿನ ರೂ. ೧೦೦೬೮. ೮೦ ಲಕ್ಷ ರೂ.ಗಳ ಕ್ರಿಯಾ ಯೋಜನೆಯಲ್ಲಿ ರಾಜ್ಯದ ಪಾಲಿನ ಮೊತ್ತ ೯೧೬೨. ೭೧ ಲಕ್ಷ ರೂ. ಗಳಾಗಿದ್ದರೆ, ಕೇಂದ್ರ ಪಾಲು ೯೦೬. ೦೯ ಲಕ್ಷ ರೂ.ಗಳು.   ಈ ಬಾರಿಯ ಕ್ರಿಯಾ ಯೋಜನೆಯಲ್ಲಿ ಜಿಲ್ಲಾ ಪಂಚಾಯತ್ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದು ಒಟ್ಟು ೪೮೭೨. ೦೫ ಲಕ್ಷ ರೂ.ಗಳನ್ನು ಕಾಯ್ದಿರಿಸಿದೆ.  ಈ ಪೈಕಿ ರಾಜ್ಯದ ಪಾಲು ೪೬೮೨. ೦೫ ಲಕ್ಷ ಹಾಗೂ ಕೇಂದ್ರದ್ದು ೧೦ ಲಕ್ಷ ರೂ.ಗಳು.   ಪ್ರಸಕ್ತ ವರ್ಷದ ಕ್ರಿಯಾ ಯೋಜನೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನಿಗದಿಪಡಿಸಲಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ೯೦೧. ೫೩ ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ- ೫೯೨. ೯೩ ಲಕ್ಷ, ಸಮಾಜ ಕಲ್ಯಾಣ- ೬೨೩. ೮೮ ಲಕ್ಷ, ಮಹಿಳಾ ಮತ್ತು ಮಕ್ಕಳ ಕಲ್ಯಾಣ- ೮೫೧. ೯೭ ಲಕ್ಷ, ರಸ್ತೆ ಮತ್ತು ಸೇತುವೆಗಳ ನಿರ್ಮಾಣ- ೧೭೮ ಲಕ್ಷ, ಕೃಷಿ ಇಲಾಖೆ- ೬೭. ೯೨ ಲಕ್ಷ, ವೈದ್ಯಕೀಯ ಮತ್ತು ಜನಾರೋಗ್ಯ ಸೇವೆಗಳು- ೯೬೪ ಲಕ್ಷ, ಅಲ್ಪಸಂಖ್ಯಾತರ ಕಲ್ಯಾಣ- ೧೨೫. ೧೯ ಲಕ್ಷ, ಅರಣ್ಯ ಇಲಾಖೆ-೧೬೦ ಲಕ್ಷ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್- ೮೫ ಲಕ್ಷ, ಪಶು ಸಂಗೋಪನೆ- ೬೪. ೨೦ ಲಕ್ಷ, ತೋಟಗಾರಿಕೆ ಇಲಾಖೆ- ೮೯. ೯೯ ಲಕ್ಷ, ಮೀನುಗಾರಿಕೆಗೆ- ೧೮ ಲಕ್ಷ, ಯುವಜನ ಸೇವಾ ಮತ್ತು ಕ್ರೀಡೆಗೆ- ೪೬. ೧೬ ಲಕ್ಷ, ಗ್ರಾಮೀಣ ಇಂಧನ ಕಾರ್ಯಕ್ರಮಕ್ಕೆ- ೪೦ ಲಕ್ಷ, ಕೈಗಾರಿಕೆ- ೧೪ ಲಕ್ಷ, ವಯಸ್ಕರ ಶಿಕ್ಷಣ- ೧೦ ಲಕ್ಷ, ಆಯುಷ್- ೧೫ ಲಕ್ಷ, ಸಹಕಾರ- ೯. ೬೮ ಲಕ್ಷ, ಪಂಚಾಯತ್ ಸಂಸ್ಥೆಗಳಿಗೆ ಅನುದಾನ- ೨೬೩. ೨೦ ಲಕ್ಷ, ರೇಷ್ಮೆ- ೧೧ ಲಕ್ಷ, ವಿಜ್ಞಾನ ಮತ್ತು ತಂತ್ರಜ್ಞಾನ- ೫ ಲಕ್ಷ, ಅಂಗವಿಕಲರ ಕಲ್ಯಾಣ- ೨೭ ಲಕ್ಷ, ಕನ್ನಡ ಮತ್ತು ಸಂಸ್ಕೃತಿ- ೦೩ ಲಕ್ಷ, ಕೃಷಿ ಮಾರುಕಟ್ಟೆ- ೧೦ ಲಕ್ಷ, ಕೈಮಗ್ಗ- ೯. ೧೦ ಲಕ್ಷ ರೂ. ಅನುದಾನವನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಹೇಳಿದರು.
ಜಿ.ಪಂ. ಮುಖ್ಯ ಯೋಜನಾಧಿಕಾರಿ ಲಿಂಗಪ್ಪ ಮಾದರ್ ಅವರು ಮಾತನಾಡಿ, ಪ್ರಸಕ್ತ ಸಾಲಿಗಾಗಿ ಕೊಪ್ಪಳ ಜಿಲ್ಲೆಗೆ ಯೋಜನಾ ಕಾರ್ಯಕ್ರಮಗಳ ಅನುದಾನವನ್ನು  ಪ್ರಸ್ತುತ ಬೇಡಿಕೆ ಹಾಗೂ ಸರ್ಕಾರದ ಮಾರ್ಗಸೂಚಿ ಅನ್ವಯ ಜಿ.ಪಂ. ಕಾರ್ಯಕ್ರಮಗಳಿಗೆ ಇಲಾಖಾವಾರು ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ವಿನಯಕುಮಾರ್ ಮೇಲಿನಮನಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ವೀರೇಶ್ ಸಾಲೋಣಿ, ಅರವಿಂದಗೌಡ ಪಾಟಿಲ್, ಪರಸಪ್ಪ ಕತ್ತಿ ಸೇರಿದಂತೆ ಜಿ.ಪಂ. ಸದಸ್ಯರುಗಳು, ತಾಲೂಕು ಪಂಚಾಯತಿ ಅಧ್ಯಕ್ಷರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಭಾಗವಹಿಸಿದ್ದರು.
Please follow and like us:
error

Related posts

Leave a Comment