ನ್ಯಾಯವಾದಿ ಜಾಲಿಹಾಳ ನಿಧನಕ್ಕೆ ಹಲವರಿಂದ ತೀವ್ರ ಶೋಕ

 ಜಿಲ್ಲೆಯ ಹಿರಿಯ ನ್ಯಾಯವಾದಿ ಯಲಬುರ್ಗಾ ಪಟ್ಟಣದ ನಿವಾಸಿ ಎಂ.ಎಂ.ಜಾಲಿಹಾಳ(ಮೊಹಮದ್ ಮೈನೂದೀನ್ ಜಾಲಿಹಾಳ) ವಯಸ್ಸು(೬೫)ರವರು  ಇತ್ತೀಚಿಗಷ್ಟೆ ನಿಧನ ಹೊಂದಿದ್ದು ಅವರ ನಿಧನಕ್ಕೆ ಜಿಲ್ಲೆಯ ಹಲವು ಸಂಘಟನೆಗಳು ತೀವ್ರ  ಶೋಕ ಸಂತಾಪ ವ್ಯಕ್ತಪಡಿಸಿ ಮೃತರ ಆತ್ಮಕೆ ಶಾಂತಿ ಕೋರಿದ್ದಾರೆ ಅವರ ಕುಟುಂಬ ವರ್ಗಕ್ಕೆ ದುಖಃ ಸಹಿಸುವ ಶಕ್ತಿ ಆ ಅಲ್ಲಾಹನು ದಯಪಾಲಿಸಲೆಂದು ಪ್ರಾರ್ಥಿಸಿದ್ದಾರೆ.
  ಮೃತರಾದ ಎಂ.ಎಂ.ಜಾಲಿಹಾಳ ರವರು ತಮ್ಮ ಹಿಂದೆ ಹೆಂಡತಿ, ಮೂರುಜನ ಗಂಡು ಮಕ್ಕಳು ಓರ್ವ ಹೆಣ್ಣುಮಗಳು ಮತ್ತು ಓರ್ವ ಅಳಿಯ ಸೇರಿದಂತೆ ಅಪಾರ ಸಂಖ್ಯೆಯ ಬಂಧುಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಮಗಳಾದ ಶ್ರೀಮತಿ ರೇಷ್ಮಾ ಗಂ.ಅಲ್ಲಾಬಕ್ಷಿ ಇಳಿಯಾಲ ರವರು ಕೊಪ್ಪಳದ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಟ್ರಸ್ಟಿಯಾಗಿದ್ದು ಮಿಲ್ಲತ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಸದಸ್ಯರಾಗಿದ್ದಾರೆ ಹಾಗೂ ಅವರ ಅಳಿಯ ಅಲ್ಲಾಬಕ್ಷ ಇಳಿಯಾಳರವರು ಜೆಸ್ಕಾಂ ನಲ್ಲಿ ಸಹಾಯಕ ಅಭಿಯಂತರಾಗಿ ಗಂಗಾವತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 
  ಎಂ.ಎಂ.ಜಾಲಿಹಾಳ ರವರು ಹಿರಿಯ ನ್ಯಾಯವಾದಿ ದಿ.ಹಾಜೀ ಎಸ್,ಎ.ಕಬೀರ ರವರ ಶಿಷ್ಯರ ಬಳಗದಲ್ಲಿ ಪ್ರಮುಖರಾಗಿದ್ದರು ಇವರ ನಿಧನಕ್ಕೆ ಅವರ ಸ್ನೇಹಿತರ ಬಳಗದ ನ್ಯಾಯವಾದಿ ಎಸ್.ಆಸೀಫ್ ಅಲಿ, ಪೀರಾ ಹುಸೇನ್ ಹೊಸಳ್ಳಿ, ನಗರಸಭೆಯ ಉಪಾಧ್ಯಕ್ಷ ಅಮ್ಜದ್ ಪಟೇಲ್, ಅಜುಮ್ ಕಮೀಟಿಯ ಅಧ್ಯಕ್ಷ ಎಮ್.ಪಾಷಾ ಕಾಟನ್,  ಟಿಪ್ಪು ಸುಲ್ತಾನ ಕಮೀಟಿ ಅಧ್ಯಕ್ಷ ಜಿಲಾನ್ ಕೊಲ್ಲೇದಾರ, ಜಿಲ್ಲಾ ಕಾರ್ಯನಿರತ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸಾದಿಕ್‌ಅಲಿ ಸೇರಿದಂತೆ ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳು ಪಂಚ ಕಮೀಟಿಯ ಪದಾಧಿಕಾರಿಗಳು ಮತ್ತು ಅಹಮ್ಮದ ಹುಸೇನ ಮುದಗಲ್ಲ(ಆಹ್ಮದ್ ಮೇಸ್ತ್ರಿ) ಮತಿತರರು ತೀವ್ರ ಶೋಕ ಸಂತಾಪ ವ್ಯಕ್ತಪಡಿಸಿದ್ದಾರೆ.
Please follow and like us:
error

Related posts

Leave a Comment