fbpx

ರಾಜೂರ ಶ್ರೀ ಕ್ಷೇತ್ರದಲ್ಲಿ ಶ್ರೀಪುರಂಧರ ದಾಸವರೈಣ್ಯರ ಜಯಂತಿ

 

ಯಲಬುರ್ಗಾ ತಾಲೂಕಿನ ಕುಕನೂರು ಹತ್ತಿರದ ಶರಣಬಸವೇಶ್ವರ ಸುಕ್ಷೇತ್ರ ರಾಜೂರಲ್ಲಿ ಪೂಜ್ಯ ಶ್ರೀ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ದಾಸೋಹಮಠ ಅಡ್ನೂರ-ರಾಜೂರ ಶ್ರೀಕ್ಷೇತ್ರದ ಅಧಿಪತಿಗಳಾದ ಇವರ ನೇತೃತ್ವದಲ್ಲಿ ೨೮ ನೇ ವರ್ಷದ ಶ್ರೀ ಶರಣಬಸವೇಶ್ವರರ ರಥ ಸಪ್ತಮಿಯ ಜಾತ್ರಾ ಮಹೋತ್ಸವ ೭೧ ನೇ ವರ್ಷದ ಪುರಾಣ ಪ್ರವಚನದ ಮಹಾಮಂಗಲೋತ್ಸವವು, ಸಾಮಾಹಿಕ ವಿವಾಹಗಳು, ಶ್ರೀ ಬಸವೇಶ್ವರರ ಜಯಂತಿ ಶತಮಾನೋತ್ಸವ ಸಮಾರಂಭಗಳು ಸಂಭ್ರಮದಲ್ಲಿ ಜರುಗುತ್ತವೆ.

ದಿನಾಂಕ ೧೨-೦೧-೨೦೧೫ ರಿಂದ ೨೭-೦೧-೨೦೧೫ ರ ತನಕ ಪೂಜ್ಯ ಶ್ರೀಗಳ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ, ಸಾಮಾಜಿಕ, ವಿಧಾಯಕ ಕಾರ್ಯಕ್ರಮಗಳು ನಡೆಯುತ್ತಿವೆ. ಈಗಾಗಲೇ ಶ್ರೀ ಸ್ವಾಮಿ ವಿವೇಕಾನಂದರ ೧೫೨ ನೇ ಜಯಂತಿ ಉತ್ಸವ, ಶ್ರೀ ಸೊನ್ನಲಗಿ ಸಿದ್ಧರಾಮರ ಜಯಂತಿ, ಉಣಕಲ್ಲ ಶ್ರೀ ಸಿದ್ದೇಶ್ವರ ಸ್ಮರಣೆ, ಶ್ರೀ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮಗಳ ಪೂಜ್ಯರ, ಗಣ್ಯರ ಸಮ್ಮುಖದಲ್ಲಿ ಜರುಗಿವೆ. 
೨೦ ರಂದು ಮಂಗಳವಾರ ಶ್ರೀ ಕ್ಷೇತ್ರದಲ್ಲಿ ಬೆದವಟ್ಟಿ ಶ್ರೀ ಶಿವಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿದ ಸಮಾರಂಭದಲ್ಲಿ ಪ್ರಭುಸ್ವಾಮಿ ಸಂಗಯ್ಯ ಹಿರೇಮಠ ಅಡವಿಭಾವಿ ತಾಂಡೆ ಇವರು ಉಪದೇಶ ನೀಡಿ ಮಾತನಾಡುತ್ತಾ ಪುರಂದರದಾಸರು ಜೀವನದಲ್ಲಿ ಪರಿವರ್ತನೆ ಆದ ಬಗ್ಗೆ ಮಾತನಾಡಿದರು. ಸಿ.ಹೆಚ್. ಪೊಲೀಸ್ ಪಾಟೀಲ್ ಮಾಜಿ ಜಿ.ಪಂ. ಸದಸ್ಯರು, ಪವನಕುಮಾರ ಗುಂಡೂರ ಉಪನ್ಯಾಸಕರು ಪುರಂದರದಾಸರ ದಾಸ ಸಾಹಿತ್ಯ ಕುರಿತು ವಿವರಣೆ ನೀಡಿದರು.
ಇಂದು ಪೂಜ್ಯ ಶ್ರೀ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ೭೦ ನೇ ಜನ್ಮದಿನೋತ್ಸವ ಆಚರಣೆ ತುಲಾಭಾರ ಸೇವೆ, ಹಿರಿಯರ ವರ್ಷೋತ್ಸವಗಳು ಜರುಗಿದವು. ಕುಕನೂರಿನ ರಂಗರಾವ್ ನೀಡಗುಂದಿ, ಹನುಮಂತ ಮಳಲಿ, ಎಸ್.ಎಸ್. ರಾಜೂರ ಉಪನ್ಯಾಸ ನೀಡಿದರು. ಉಮೇಶ, ಅಕ್ಕಮಹಾದೇವಿ, ಸುರ್ತಾನಿ ಶಾಸ್ತ್ರೀಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. 
ಇದೇ ದಿನಾಂಕ ೨೨ ರಂದು ಸಂಜೆ ವೇಳೆಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಮತ್ತು ಸ್ವಚ್ಛತಾ ಆಂದೋಲನಾ ಪೂಜ್ಯ  ಶ್ರೀ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳ ರಾಜೂರ-ಅಡ್ನೂರ-ಗದಗ ಇವರ ಅಧ್ಯಕ್ಷತೆಯಲ್ಲಿ ಗೌರವಾನ್ವಿತ ಯಶವಂತ ತಾವರೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ತಾಲೂಕ ಕಾನೂನು ಸೇವಾ ಸಮಿತಿ ಯಲಬುರ್ಗಾ ಇವರಿಂದ ಉದ್ಘಾಟನೆ ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ಕಿರಣಕುಮಾರ ಡಿ. ವಡಗೇರಿ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ತಾಲೂಕ ಕಾನೂನು ಸೇವಾ ಸಮಿತಿ ಯಲಬುರ್ಗಾ, ನಾಗರಾಜ ಕಮ್ಮಾರ ಸಿಪಿಐ ಯಲಬುರ್ಗಾ, ಆರ್.ಜಿ. ನಿಂಗೋಜಿ ಅಧ್ಯಕ್ಷರು ನ್ಯಾಯವಾದಿಗಳ ಸಂಘ ಯಲಬುರ್ಗಾ, ಎ.ಐ. ಹಾದಿಮನಿ ಸಹಾಯಕ ಸರಕಾರಿ ಅಭಿಯೋಜಕರು ಯಲಬುರ್ಗಾ ಹಾಗೂ ಎಸ್.ಎಸ್. ನಾಯಕ ಎಪಿಪಿ ಯಲಬುರ್ಗಾ ಪಾಲ್ಗೊಳ್ಳುತ್ತಾರೆ. ನ್ಯಾಯವಾದಿಗಳಾದ ಬಿ.ಎಂ. ಶಿರೂರ, ಎಸ್.ಎನ್. ಶಾಗೋಟಿ ಇವರು ಉಪನ್ಯಾಸ ನೀಡುತ್ತಾರೆ. ಸರ್ವರಿಗೂ ಶ್ರೀ ಕ್ಷೇತ್ರದ ಪರವಾಗಿ ರಾಜೂರ ಸಕಲ ಸದ್ಭಕ್ತರು ಸ್ವಾಗತ ಕೋರಿದ್ದಾರೆ.

Please follow and like us:
error

Leave a Reply

error: Content is protected !!