ಕಲ್ಯಾಣ ಕರ್ನಾಟಕ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ|| ಕುಂ.ವೀ. ಅಧಿಕೃತ ಆಹ್ವಾನ

 ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿರುವ ಕಲ್ಯಾಣ ಕರ್ನಾಟಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ. ಕುಂಬಾರ ವೀರಭದ್ರಪ್ಪನವರನ್ನು ಸನ್ಮಾನಿಸಿ ಅಧಿಕೃತವಾಗಿ ಆಹ್ವಾನಿಸಲಾಯಿತು.
ಸೋಮವಾರ ಸಂಜೆ ನಗರದಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ನೇತೃತ್ವದಲ್ಲಿ ಆಹ್ವಾನ ನೀಡಲಾಯಿತು. ಕಾರ್ಯಕ್ರಮ ಸಾಹಿತ್ಯ ಭವನದಲ್ಲಿ ಫೆಬ್ರವರಿ ೮ ರಂದು ನಡೆಯಲಿದೆದೀ ಸಂದರ್ಭದಲ್ಲಿ ಸಮ್ಮೇಳನದ ಆಶಯ, ರೂಪರೇಷೆ ಮತ್ತು ಕಾರ್ಯಕ್ರಮದ ಮಾದರಿ ಕುರಿತು ಚರ್ಚಿಸಲಾಯಿತು ಸಾಹಿತಿ ಕೆ. ಎಸ್. ಭಗವಾನ್, ಪ್ರಮೋದ ತುರ್ವಿಹಾಳ, ಶಿವಾನಂದ ಹೊದ್ಲೂರ, ಹನುಮಂತಪ್ಪ ಅಂಡಗಿ, ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ಶಿವನಗೌಡ ಪಾಟೀಲ, ಗವಿಸಿದ್ದಪ್ಪ ಕರ್ಕಿಹಳ್ಳಿ, ಗಿರಿಶಾನಂದ ಜ್ಞಾನಸುಂದರ, ಶರಣಯ್ಯ ಬಂಡಿ, ಹನುಮಂತರಾವ್ ವಕೀಲರು, ರಾಮು ಪೂಜಾರ, ಅನೇಕರು ಇದ್ದರು. 
ಕುಂ.ವೀ. ಪರಿಚಯ : ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ, ೧ ಅಕ್ಟೋಬರ್, ೧೯೫೩ರಂದು ಜನಿಸಿದ ಕುಂವೀ ಎಂ.ಎ ಪದವೀಧರರು. ಆಂಧ್ರಪ್ರದೇಶದ ವಂದವಾಗಿಲಿ, ಗೂಳ್ಯಂ ಮತ್ತು ಹಿರೇಹಾಳುಗಳಂಥ ಹಳ್ಳಿಗಳಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮೂರುವರೆ ದಶಕಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವರು. ಸದ್ಯಕ್ಕೆ ಕೊಟ್ಟೂರಲ್ಲಿ ನೆಲೆಸಿದ್ದಾರೆ.
ಕೃತಿಗಳು
ಕಥಾ ಸಂಕಲನಗಳು:
ಇನ್ನಾದರೂ ಸಾಯಬೇಕು (೧೯೮೨), ಡೋಮ ಮತ್ತಿತರ ಕಥೆಗಳು(೧೯೮೫), ಕುಂವೀ ಕಥೆಗಳು(೧೯೮೫), ಭಗವತಿ ಕಾಡು(೧೯೯೦), ನಿಜಲಿಂಗ(೧೯೯೪), ಸುಶೀಲೆ ಎಂಬ ನಾಯಿಯೂವಾಗಿಲಿ ಎಂಬ ಗ್ರಾಮವೂ(೧೯೯೫), ಅಪೂರ್ವ ಚಿಂತಾಮಣಿ ಕಥೆ(೧೯೯೬), ಭಳಾರೆ ವಿಚಿತ್ರಂ(೨೦೦೨), ಕೂಳೆ(೨೦೦೭), ಕುಂವೀ ಆಯ್ದ ಕಥೆಗಳು(೨೦೦೭), ಬರೀ ಕಥೆಯಲ್ಲೋ ಅಣ್ಣಾ(ಸಮಗ್ರ ಕಥಾಸಂಕಲನ ೨೦೧೦), ಮಣ್ಣೇ ಮೊದಲು(೨೦೦೪), ನಿಗಿನಿಗಿ ಹಗಲು(೨೦೦೭), ರಾಯಲಸೀಮೆ(೨೦೦೮), ಸೂರ್ಯನ ಕೊಡೆ(೨೦೧೧), ಎಂಟರ್ ದಿ ಡ್ರಾಗನ್(೨೦೧೩), ಕೂರ್ಮಾವತಾರ (೨೦೧೪) ಕಾದಂಬರಿಗಳು: ಕಪ್ಪು(೧೯೮೦), ಬೇಲಿ ಮತ್ತು ಹೊಲ(೧೯೮೨), ಆಸ್ತಿ(೧೯೮೩), ಹನುಮ(೧೯೮೪), ದ್ಯಾವಲಾಪುರ(೧೯೮೩), ಪಕ್ಷಿಗಳು(೧೯೮೫), ಪ್ರತಿಧ್ವಂಧಿ(೧೯೮೫), ಪ್ರೇಮವೆಂಬ ಹೊನ್ನುಡಿ(೧೯೮೫), ಕೆಂಡದ ಮಳೆ(೧೯೮೬), ಕೊಟ್ರ ಹೈಸ್ಕೂಲಿಗೆ ಸೇರಿದ್ದು(೧೯೯೨) ಶಾಮಣ್ಣ(೧೯೯೮),
ಯಾಪಿಲ್ಲು(೨೦೦೧), ಅರಮನೆ(೨೦೦೪), ಆರೋಹಣ(೨೦೦೯), ಹೇಮರೆಡ್ಡಿ ಮಲ್ಲಮ್ಮನ ಕಥೆಯು(೨೦೧೨), ಏಕಾಂಬರ(೨೦೧೨)
ಅನುವಾದ: ತೆಲುಗು ಕಥೆ- ೩೦ ತೆಲುಗು ಕಥೆಗಳ ಕನ್ನಡ ಅನುವಾದ(೧೯೯೮), ಒಂದು ಪೀಳಿಗೆಯ ತೆಲುಗು ಕಥೆಗಳು- ಒಕ ತರಂ ತೆಲುಗು ಕಥೆಗಳ ಕಥಾಸಂಕಲನದ ೩೬ ಕಥೆಗಳ ಕನ್ನಡ ಅನುವಾದ(೨೦೦೧), ಚಿನ್ನದ ತೆನೆ- ತೆಲುಗಿನ ಬಂಗಾರು ಕಥಲು ಸಂಕಲನದ ೭೬ ತೆಲುಗು ಕಥೆಗಳ ಕನ್ನಡ ಅನುವಾದ(೨೦೧೦), ತನ್ನ ಮಾರ್ಗ- ತೆಲುಗಿನ ಡಾ. ಅಬ್ಬೂರಿ ಛಾಯದೇವಿಯವರ ‘ತನ ಮಾರ್ಗಂ’ ಸಂಕಲನದ ೨೮ ಕಥೆಗಳ ಕನ್ನಡ ಅನುವಾದ(೨೦೧೧). ಈ ಐದು ಅನುವಾದಿತ ಸಂಕಲನಗಳನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ..
ಕವನ ಸಂಕಲನ: ದಿವಿ ಸೀಮೆಯ ಹಾಡು(೧೯೭೬). ಜೀವನ ಚರಿತ್ರೆ: ಚಾಪ್ಲಿನ್(೧೯೯೯), ಸುಭದ್ರಮ್ಮ ಮನ್ಸೂರು, ನೇತಾಜಿ ಸುಭಾ?ಚಂದ್ರ ಬೋಸ್.ರಾಹುಲ ಸಾಂಕೃತ್ಯಾಯನ, ಶ್ರೀಕೃ?ದೇವರಾಯ. ವಿಮರ್ಶೆ: ಜಮೀನ್ದಾರಿ ವ್ಯವಸ್ಥೆ ಮತ್ತು ತೆಲುಗು ಸಾಹಿತ್ಯ ಆತ್ಮಕಥೆ: ಗಾಂಧಿಕ್ಲಾಸು. ಚಲನಚಿತ್ರಗಳಾದ ಕೃತಿಗಳು: ಮನ ಮೆಚ್ಚಿದ ಹುಡುಗಿ, ಕೆಂಡದಮಳೆ, ದೊರೆ, ಕೊಟ್ರೇಶಿ ಕನಸು(ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ), ಬೇಲಿ ಮತ್ತು ಹೊಲ, ಭಗವತಿಕಾಡು, ಕೂರ್ಮಾವತಾರ(ರಜತ ಕಮಲ ರಾ?ಪ್ರಶಸ್ತಿ, ವೈಯಕ್ತಿಕವಾಗಿ ಅತ್ಯುತ್ತಮ ಕಥಾಲೇಖಕ ಪ್ರಶಸ್ತಿ)- ಇವು ಇವರ ಕಥೆ ಕಾದಂಬರಿಗಳಾಧರಿತ ಚಲನಚಿತ್ರಗಳು. ಇನ್ನಿತರ ವಿವರಗಳು:
ಇವರ ಕಥೆ, ಕಾದಂಬರಿಗಳ ಬಗ್ಗೆ ಎಂಟು ಎಂ.ಫಿಲ್ ಪ್ರಬಂಧಗಳು, ಏಳು ಪಿಎಚ್.ಡಿ ಮಹಾಪ್ರಬಂಧಗಳು ಪ್ರಕಟಗೊಂಡಿವೆ. ಇವರ ಬಹುತೇಕ ಕಥೆ ಕಾದಂಬರಿಗಳನ್ನು ನಾಡಿನ ಹಲವು ವಿಶ್ವವಿದ್ಯಾಲಯಗಳು ಪದವಿ ಹಾಗೂ ಸ್ನಾತಕೋತ್ತರ ತರಗತಿಗಳಿಗೆ ಪಠ್ಯವಾಗಿರಿಸಿದೆ. ಇವರ ಹಲವಾರು ಕಥೆಗಳು ಇಂಗ್ಲೀ? ಹಾಗೂ ಹಲವು ಭಾರತೀಯ ಭಾ?ಗಳಿಗೆ ಅನುವಾದಗೊಂಡಿವೆ. ಅಲ್ಲದೆ ಹತ್ತಾರು ಕಥೆಗಳು ಕಿರುಚಿತ್ರಗಳಾಗಿ ದೃಶ್ಯಮಾಧ್ಯಮಗಳಲ್ಲಿ ಪ್ರಸಾರಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯತ್ವ, ಚಲನಚಿತ್ರ ಸಹಾಯಧನ ಸಮಿತಿಯ ಸದಸ್ಯತ್ವ, ಅನುವಾದ ಸಾಹಿತ್ಯ ಅಕಾಡೆಮಿ ಸದಸ್ಯತ್ವ ಮತ್ತು ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಲೇಖಕ, ಕೇಂದ್ರ ಸಾಹಿತ್ಯ ಅಕಾಡೆಮಿಯ ರೆಸಿಡೆಂಟ್ ರೈಟರ್ ಹೊಣೆಗಳನ್ನೂ ಕುಂವೀ ನಿರ್ವಹಿಸಿರುವರು.
ಪುರಸ್ಕಾರಗಳು : ಇವರು ತಮ್ಮ ಕೃತಿಗಳಿಗೆ ಎರಡು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನವನ್ನು, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿಯನ್ನು ಪಡೆದಿರುವರಲ್ಲದೆ ತಮ್ಮ ಮಹಾಕಾದಂಬರಿ
ಅರಮನೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೨೦೦೮) ಪಡೆದಿದ್ದಾರೆ. ಅಲ್ಲದೆ ಕಾಂತಾವರದ ವರ್ಧಮಾನ ಉದಯೋನ್ಮುಖ ಪ್ರಶಸ್ತಿ, ಪುತ್ತೂರಿನ ಉಗ್ರಾಣ ಪ್ರಶಸ್ತಿ, ತುಮಕೂರಿನ ವೀಚಿ ಪ್ರತಿ?ನ ಪ್ರಶಸ್ತಿ, ಅಥಣಿಯ ಸಿರಸಂಗಿ ಲಿಂಗರಾಜ ಪ್ರಶಸ್ತಿ, ಕುಮಟಾದ ಗೌರೀಶ ಕಾಯ್ಕಿಣಿ ಪ್ರತಿ?ನ ಪ್ರಶಸ್ತಿ, ಮಂಗಳೂರಿನ ಸಂದೇಶ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ(೨೦೦೪) ಸೇರಿದಂತೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯವು ಕುಂವೀಯವರಿಗೆ ೨೦೧೧ರ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇಂಥಹ ಹಿರರಿಯ ಸಾಹಿತಿಗಳು ನಮ್ಮ ಕಲ್ಯಾಣ ನಾಡಲ್ಲಿ ಇರುವದು ಹೆಮ್ಮೆಯ ಸಂಗತಿ, ಅದೇ ರೀತಿಯ ಅವರನ್ನು ಗುರುತಿಸುವ ಹಾಗೂ ಅವರ ಮೂಲಕ ಸಾಹಿತ್ಯವನ್ನು ಯುವಜನರಿಗೆ ಸಮೀಪಿಸುವ ಕಾರ್ಯಮಾಡಲು ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಗೊಂಡಬಾಳ ತಿಳಿಸಿದ್ದಾರೆ.

Leave a Reply