ಗಿಡಗಳನ್ನು ನೆಡುವ ಕಾರ್ಯ.

ಕೊಪ್ಪಳ-28- ನಗರದ ಧರ್ಮಶ್ರೀ ವಿವಿಧೋದ್ಧೇಶ ಸೇವಾ ಸಂಸ್ಥೆ( ರಿ) ಯ ವತಿಯಿಂದ ಇತ್ತೀಚಿಗೆ ಗವಿಶ್ರೀ ನಗರದ ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರದ ಉದ್ಯಾನವನದಲ್ಲಿ ಗಿಡಗಳನ್ನು  ನೆಡುವ ಕೆಲಸ ಜರುಗಿತು. ಶ್ರೀಗವಿಸಿದ್ಧೇಶ್ವರ ಸ್ವಾಮೀಜಿಗಳು ಗಿಡ ನೆಡುವದರ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಸಂಸದರ ಪತ್ನಿ ನಿಂಗಮ್ಮ ಕರಡಿ, ನಗರಸಭೆ ಅದ್ಯಕ್ಷರಾದ ಬಸಮ್ಮ ಹಳ್ಳಿಗೂಡಿ, ಉಪಾಧ್ಯಕ್ಷರಾ ಬಾಳಪ್ಪ ಬಾರಕೇರ ಉಪಸ್ಥಿತರಿದ್ದರು.  ಸಂಸ್ಥೆಯ ಅಧ್ಯಕ್ಷೆ ಸುಶೀಲಾ ದೇವಿ ಗೋಂದ್ಕರ್, ಕಾರ್ಯದರ್ಶಿ ಸುವರ್ಣಲತಾ ಗೋಂದ್ಕರ್, ದಸ್ಯರಾದ ನಿರ್ಮಲಾ ಪಟ್ಟಣ ಶೆಟ್ಟಿ, ನೀಲಮ್ಮ ಪಾಟೀಲ,ಶಾರದಾ ಪಾಟೀಲ್ ಹಾಗೂ ಬೋರಮ್ಮ ಬಿರಾದಾರ ಭಾಗವಹಿಸಿದ್ದರು.

Leave a Reply