ಅಕ್ರಮ ಮದ್ಯ ಸಂಗ್ರಹಣೆ ಅಥವಾ ಸಾಗಾಣಿಕೆ ಕುರಿತು ಮಾಹಿತಿ ನೀಡಲು ಕರೆ

ಕೊಪ್ಪಳ ಸೆ. ೨೨ – ಕೊಪ್ಪಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಂಗವಾಗಿ ಜಾರಿಗೊಳಿಸಲಾಗಿರುವ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಅಕ್ರಮ ಮದ್ಯ ಶೇಖರಣೆ, ಸಾಗಾಣಿಕೆ ಮತ್ತು ಮಾರಾಟದ ಬಗ್ಗೆ ಸಾರ್ವಜನಿಕರು ತಮ್ಮ ಸಲಹೆ ಅಥವಾ ದೂರುಗಳನ್ನು ಸಲ್ಲಿಸಬೇಕಿದ್ದಲ್ಲಿ ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಿ ನೀಡಬಹುದಾಗಿದೆ.
  ಯಾವುದೇ ಅಕ್ರಮ ಮದ್ಯ ಸಾಗಾಣಿಕೆ ಅಥವಾ ಹಂಚಿಕೆ ಕಂಡುಬಂದಲ್ಲಿ ಸಾರ್ವಜನಿಕರು ಅಬಕಾರಿ ಕಟ್ರೋಲ್ ರೂಂ. ೦೮೫೩೯- ೨೨೧೬೧೦, ಅಬಕಾರಿ ಉಪ ಆಯುಕ್ತರು- ೯೪೪೯೫೯೭೧೭೦ ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ.  ಅಲ್ಲದೆ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು ೫ ಮೊಬೈಲ್ ತಂಡಗಳನ್ನು ರಚಿಸಲಾಗಿದ್ದು, ಕೊಪ್ಪಳ ನಗರ ಮತ್ತು ಹೊರವಲಯ ವ್ಯಾಪ್ತಿಯಲ್ಲಿ ಮಂಜುನಾಥ ಮಾಲಿಪಾಟೀಲ್, ಅಬಕಾರಿ ನಿರೀಕ್ಷಕರು- ೯೪೪೯೫೯೭೧೭೬, ಕೊಪ್ಪಳ ತಾಲೂಕು ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ ಯಮನೂರು ಸಾಬ ಹೊಸಮನಿ, ಅಬಕಾರಿ ನಿರೀಕ್ಷಕರು- ೯೪೪೮೭೫೭೯೨೩, ಗಂಗಾವತಿ ನಗರ ಪ್ರದೇಶ ವ್ಯಾಪ್ತಿಯಲ್ಲಿ- ಎಸ್.ಎಂ. ಮುರನಾಳ, ಅಬಕಾರಿ ಉಪಾಧೀಕ್ಷಕರು- ೯೪೪೯೫ ೯೭೧೭೫, ಗಂಗಾವತಿ ತಾಲೂಕು ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ- ಚಿನ್ನಪ್ಪ, ಅಬಕಾರಿ ಉಪನಿರೀಕ್ಷಕರು- ೯೮೮೦೮೭೮೯೨೧, ಕುಷ್ಟಗಿ ತಾಲೂಕು- ರಾಮನಗೌಡ ಮುದಿಗೌಡರ, ಅಬಕಾರಿ ನಿರೀಕ್ಷಕರು- ೯೪೪೯೨ ೬೨೩೦೪.  ಯಲಬುರ್ಗಾ ತಾಲೂಕು ವ್ಯಾಪ್ತಿಯಲ್ಲಿ ಹೆಚ್.ಬಿ. ಪೂಜಾರಿ- ೯೫೩೫೧೯೮೭೮೦, ನರಸಿಂಹಾಚಾರ್ಯ- ೯೪೪೮೩೫೦೫೫೫ ದೂರವಾಣಿಗೆ ಸಂಪರ್ಕಿಸಿ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Please follow and like us:
error