ಕಸಾಪ ಪದಾಧಿಕಾರಿಗಳ ವಿರುದ್ದ ಆಕ್ರೋಶ

ಗಂಗಾವತಿ :  78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಗೆ  ತಾಲೂಕ ಪಂಚಾಯತ್ ಸದಸ್ಯರನ್ನು ಆಹ್ವಾನಿಸಲು ಹೋಗಿದ್ದ ಕಸಾಪ ಪದಾಧಿಕಾರಿಗಳು ತಾಲೂಕ ಪಂಚಾಯತ್ ಸದಸ್ಯರ ಆಕ್ರೋಶಕ್ಕೆ ಸಿಕ್ಕಿಕೊಂಡರು. ಸಮ್ಮೇಳನದ ಕುರಿತು ಕಳೆದ 3ತಿಂಗಳಿಂದ ವಿವಿಧ ಸಭೆಗಳನ್ನು ನಡೆಸುತ್ತಿದ್ದರು ತಾಲೂಕ ಪಂಚಾಯತ್ ಸದಸ್ಯರಿಗೆ ಯಾವುದೇ ರೀತಿಯ ಆಹ್ವಾನ ನೀಡದಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು.  ಯಾವುದೇ ಸಮಿತಿ ರಚನೆಯಲ್ಲಿಯೂ ಸಹಿತ ತಾಲೂಕ ಪಂಚಾಯತ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಸಾಪ ಪದಾಧಿಕಾರಿಗಳು ಮನಬಂದಂತೆ ವರ್ತಿಸುತ್ತಿದ್ದಾರೆ ಸರ್ವಾಧಿಕಾರ ಮೆರೆಯುತ್ತಿದ್ದಾರೆ ಎಂದು ತಾ.ಪಂ. ಸದಸ್ಯರು ಆಕ್ರೋಶಗೊಂಡರು. ಜಿಲ್ಲಾ ಕಸಾಪ ಅಧ್ಯಕ್ಷ ಶೇಖರಗೌಡ ಮಾಲೀಪಾಟೀಲ್ 24ರಂದು ನಡೆಯಲಿರುವ ಪೂರ್ವಬಾವಿ ಸಭೆಗೆ  ಬಂದು ಸಲಹೆ ಸೂಚನೆ ನೀಡುವಂತೆ ಸರ್ವಸದಸ್ಯರಿಗೆ ಆಹ್ವಾನ ನೀಡಿದರು.
Please follow and like us:

Leave a Reply