ಆಗಸ್ಟ್ ೨೬,೨೭,೨೮,೩೦,೩೧ ರಂದು ರಕ್ತದಾನ ಶಿಬಿರ.

ಕೊಪ್ಪಳ-25-  ಜಿಲ್ಲೆಯ ಸಂಗನಾಳ, ಮುನಿರಾಬಾದ್, ಗೊಂಡಬಾಳ, ಢಾಣಾಪೂರ ಜುಮ್ಮಲಾಪೂರ ಮತ್ತು ಬಸಾಪಟ್ಟಣ ಗ್ರಾಮದಲ್ಲಿ ಆಗಸ್ಟ್ ೨೬,೨೭,೨೮,೩೦,೩೧ ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.
ಸಂಗನಾಳ – ಯಲಬುರ್ಗ ತಾಲೂಕಿನ ಸಂಗನಾಳ ಗ್ರಾಮದಲ್ಲಿ ದಿ. ೨೬ ರಂದು ಬುಧವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪  ಗಂಟೆಯವರೆಗೆ ಜರುಗಲಿದೆ. 
ಮುನಿರಾಬಾದ್ – ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ದಿ. ೨೬ ರಂದು ಬುಧವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪ ಗಂಟೆಯವರೆಗೆ ಜರುಗಲಿದೆ. 
ಗೊಂಡಬಾಳ – ಕೊಪ್ಪಳ ತಾಲೂಕಿನ ಗೊಂಡಬಾಳ ಗ್ರಾಮದಲ್ಲಿ ದಿ. ೨೭ ರಂದು ಗುರುವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪  ಗಂಟೆಯವರೆಗೆ ಜರುಗಲಿದೆ.
ಢಾಣಾಪೂರ – ಗಂಗಾವತಿ ತಾಲೂಕಿನ ಢಾಣಾಪೂರ ಗ್ರಾಮದಲ್ಲಿ ದಿ. ೨೭ ರಂದು ಗುರುವಾರ ಗ್ರಾಮ ಪಂಚಾಯಿತಿ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಗ್ರಾಮ ಪಂಚಾಯಿತಿಯಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪  ಗಂಟೆಯವರೆಗೆ ಜರುಗಲಿದೆ.
ಜುಮ್ಮಲಾಪೂರ – ಕುಷ್ಟಗಿ ತಾಲೂಕಿನ ಜುಮ್ಮಲಾಪೂರ ಗ್ರಾಮದಲ್ಲಿ ದಿ. ೨೮ ರಂದು ಶುಕ್ರವಾರ ಗ್ರಾಮ ಪಂಚಾಯಿತಿ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಗ್ರಾಮ ಪಂಚಾಯಿತಿಯಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪  ಗಂಟೆಯವರೆಗೆ ಜರುಗಲಿದೆ.
ಮುನಿರಾಬಾದ್ – ಕೊಪ್ಪಳ ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ದಿ. ೩೦ ರಂದು ರವಿವಾರ ಐ.ಆರ್.ಬಿ. ರವರ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಐ.ಆರ್.ಬಿ. ನಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪  ಗಂಟೆಯವರೆಗೆ ಜರುಗಲಿದೆ.
ಬಸಾಪಟ್ಟಣ – ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದಲ್ಲಿ ದಿ. ೩೧ ರಂದು ಸೋಮವಾರ ಗ್ರಾಮ ಪಂಚಾಯಿತಿ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಗ್ರಾಮ ಪಂಚಾಯಿತಿಯಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪ ಗಂಟೆಯವರೆಗೆ ಜರುಗಲಿದೆ.
ಎಲ್ಲಾ ಶಿಬಿರಗಳಲ್ಲಿ ಆಸಕ್ತರು ರಕ್ತದಾನ ಮಾಡಿ ಸಹಕರಿಸುವಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ ಕೋರಿದ್ದಾರೆ.
                  

Please follow and like us:
error

Related posts

Leave a Comment