ಜಬ್ಬಲಗುಡ್ಡದಲ್ಲಿ ವಾಲ್ಮೀಕಿ ಜಯಂತಿ

ಕೊಪ್ಪಳ, ನ.. ತಾಲೂಕಿನ ಜಬ್ಬಲಗುಡ್ಡ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದಿಂದ ರವಿವಾರ ನವೆಂಬರ್ ೨೧ ರಂದು ಮರ್ಹ ವಾಲ್ಮೀಕಿ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಭಾಗದಲ್ಲಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ.
ಅಂದು ಬೆಳಿಗ್ಗೆ ೧೧ ಗಂಟೆಗೆ ಮಾಜಿ ವಿಧಾನ ಪರಿಷತ್ ಸದಸ್ಯ ಹೆಚ್. ಆರ್. ಶ್ರೀನಾಥ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಶಾಸಕ ಪರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸುವರು. ಸಂಸದ ಶಿವರಾಮಗೌಡ ಜ್ಯೋತಿ ಬೆಳಗಿಸುವರು. ಮುಖ್ಯ ಅತಿಥಿಗಳಾಗಿ ಸಚಿವ ಬಿ. ಶ್ರೀರಾಮುಲು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಶಾಸಕ ಸಂಗಣ್ಣ ಕರಡಿ, ಜಿ. ಪಂ. ಅಧ್ಯಕ್ಷ ರಾಘವೇಂದ್ರ ಹಿಟ್ನಾಳ, ಕರಿಯಣ್ಣ ಸಂಗಟಿ, ಗ್ರಾ. ಪಂ. ಅಧ್ಯಕ್ಷ ಗುರುರಾಜ, ತಾ. ಪಂ. ಸದಸ್ಯ ಬಸವರಾಜ ಭಾ”ಕಟ್ಟಿ, ಹನುಮಂತಪ್ಪ ಹ್ಯಾಟಿ, ನಗರಸಭೆ ಸದಸ್ಯೆ ಇಂದಿರಾ ಭಾವಿಕಟ್ಟಿ, ನಗರಸಭೆ ಅಧ್ಯಕ್ಷ ಬಸಪ್ಪ ನಾಯಕ, ಜೋಗದ ಹನುಮಂತಪ್ಪ ನಾಯಕ, ಜೋಗದ ಕನಕಪ್ಪ ನಾಯಕ, ವಿರಭದ್ರಪ್ಪ ನಾಯಕ, ವಾಲ್ಮೀಕಿ ಸೇನೆ ರಾಜ್ಯ ಸಂಚಾಲಕ ಮಂಜುನಾಥ ಗೊಂಡಬಾಳ, ರಾಮಣ್ಣ ಕಲ್ಲನವರ, ಗೋವಿಂದಪ್ಪ ಬಂಡಿ, ರಮೇಶ ನಾಯಕ ಬೂದಗುಂಪಾ, ಡಿ. ವೆಂಕಟೇಶ ಹೊಸಪೇಟೆ ಇತರರು ಭಾಗವಹಿಸುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.
Please follow and like us:
error