ನಗರದ ಎಲ್ಲಾ ವಾರ್ಡಗಳಿಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವು- ಶಾಸಕ ಕೆ.ರಾಘವೇಂದ್ರ ಹಿಟ್ನಾಳ.

ಕೊಪ್ಪಳ:೧೯, ಬೆಳೆಗ್ಗೆ ೯.೦೦ ಘಂಟೆಗೆ ನಗರದ ಪೋಲಿಸ್ ವಸತಿ ಕಾಲೋನಿಯಲ್ಲಿ ನಗರೋತ್ತಾನ ಯೋಜನೆಯಡಿಯಲ್ಲಿ ರೂ.೪೦ಲಕ್ಷದ ಡಾಂಬರ ರಸ್ತೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ನಗರದ ಎಲ್ಲಾ ವಾರ್ಡಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗುವುದು. ಈಗಾಗಲೇ ೫ ವಾರ್ಡಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಂಜೂರು ಮಾಡಲಾಗಿದ್ದು, ಬರುವ ದಿನಗಳಲ್ಲಿ ನಗರದ ಜನತೆಗೆ ಪ್ರತಿ ವಾರ್ಡಗಳಲ್ಲಿ ಶುದ್ಧ ಕುಡಿಯುವ ನೀರು ಲಭ್ಯವಾಗಿದೆ. ನಗರದ ಸೌಂದರ್ಯಿಕರಣಕ್ಕೆ ಹೆಚ್ಚುವತ್ತು ನೀಡಲಾಗುತ್ತಿದ್ದು ಬಸವೇಶ್ವರ ವೃತ್ತದಿಂದ ಗವಿಮಠ ಮಾರ್ಗವಾಗಿ ಹಿರೇಸಿಂದೋಗಿ ರಸ್ತೆವರೆಗೆ ರೂ. ೧೦ ಕೋಟಿ ಅನುದಾನದ ಅಡಿಯಲ್ಲಿ ಗುಣಮಟ್ಟದ ರಸ್ತೆಯನ್ನು ನಿರ್ಮಾಣಮಾಡಲಾಗುವುದು. ಸಾಲಾರಜಂಗ್‌ರಸ್ತೆ, ಹಸನ್ ರೋಡ ಅಭಿವೃದ್ದಿ ಕಾಮಗಾರಿಗಳನ್ನು ಶೀಘ್ರವೇ ಕೈಗೆತ್ತಿಕೊಳ್ಳಲಾಗುವುದೆಂದು ಹೇಳಿದರು. ನಗರದ ಹೃದಯಭಾಗದಲ್ಲಿರುವ ಜೆ.ಪಿ.ಮಾರ್ಕೆಟನ್ನು ರೂ. ೭.೫ ಕೋಟಿ ವೆಚ್ಚದಡಿಯಲ್ಲಿ ಶೀಘ್ರವೇ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಲಾಗುದು ಎಂದು ಹೇಳಿದರಿ.ಈ ಸಂದರ್ಭದಲ್ಲಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಡಾ||ಪಿ.ರಾಜಾ, ನಗರಸಭೆ ಅಧ್ಯಕರಾದ ಶ್ರೀಮತಿ ಬಸಮ್ಮ ಹಳ್ಳಿಗುಡಿ, ಮಹೇಂದ್ರ ಚೋಪ್ರಾ, ಡಿ.ವೈ, ಎಸ್.ಪಿ. ರಾಜು ಎನ್, ನಗರ ಸಿ.ಪಿ.ಐ ಮೋಹನ್ ಪ್ರಸಾದ, ಆರ್.ಪಿ.ಐ.ನಿಂಗಪ್ಪ ಹಾಗೂ ಗಣೇಶ, ಗಾಳೆಪ್ಪ ಪೂಜಾರ, ಶಿವಾನಂದ ಹೂದ್ಲೂರು, ರಾಮಣ್ಣ ಹಳ್ಳಿಗುಡಿ, ಮಾರುತಿ ಕಾರಟಗಿ, ವಕ್ತಾರ ಅಕ್ಬರಪಾಷಾ ಪಲ್ಟನ ಇನ್ನೂ ಅನೇಕ ಪೋಲಿಸ್ ಅಧಿಕಾರಿಗಳು ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Please follow and like us:
error