ಭಾರತೀಯ ದಲಿತ ಪ್ಯಾಂಥರ್ ಕೊಪ್ಪಳ ಜಿಲ್ಲಾ ಘಟಕದಿಂದ ಪಲ್ಸ್ ಪೋಲಿಯೊ ಜಾಗೃತಿ

ಕೊಪ್ಪಳ ೧೯; ಭಾರತೀಯ ದಲಿತ ಪ್ಯಾಥರ್ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಜಿಲ್ಲಾಧ್ಯಕ್ಷ ನಾಗರಾಜ್ ಬೆಲ್ಲದ್ ನೇತೃತ್ವದಲ್ಲಿ ಸಂಘಟನೆಯ ಕಾರ್ಯಕರ್ತರು ಮಕ್ಕಳಿಗೆ ಪಲ್ಸ ಪೋಲಿಯೋ ಹಾಕಿಸಿ ಪೋಲಿಯೋ ಬಗ್ಗೆ ಜಾಗೃತಿ ಮೂಡಿಸಲಾಯಿತು.

ನಂತರ ನಗರದ ೧೧, ೧೨ ವಾರ್ಡಗಳಿಗೆ ತೆರಳಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿರೆಂದು ಘೋಷಣೆ ಕೂಗಿ ಪೋಷಕರಿಗೆ ತಿಳಿಸಲಾಯಿತು. ಮಂಜುನಾಥ ದೊಡ್ಡಮನಿ, ರಾಘವೇದ್ರ ಚಾಕ್ರಿ, ಗೌತಮ ಬಳಗಾನೂರ, ಮನೋಹರ ಬಿಳೆಎಲಿ,ಶರಣ ಬೆಲ್ಲದ್, ಕೊಟ್ರೆಶ್ ಚಾಕ್ರಿ, ವಿನಾಯಕ ಬೆಲ್ಲದ್, ವಿಶ್ವನಾಥ ದೊಡ್ಡಮನಿ, ಉದಯ ಚಾಕ್ರಿ, ಪರಶುರಾಮ ಬಾವಿಮನಿ ಹಾಗೂ ಇತರರು ಇದ್ದರು.  

Leave a Reply