ಉತ್ಸಾಹಿ ವಾರ್ತಾಧಿಕಾರಿಯ ಪರಿಶ್ರಮ ,ಆಸಕ್ತಿ : ಬ್ಲಾಗ್ ಹಾಗೂ ಫೇಸ್ ಬುಕ್ ನಲ್ಲಿ ಕೊಪ್ಪಳ ವಾರ್ತಾ ಇಲಾಖೆಯ ಸುದ್ದಿಗಳು ಲಭ್ಯ

  ವಾರ್ತಾ ಇಲಾಖೆ ಮೂಲಕ ಪ್ರಕಟವಾಗುತ್ತಿದ್ದ ವಿವಿಧ ಸಭೆ, ಸಮಾರಂಭಗಳು, ಇಲಾಖೆಯ ಪ್ರಕಟಣೆಗಳು, ಸುದ್ದಿಗಳನ್ನು ಇನ್ನು ಮುಂದೆ ಕೊಪ್ಪಳ ವಾರ್ತಾ ಇಲಾಖೆಯ ಫೇಸ್‌ಬುಕ್ ಹಾಗೂ ಬ್ಲಾಗ್ ನಲ್ಲಿ ಸಾರ್ವಜನಿಕರಿಗೂ ಲಭ್ಯವಾಗಲಿದೆ.
  ಇತ್ತೀಚೆಗೆ ಅಂತರ್ಜಾಲ ವ್ಯವಸ್ಥೆಯಲ್ಲಿನ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವೀಟರ್, ಬ್ಲಾಗ್ ಗಳಿಗೆ ಯುವಕರು ಮಾರುಹೋಗಿದ್ದು, ಪ್ರತಿಯೊಬ್ಬರ ಮೊಬೈಲ್, ಕಂಪ್ಯೂಟರ್‌ಗಳಲ್ಲಿ ಸಾಮಾಜಿಕ ಜಾಲತಾಣಗಳು ಅತಿ ಹೆಚ್ಚು ಬಳಕೆಯಾಗುತ್ತಿವೆ.  ಕೊಪ್ಪಳ ವಾರ್ತಾ ಇಲಾಖೆಯಿಂದ ಬಿಡುಗಡೆ ಮಾಡಲಾಗುತ್ತಿದ್ದ ಸುದ್ದಿಗಳು, ಇದುವರೆಗೂ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು.  ಇವು ಕೇವಲ ಈ ಭಾಗದ ಆವೃತ್ತಿಗಷ್ಟೇ ಸೀಮಿತವಾಗಿ ಪ್ರಕಟವಾಗುತ್ತಿತ್ತು.  ಇದೀಗ ಕೊಪ್ಪಳ ವಾರ್ತಾ ಇಲಾಖೆಯು  information dept koppal ಮತ್ತು  vaarthekoppal ಹೆಸರಿನಲ್ಲಿ ಫೇಸ್ ಬುಕ್ ಖಾತೆ ಹಾಗೂ  koppal varthe ಹೆಸರಿನಲ್ಲಿ ಪ್ರಾರಂಭವಾಗಿದೆ.  ಅಲ್ಲದೆ ಇಲಾಖೆಯಿಂದ ಬ್ಲಾಗ್ ಅನ್ನು ಪ್ರಾರಂಭಿಸಿದ್ದು, ಇದರ ವಿಳಾಸ  http:/koppalvarthe.blogspot.in ಆಗಿರುತ್ತದೆ.  ಫೇಸ್ ಬುಕ್ ಖಾತೆ ಪ್ರಾರಂಭವಾದ ಕೇವಲ ಒಂದು ವಾರದಲ್ಲಿಯೇ ಸುಮಾರು ೩೫೦ ಕ್ಕೂ ಹೆಚ್ಚು ಜನರು ಫ್ರೆಂಡ್ಸ್ ವೃತ್ತದಲ್ಲಿ ಸೇರಿದ್ದಾರೆ.  ವಾರ್ತಾ ಇಲಾಖೆಯಿಂದ ಬಿಡುಗಡೆ ಮಾಡಲಾಗುವ ಸುದ್ದಿಗಳನ್ನು ಯೂನಿಕ್ ಕೋಡ್‌ನಲ್ಲಿ ಫೇಸ್ ಬುಕ್ ಮತ್ತು ಬ್ಲಾಗ್ ನಲ್ಲಿ ಅಪ್‌ಲೋಡ್ ಮಾಡುತ್ತಿರುವುದರಿಂದ, ಯಾವುದೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೂ ಸುದ್ದಿಯನ್ನು ಓದಬಹುದಾಗಿದೆ.  ಅಲ್ಲದೆ ಸುದ್ದಿ ಮತ್ತು ಫೋಟೋಗಳನ್ನು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದಾಗಿದೆ.  ವಾರ್ತಾ ಇಲಾಖೆಯಿಂದ ಸಾಮಾನ್ಯವಾಗಿ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಪ್ರಕಟಣೆಗಳು, ನೇಮಕಾತಿಗಳು, ಸರ್ಕಾರಿ ಸೌಲಭ್ಯಗಳಿಗೆ ಅರ್ಜಿ ಆಹ್ವಾನ, ವಸತಿ ಯೋಜನೆಗಳು, ಹಾಸ್ಟೆಲ್‌ಗಳಿಗೆ ಅರ್ಜಿ ಆಹ್ವಾನ, ವಿವಿಧ ಪ್ರಮುಖ ಸಭೆಗಳಿಗೆ ಸಂಬಂಧಿಸಿದ ಸುದ್ದಿಗಳು, ಸಚಿವರು, ಪ್ರಮುಖ ಗಣ್ಯರ ಪ್ರವಾಸದ ಮಾಹಿತಿ, ಸಮಾರಂಭಗಳ ಸುದ್ದಿಗಳನ್ನು ಒಳಗೊಂಡಿದ್ದು, ಫೇಸ್ ಬುಕ್ ಮತ್ತು ಬ್ಲಾಗ್ ಮೂಲಕ ಅಂದಿನ ಸುದ್ದಿಗಳು ಆಯಾ ದಿನದಂದೇ ಲಭ್ಯವಾಗುತ್ತದೆ.  ಯುವಜನರು ಹೆಚ್ಚಾಗಿ ಫೇಸ್‌ಬುಕ್ ಮತ್ತು ಬ್ಲಾಗ್ ಗಳನ್ನು ಬಳಸುತ್ತಿರುವುದರಿಂದ, ವಾರ್ತಾ ಇಲಾಖೆಯ ಸುದ್ದಿಗಳು ಬಹುಬೇಗ ಸಾರ್ವಜನಿಕರಿಗೆ ತಲುಪಿ, ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ ಎನ್ನುತ್ತಾರೆ ವಾರ್ತಾಧಿಕಾರಿ ತುಕಾರಾಂರಾವ್ ಅವರು.
Please follow and like us:

Leave a Reply