You are here
Home > Koppal News > ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲಾ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಿಂದ ಅಶೋಕನ ಶಿಲಾ ಶಾಸನ ವಿಕ್ಷೇಣೆ.

ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲಾ ಸ್ಕೌಟ್ ಮತ್ತು ಗೈಡ್ಸ್ ಮಕ್ಕಳಿಂದ ಅಶೋಕನ ಶಿಲಾ ಶಾಸನ ವಿಕ್ಷೇಣೆ.

ಕೊಪ್ಪಳ-20- ನಗರದ ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಯ ಸ್ಕ್ಕೌಟ್ ಮತ್ತು ಗೈಡ್ಸ್ ಮಕ್ಕಳಿಂದ ಅಶೋಕನ ಶಿಲಾ ಶಾಸನ ವಿಕ್ಷೇಣೆಮಾಡಲಾಯಿತು. ಮಕ್ಕಳಿಗೆ ಶಿಲಾ ಶಾಸನದ ಬಗ್ಗೆ ಮತ್ತು ಪಾಲ್ಕಿ ಶಿಲಾ ಶಾಸನದ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಯಿತು.  ಈ ಬೆಟ್ಟ ಹತ್ತಲಿಕ್ಕೆ ಮಕ್ಕಳು ಹರ ಸಹಾಸ ಮಾಡಿ ವಿಕ್ಷೀಸಿ ಅದರ ಮಹತ್ವವನ್ನು ಅರಿತು ತುಂಬಾ ಸಂತೋಷ ಪಟ್ಟರು.

Leave a Reply

ಡಾ|| ಬಿ.ಆರ್.ಅಂಬೇಡ್ಕರವರು ಜಗತ್ತಿಗೆ ಮಾದರಿ: ಡಾ. ಬಿ.ಎಸ್. ಹನಸಿ.

ಏ:೧೪ ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಕಾನೂನು ಮಹಾವಿದ್ಯಾಲಯ ಹಾಗು ರಾಷ್ಟೀಯ ಸೇವಾ ಯೋಜನಾ ಘಟಕ ಕೊಪ್ಪಳ ಇವರುಗಳ ಸಂಯುಕ್ತ ಆಶ್ರಯದಲ್ಲ್ಲಿ ಡಾ|| ಬಿ.ಆರ್.ಅಂಬೇಡ್ಕರ ಜಯಂತಿ ಆಚರಿಸಲಾಯಿತು. ಆಚರಣೆಯ  ಪ್ರಯುಕ್ತ  ಡಾ|| ಬಿ.ಆರ್.ಅಂಬೇಡ್ಕರವರು ಜಗತ್ತಿಗೆ ಮಾದರಿ ಎಂದು ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಿ.ಎಸ್. ಹನಸಿ. ಹೇಳಿದರು ಅಷ್ಟೇ ಅಲ್ಲದೆ ಎಷ್ಟೂ ಸರ್ಕಾರಿ ಸೌಲಬ್ಯಗಳು  ನಿಜವಾದ ವ್ಯಕ್ತಿಗಳಿಗೆ ಸಿಗದೆ ಕೇವಲ ಇವರ ಹೆಸರಿನ ಮೇಲೆ ಬೇರೆ ವ್ಯಕ್ತಿಗಳು ಪಡೆದುಕೂಳ್ಳುತ್ತಾರೆ  ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕಾನೂನು ಅರಿವು ಕಾರ್ಯಕ್ರಮಗಳ ಮೂಲಕ  ಜನರಿಗೆ ಅರಿವು ಮೂಡಿಸಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು  ಹೇಳಿದರು . ಕಾನೂನು ಮಹಾವಿದ್ಯಾಲಯದ ಉಪನ್ಯಾಸಕಿಯಾದ ಶ್ರೀಮತಿ ಉಷಾದೇವಿ ಹೀರೆಮಠ ಮಾತಾನಾಡಿ ಡಾ|| ಬಿ.ಆರ್.ಅಂಬೇಡ್ಕರ ರವರು ಕೇವಲ ಒಂದು ಜನಾಂಗಕ್ಕೆ ಮಾತ್ರ ಸಿಮಿತವಾದಂತೆ ಬಿಂಬಿಸುತ್ತಿದ್ದಾರೆ, ಆದರೆ ಅವರು ದೇಶದ ಎಲ್ಲಾ ವರ್ಗದವರಿಗೂ ಮಾದರಿ, ಆದರ್ಶ ವ್ಯಕ್ತಿಗಳು ದೇಶದ ಸರ್ವರ ಅಭಿವೃದ್ದಿಗಾಗಿ ಮಹೋನ್ನತ ಕೊಡುಗೆ ನೀಡಿದ್ದಾರೆ. ಕಾನೂನು ಸಂಘದ ಪ್ರವರ್ತಕ ಹಾಗೂ ರಾಷ್ಟೀಯ ಸೇವಾ ಯೋಜನೆಯ ಕಾರ್ಯಕ್ರಮಾದಿಕಾರಿಯಾದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಬಸವರಾಜ್ ಎಸ್.ಎಂ ಮಾತನಾಡುತ್ತಾ  ಸಂವಿಧಾನ ಶಿಲಿ ಡಾ|| ಬಿ.ಆರ್.ಅಂಬೇಡ್ಕರವರು ದೇಶ ಕಂಡ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು ದೇಶಕ್ಕೆ ಅವರು ನೀಡಿದ ಕೋಡುಗೆ ಅಪಾರ ಆದರ್ಶ ಮತ್ತು ಜೀವನ ಶೈಲಿ ನಮಗೆ ಮಾದರಿ ಎಂದು ಹೇಳುತ್ತಾ ಇದೇ ರೀತಿ   ಎಲ್ಲ ಜಯಂತಿಗಳನ್ನು ಆಚರಣೆ ಮಾಡುವದರಿಂದ ನಮ್ಮೆಲ್ಲರಿಗೂ ಅವರ ಆದರ್ಶ ಮತ್ತು ಜೀವನದಿಂದ ಒಳ್ಳೆಯ ಮಾರ್ಗದರ್ಶನ ದೋರೆಯುತ್ತದೆ ಎಂದು ಹೇಳಿದರು .  ಹಲವಾರು ವಿದ್ಯಾರ್ಥಿಗಳು ಡಾ || ಬಿ.ಆರ್.ಅಂಬೇಡ್ಕರ ಜಯಂತಿ ಆಚರಣೆಯ  ಪ್ರಯುಕ್ತ ತಮ್ಮ ಅನಿಸಿಕೆಗಳನ್ನು ಹೇಳಿದರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Top