ಸರಸ್ವತಿ ವಿದ್ಯಾಮಂದಿರದಲ್ಲಿ ವಿಮೋಚನಾ ದಿನಾಚರಣೆ

ಕೊಪ್ಪಳ : ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್‍ಯಕ್ರಮವನ್ನು ಆಚರಿಸಲಾಯಿತು. ಕಾರ್‍ಯಕ್ರಮದ ಆರಂಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ , ಮಹಾತ್ಮಾ ಗಾಂಧಿಜಿ,ಸರ್ಧಾರ ವಲ್ಲಬಾಯಿ ಪಟೇಲರವರ ಭಾವಚಿತ್ರಗಳಿಗೆ ನಗರಸಭಾ  ಉಪಾಧ್ಯಕ್ಷರಾದ ಅಮ್ಜದ್ ಪಟೇಲ್ ರವರು ಪೂಜೆ ನೆರವೇರಿಸಿ ಮಾತನಾಡಿ ಹೈದ್ರಾಬಾದ್ ಸಂಸ್ಥಾನವು ನಿಜಾಮರ ದಬ್ಬಾಳಿಕೆಯಿಂದ ಸ್ವಾತಂತ್ರ್ಯಕ್ಕೆ ಕಾರಣರಾದ ಮಹಾನಾಯಕರುಗಳ ಅದರ್ಶಗಳ್ನು ಬೆಳೆಸಿಕೊಂಡು ಜೀವನದಲ್ಲಿ ಮಾದರಿ ವ್ಯಕ್ತಿಗಳಾಗಿ ಎಂದು ಹೇಳಿದರು.
ನಗರಸಭಾ ಸದಸ್ಯರಾದ ಮಲ್ಲಪ್ಪ ಕವಲೂರ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಪತ್ರೆಪ್ಪ ಪಲ್ಲೇದ ವಹಿಸಿದ್ದರು.  ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್‍ಯದರ್ಶಿಗಳಾದ ಆರ್.ಎಚ್.ಅತ್ತನೂರ ಮತ್ತು ಶಾಲೆಯ ಮುಖ್ಯೋಪಾಧ್ಯಯರು ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಕಾರ್‍ಯಕ್ರಮದ  ನಿರೂಪಣೆಯನ್ನು ಆಶಾ ವಾಯ್ ದೊಡ್ಡಮನಿ, ಸ್ವಾಗತವನ್ನು ರಂಗಮ್ಮ ಮತ್ತು ವಂದನಾರ್ಪಣೆಯನ್ನು ವಿಯಲಕ್ಷ್ಮೀ ಮಾಡಿದರು,
Please follow and like us:
error