You are here
Home > Koppal News > ಎನ್.ಎಸ್.ಎಸ್ ಸಮಾರೋಪ ಸಮಾರಂಭ

ಎನ್.ಎಸ್.ಎಸ್ ಸಮಾರೋಪ ಸಮಾರಂಭ

ಕೊಪ್ಪಳ :- ಭಾಗ್ಯನಗರ ಸರಕಾರಿ ಪ.ಪೂ.ಕಾಲೇಜಿನ ಎನ್.ಎಸ್.ಎಸ್.ಘಟಕದ ಸಮಾರೋಪ ಸಮಾರಂಭವು ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಂಜನಯ್ಯ ಬಡಾವಣೆಯಲ್ಲಿ ಜರುಗಿತು. ಕಳೆದ ಒಂದು ವಾರದಿಂದ ಜರುಗಿದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಿಂದ ಕೊನೆಗೊಂಡಿತು. ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ಸ.ಪ.ಪೂ.ಕಾಲೇಜಿನ ಪ್ರಾಚಾರ್ಯರಾದ   ಸಿ.ವಿ.ಜಡಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ   ಪಿ.ಎಚ್.ಮಂಡಸೋಪ್ಪಿ  ಪ್ರಾಚಾರ್ಯರರು ಸ.ಪ.ಪೂ.ಕಾಲೇಜ. ಕಿನ್ನಾಳ ಅವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ರಾಜಶೇಖರ ಪಾಟೀಲ ಧಾನಿಗಳನ್ನು ಈ ಸಂಧರ್ಬದಲ್ಲಿ  ವಂದಿಸಿದರು. ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ಸಹಾಯ ಸಹಕಾರವನ್ನು ನೀಡಿದ ಭಾಗ್ಯನಗರದ ಗಣ್ಯ ವ್ಯಕ್ತಿಗಳಾದ   ಶ್ರೀನಿವಾಸ ಗುಪ್ತಾ, ಶ್ರೀ ದಾನಪ್ಪ ಕವಲೂರು,  ಶಂಕರ ಲಿಂಗನಬಂಡಿ,   ಪೆದ್ದ ಸುಬ್ಬಯ್ಯ, ಶ್ರೀ ವಸಂತ ಪವಾರ,   ಶ್ರೀನಿವಸ ಹ್ಯಾಟಿ, ಹಾಗೂ ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರನ್ನು ಸ್ಮರಿಸಲಾಯಿತು. ಪ್ರಾರ್ಥನಾ ಗೀತೆಯನ್ನು ಕುಮಾರಿ ನಂದಿತಾ ಕಂಡ್ರೆ ಹಾಡಿದರು,   ಬಸವರಾಜ ಹಂದ್ರಾಳ ಕಾರ್ಯಕ್ರಮವನ್ನು ನಿರೂಪಿಸಿದರು, ಸ್ವಾಗತ ಭಾಷಣವನ್ನು ಉದಯಸಿಂಗ.ವಿ.ಎಸ್. ನಡೆಸಿಕೊಟ್ಟರು, ವಂದನಾರ್ಪಣೆಯನ್ನು ಉಪನ್ಯಾಸಕರಾದ ವೆಂಕಟರಾವ್ ದೇಸಾಯಿ ನಿರ್ವಹಿಸಿದರು.  

Leave a Reply

Top