ವಿಶ್ವ ಏಡ್ಸ್ ದಿನ-೧ ನೇ ಡಿಸೆಂಬರ್ ೨೦೧೪

೨೦೧೪ ರ ಧ್ಯೇಯವಾಕ್ಯ: ಸೊನ್ನೆಗೆ ತನ್ನಿ

ಹೆಚ್.ಐ.ವಿ/ ಏಡ್ಸ್ ಇದು ವೈರಸ್‌ದಿಂದ ಬರುವ ಕಾಯಿಲೆ 
ಹೆಚ್.ಐ.ವಿ. ವೈರಸ್ಸನ್ನು ಕೇವಲ ರಕ್ತ ಪರೀಕ್ಷೆಯಿಂದ ಮಾತ್ರ ಪತ್ತೆಹಚ್ಚಬಹುದು.
ಎಚ್.ಐ.ವಿ ವೈರಸ್ ಮನುಷ್ಯನ ದೇಹದಲ್ಲಿ ಮಾತ್ರ ಬದುಕಿ ಉಳಿಯಬಲ್ಲದು.
ಎಚ್.ಐ.ವಿ ವೈರಸ್ ಮಾನವನ ದೇಹದಲ್ಲಿರುವ ಬಿಳಿರಕ್ತ ಕಣಗಳನ್ನು ನಾಶಮಾಡಿ ಮಾನವನ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವದು.
ಏಡ್ಸ್ ರೋಗವು ಹಲವು ರೋಗ ಲಕ್ಷಣಗಳ ಒಕ್ಕೂಟ
ಹೆಚ್.ಐ.ವಿ.ಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ.
ಹೆಚ್.ಐ.ವಿ ಹೇಗೆ ಹರಡುತ್ತದೆ
ಹೆಚ್.ಐ.ವಿ ಸೋಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತವಾಗಿ ಲೈಂಗಿಕ ಸಂಪರ್ಕ ಹೊಂದಿದಾಗ
ಹೆಚ್.ಐ.ವಿ ಸೋಂಕಿತ ರಕ್ತವನ್ನು ಪಡೆದುಕೊಳ್ಳುವುದರಿಂದ 
ಹೆಚ್.ಐ.ವಿ ಸೊಂಕಿತ ತಾಯಿಯಿಂದ ಮಗುವಿಗೆ ಹರಡುವುದು
ಹೆಚ್.ಐ.ವಿ ಸೊಂಕಿತ ವ್ಯಕ್ತಿಗೆ ಬಳಸಿದ ಸೂಜಿಯನ್ನು ಇನ್ನೊಬ್ಬರಿಗೆ ಬಳಸುವದರಿಂದ
ಹೆಚ್.ಐ.ವಿ ರೋಗ ಹೇಗೆ ಹರಡುವುದಿಲ್ಲ.
ಜೊತೆಯಲ್ಲಿ ಕಲಿಯುವುದರಿಂದ, ಆಡುವುದರಿಂದ, ಕೆಲಸ ಮಾಡುವುದರಿಂದ, ವಾಸ ಮಾಡುವುದರಿಂದ, ಊಟ ತಿಂಡಿ ಬಟ್ಟೆ ಹಂಚಿಕೊಳ್ಳುವುದರಿಂದ, ಒಂದೇ ಸ್ನಾನದ ಮನೆ, ಅಡುಗೆ ಮನೆ ಬಳಸುವುದರಿಂದ, ಕೈ ಕುಲುಕುವುದರಿಂದ, ಜೊತೆಯಲ್ಲಿ ಊಟ ಮಾಡುವುದರಿಂದ, ಸೊಳ್ಳೆ ಅಥವಾ ಕೀಟ ಕಚ್ಚುವುದರಿಂದ, ಸೊಂಕಿತರಿಗೆ ಆರೈಕೆ ಮಾಡುವುದರಿಂದ, ಒಂದೇ ಶೌಚಾಲಯ ಬಳಸುದರಿಂದ ಹೆಚ್.ಐ.ವಿ. ಹರಡುವುದಿಲ್ಲ.
ಏಡ್ಸ್ ರೋಗದ ಲಕ್ಷಣಗಳು 
ಶೇ. ೧೦ ರಷ್ಟು ದೇಹದ ತೂಕ ಕಡಿಮೆ ಆಗುವುದು.
ಕ್ಷಯರೋಗ ಕಾಣಿಸಿಕೊಳ್ಳುವುದು.
ದೀರ್ಘ ಕಾಲದಿಂದ ಜ್ವರ ಬರುವುದು.
ದೀರ್ಘ ಕಾಲದಿಂದ ಬೇಧಿ ಆಗುವುದು.
ಕೆಲವು ಅವಕಾಶವಾದಿ ಲೈಂಗಿಕ ಸೋಂಕುಗಳು ಕಾಣಿಸಿಕೊಳ್ಳುವುದು ಇತ್ಯಾದಿ.
ಕೊಪ್ಪಳ ಜಿಲ್ಲೆಯಲ್ಲಿ ಲಭ್ಯವಿರುವ ಸೇವೆಗಳು- ಉಚಿತ ಹೆಚ್.ಐ.ವಿ. ಪರೀಕ್ಷೆ ಮತ್ತು ಎ.ಆರ್.ಟಿ. ಚಿಕಿತ್ಸೆ.
ಕೊಪ್ಪಳ ಜಿಲ್ಲೆಯಲ್ಲಿ ಏಡ್ಸ್ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ೧೬ ಐಸಿಟಿಸಿ ಕೇಂದ್ರಗಳು, ೪೬ ಎಫ್‌ಐಸಿಟಿಸಿ ಕೇಂದ್ರಗಳು, ೨ ಎಆರ್‌ಟಿ ಕೇಂದ್ರಗಳು, ೩ ಉಪ ಎ.ಆರ್‌ಟಿ ಪ್ಲಸ್ ಕೇಂದ್ರಗಳು, ೭ ಉಪ ಎಆರ್‌ಟಿ ಕೇಂದ್ರಗಳು, ೨ ಎಸ್‌ಟಿಡಿ ಕೇಂದ್ರಗಳು, ೧ ಸರ್ಕಾರಿ ಹಾಗೂ ೧ ಖಾಸಗಿ ರಕ್ತನಿಧಿ ಕೇಂದ್ರಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ೨ ಮಹಿಳಾ ಲೈಂಗಿಕ ಕಾರ್ಯಕರ್ತರ ಟಿಐ ಯೋಜನೆ, ೧ ಪುರುಷ ಸಲಿಂಗಕಾಮಿಗಳ ಟಿಐ ಯೋಜನೆ, ೧ ಟ್ರಕ್ಕರ‍್ಸ್ ಟಿಐ ಯೋಜನೆ, ೧ ಮೈಗ್ರಂಟ್ಸ್ ಟಿಐ ಯೋಜನೆ, ೧ ಸಂಪರ್ಕ ಕಾರ್ಯಕರ್ತರ ಯೋಜನೆ ಹಾಗೂ ೧ ಸಮುದಾಯ ಆರೈಕೆ ಮತ್ತು ಬೆಂಬಲ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುತ್ತವೆ. 

Leave a Reply