ಎಲ್ ಐ ಸಿ ಪ್ರತಿನಿಧಿಗಳ ಲೀಯಾಫಿ ಮತ್ತು ಮಹಾತ್ಮ ಗಾಂಧಿ ದಿನಾಚರಣೆ

ದಿ:೨/೧೦/೨೦೧೩ ರಂದು ಬೆಳಿಗ್ಗೆ ೧೦:೩೦ ಗಂಟೆಗೆ ಎಲ್‌ಐಸಿ ಪ್ರೀ

ಮಿಯಂ ಕಲೆಕ್ಷನ್ ಪಾಯಂಟ್‌ನಲ್ಲಿ ಎಲ್‌ಐಸಿ ಪ್ರತಿನಿಧಿಗಳ ಲೀಯಾಫಿ ಮತ್ತು ಮಹಾತ್ಮ ಗಾಂಧಿ ಹಾಗೂ ಪಂಡಿತ ಜವಾಹರಲಾಲ್ ನೆಹರು ದಿನಾಚರಣೆ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ರಾಜಶೇಖರ ಲಾಡಿ ಲಿಯಾಫಿ ಅಧ್ಯಕ್ಷ ಮಾತನಾಡಿ ಪ್ರತಿನಿಧಿಗಳ ಸಂಘಟನೆಗಾಗಿ ದೇವ ಮೂಡಬಿದರಿ ರವರು ಎಲ್ ಐ ಸಿ ಏಕೀಕರಣದ ನಂತರ ಕಾನೂನುನಲ್ಲಿ ಏಜೆಂಟ್ ಆಕ್ಟ್ ತರುವಲ್ಲಿ ಪ್ರಮುಖ ಪಾತ್ರವಹಿದರು. ಮತ್ತು ಎಸ್.ಎಸ್.ಅಲಿ ಹಾಗೂ ದೇವ ಮೂಡಬಿದರಿ ಇವರ ಸ್ವಾತಂತ್ರ ಪೂರ್ವ ಮತ್ತು ನಂತರ ಲಿಯಾಫಿ ಸಂಘಟನೆಗಾಗಿ ಶ್ರಮಿಸಿದ ಹಾದಿಯನ್ನು ಸ್ಮರಿಸಿದರು. ಗಾಂಧಿಜೀಯವರ ಅಹಿಂಸಾ ಮತ್ತು ಶಾಂತಿಯಿಂದ ನಾವು ಏನಾದರು ಜಯಿಸಬಹುದು ಮತ್ತು ಅವರ ಆದರ್ಶ ನಾವೆಲ್ಲ ಪಾಲಿಸೋಣ ಎಂದರು. ಡಿವಿಜನ್ ಕ್ರೀಢಾ ಅಧ್ಯಕ್ಷ ಶ್ರೀನಿವಾಸ ಪಂಡಿತ ಮಾತನಾಡಿ ಸಂಘಟನೆ ಮುಖಾಂತರ ಮಾತ್ರ ಪ್ರತಿನಿಧಿಗಳ ಬೇಡಿಕೆ ಇಡೇರಲು ಸಾಧ್ಯ ಪ್ರತಿನಿಧಿಗಳ ಸೌಲಭ್ಯ ಹಾಗೂ ಹಕ್ಕುಭಾದ್ಯತೆಗಾಗಿ ಲಿಯಾಫಿ ಸಂಘಟನೆಯು ಹೋರಾಟಮಾಡುತ್ತಾ ಬಂದಿದೆ ಎಂದರು. ಮತ್ತು ನೇಹರು ದೇಶದ ಪ್ರಧಾನಿ ಆಗಿದ್ದರು ಅವರ ಒಬ್ಬ ಮೃದು ಸ್ವಭಾವದ,ಸರಳ ವ್ಯಕ್ತಿತ್ವ ಹೊಂದಿದ್ದರು ಎಂದರು. ಕಾರ್ಯಕ್ರಮದಲ್ಲಿ ಎಲ್ಲ ಪ್ರತಿನಿಧಿಗಳು ಭಾಗವಹಿಸಿದ್ದರು. ಭೀಮಸೇನ ಸಿದ್ಧಾಂತಿ ಸ್ವಾಗತಿಸಿದರೆ ವಂದನಾರ್ಪಣೆ ಸಣ್ಣಬಸಪ್ಪ ಹಳ್ಳಿಕೇರಿ ಮಾಡಿದರು.

Please follow and like us:
error