fbpx

ಮಹಿಳಾ ವಿಧ್ಯಾರ್ಥಿಗಳು ಸಂಸ್ಕೃತಿಕ ವ್ಯೆಕ್ತಿತ್ವ ಬೆಳಿಸಿಕೊಳ್ಳಲಿ, ಅಲ್ಲಮಪ್ರಭು ಬೆಟ್ಟದೂರ ಸಲಹೆ.

ಕೊಪ್ಪಳ- ಆಧುನಿಕ ದಿನಗಳಲ್ಲಿ ಬದುಕುತ್ತಿರುವ ವಿಧ್ಯಾರ್ಥಿಗಳು ಟಿವಿ ನೋಡುವದನ್ನು ಬಿಟ್ಟು ಓದುವದರ ಜೊತಗೆ ಸಂಸ್ಖ್ರತಿಕ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಸಲಹೆ ನೀಡಿದರು. ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಗೆ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರ ಕುಟುಂಬದ ಕಣ್ಣಾಗಿರುವದರಿಂದ ಟಿವಿ ನೋಡುವದನ್ನು ಬಿಟ್ಟು ಕಥೆ, ಕವನಗಳನ್ನು ಓದಬೇಕು ಅಂದಾಗ ಮಾತ್ರ ತಮ್ಮ ಮಕ್ಕಳನ್ನು ಒಳ್ಳೆ ವ್ಯಕ್ತಿಯನ್ನಾಗಿ ಸಮಾಜದಲ್ಲಿ ಗುರುತಿಸಲು ಸಾಧ್ಯ ಅಲ್ಲದೆ ಹೆಣ್ಣೊಂದು ಕಲಿತರೆ ಮನೆಯೊಂದು ಕಲಿತಂತೆ ಅನ್ನವದು ಅಕ್ಷರಶಃ ಸತ್ಯ ಯಾಕಂದರೆ ಪ್ರತಿಯೊಂದು ಮನೆಯಲ್ಲೂ ತಾಯಿಯೇ ಮಕ್ಕಳಿಗೆ ಶಿಕ್ಷಣ ಕೊಡುತ್ತಾಳೆ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿವೃತ್ತ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಬಳಿಕ ಮಾತನಾಡಿ, ಹೈದ್ರಾಬಾದ ಕರ್ನಾಟಕದ ವಿದ್ಯಾರ್ಥಿಗಳಾದ ನಿಮಗೆ ೩೭೧ ಜೆ ಬಹಳ ಅನೂಕೂಲವಾಗಲಿದೆ, ಹಾಗಾಗಿ ಎಲ್ಲರು ಚನ್ನಾಗಿ ಶಿಕ್ಷಣ ಕಲಿತು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ ಅವರು ಪಾಶ್ಚಾತ್ಯ ಜೀವನ ಶೈಲಿಯನ್ನು ಕೈ  ಬಿಟ್ಟು ಭಾರತೀಯ ಸಂಸ್ಕೃತಿಯನ್ನು ಅನುಸರಿಸಬೇಕು ಎಂದು ವಿಧ್ಯಾರ್ಥಿಗಳಿಗೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಪದಂಚಂದ ಮೆಹ್ತಾ ಪ್ರಾಂಶುಪಾಲರಾದ  ಪ್ರಭುರಾಜ ನಾಯಕ, ಶಿವಮೂರ್ತಿ ಗುತ್ತೂರು, ಬಿಡಿ ಮಾಳೆಕೊಪ್ಪ, ಮಂಜುನಾಥ ಶಿರಸಂಗಿ, ದೇವೇಂದ್ರ್ರಪ್ಪ ಗಾಜಿ, ಬಸಮ್ಮ ಪಾಟೀಲ, ಸಯೀದಾ ಮುಲ್ಲಾ , ಮಹಮದ ಅಲಿ ಕೆ, ಆರತಿ ಸಜ್ಜನ , ಶಿವಬಸಪ್ಪ ಮಸ್ಕಿ, ಕಲ್ಲೇಶ ಅಬ್ಬಿಗೇರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನೇತ್ರಾವತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ದೇವೇಂದ್ರ್ರಪ್ಪ ಗಾಜಿ ನಿರೂಪಣೆ ಮಾಡಿದರು.
Please follow and like us:
error

Leave a Reply

error: Content is protected !!