ಗುಣಮಟ್ಟದ ಉತ್ಪನ್ನಗಳ ಖರೀದಿಗೆ ಆದ್ಯತೆ ನೀಡಬೇಕು- ಡಾ. ಪ್ರವೀಣಕುಮಾರ್ ಜಿ.ಎಲ್.

ಕೊಪ್ಪಳ ನ. ೧೭ (ಕ.ವಾ) ಯಾವುದೇ ಸಾಮಗ್ರಿಗಳ ಖರೀದಿ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳ ಖರೀದಿಗೆ ಗ್ರಾಹಕರು ಆದ್ಯತೆ ನೀಡಬೇಕು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಹೇಳಿದರು.
     ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಕರುಣಾ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಮಂಗಳಾವರದಂದು ಏರ್ಪಡಿಸಲಾಗಿದ್ದ ಗ್ರಾಹಕರ ಜಾಗೃತಿ ಕಾರ್ಯಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ದೇಶದಲ್ಲಿ ೧೯೮೦ ಕ್ಕೂ ಪೂರ್ವದಲ್ಲಿ ಸಾರ್ವಜನಿಕರಿಗೆ ಅಗತ್ಯದ ಆಹಾರ ಧಾನ್ಯ, ಎಣ್ಣೆ, ಸಕ್ಕರೆ, ಸೋಪ್ ಮುಂತಾದ ದಿನಿತ್ಯದ ಸಾಮಗ್ರಿಗಳನ್ನು ಸರ್ಕಾರದ ವತಿಯಿಂದಲೇ ಪಡಿತರ ವ್ಯವಸ್ಥೆಯಲ್ಲಿ ಪೂರೈಸಲಾಗುತ್ತಿತ್ತು.  ೧೯೮೦ ರ ನಂತರ ದೇಶದಲ್ಲಿ ಉದ್ಯಮಗಳ ಅಭಿವೃದ್ಧಿ ಹಾಗೂ ನೀತಿಯಲ್ಲಿ ಉಂಟಾದ ಬದಲಾವಣೆಯಿಂದ, ಮುಕ್ತ ಮಾರುಕಟ್ಟೆಯಲ್ಲಿ ದಿನನಿತ್ಯದ ಸಾಮಗ್ರಿಗಳು ಪೂರೈಕೆಯಾಗಲು ಪ್ರಾರಂಭವಾಯಿತು.  ಉತ್ಪನ್ನಗಳ ಗುಣಮಟ್ಟ ಹಾಗೂ ಉತ್ತಮ ಸೇವೆಯ ಬಗ್ಗೆ ಉದ್ಯಮಗಳು ಖಚಿತಪಡಿಸಿಕೊಂಡ ನಂತರವೇ ಗ್ರಾಹಕರಿಗೆ ತಲುಪಿಸಬೇಕೆನ್ನುವ ನಿಯಮವಿದೆ.  ಇದರಲ್ಲಿ ಅನ್ಯಾಯಕ್ಕೆ, ಮೋಸಕ್ಕೆ ಒಳಗಾದ ಗ್ರಾಹಕರು ಪರಿಹಾರ ಕಂಡುಕೊಳ್ಳುವ ಸಲುವಾಗಿಯೇ ೧೯೮೬ ರಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಸ್ತಿತ್ವಕ್ಕೆ ಬಂದಿತು.  ಗ್ರಾಹಕರು ಯಾವುದೇ ಉತ್ಪನ್ನ ಕೊಳ್ಳುವ ಮೊದಲು ಅದರ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು.  ಗ್ರಾಹಕರು ಉತ್ಪನ್ನಗಳ ಬಗ್ಗೆ ಮಾರಾಟಗಾರರಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.  ಗ್ರಾಹಕರು ಯಾವುದೇ ಉತ್ಪನ್ನಗಳನ್ನು ಕೊಳ್ಳುವಾಗ, ಗುಣಮಟ್ಟದ ಬಗ್ಗೆ ಪರಿಶೀಲಿಸಿಯೇ ಖರೀದಿಸಬೇಕು.  ಅನ್ಯಾಯಕ್ಕೆ ಅಥವಾ ವಂಚನೆಗೆ ಒಳಗಾದವರು, ಮಾರಾಟಗಾರರಿಂದ ನ್ಯಾಯ ದೊರೆಯದಿದ್ದಲ್ಲಿ, ಗ್ರಾಹಕರ ವೇದಿಕೆಯ ಮೊರೆ ಹೋಗಲು ಕಾನೂನಿನಲ್ಲಿ ಅವಕಾಶವಿದೆ.  ವಿಪರ್ಯಾಸವೆಂದರೆ, ಸಾರ್ವಜನಿಕರು ನಷ್ಟ ಹಾಗೂ ತೊಂದರೆ ಅನುಭವಿಸುವ ಸಹಿಷ್ಣುತೆಯನ್ನು ಬೆಳೆಸಿಕೊಂಡಿದ್ದಾರೆಯೇ ಹೊರತು, ಅನ್ಯಾಯದ ವಿರುದ್ಧ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳುತ್ತಿಲ್ಲ.  ಸಾರ್ವಜನಿಕರಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಬಗ್ಗೆ ಅರಿವಿನ ಕೊರತೆಯೂ ಇದಕ್ಕೆ ಕಾರಣವಾಗಿರಬಹುದು ಎಂದು  ಪ್ರಭಾರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ಅಭಿಪ್ರಾಯ
     ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ವಸಂತಪ್ರೇಮಾ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.  ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯರುಗಳಾದ ಸುಜಾತ ಅಕ್ಕಸಾಲಿ, ರವಿರಾಜ ಕುಲಕರ್ಣಿ ಅವರು ಉಪಸ್ಥಿತರಿದ್ದರು. ಗ್ರಾಹಕರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನ್ಯಾಯವಾದಿ ಎಂ.ಹನುಮಂತರಾವ್ ಅವರು ಗ್ರಾಹಕರ ಜಾಗೃತಿ ಆಂದೋಲನದಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆ ೧೯೮೬ ರ ಒಂದು ಮೈಲುಗಲ್ಲು ವಿಷಯ ಕುರಿತು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷೆ ಏಕತಾ ಹೆಚ್.ಡಿ ಅವರು ಗ್ರಾಹಕರ ವೇದಿಕೆ ರಾಜ್ಯ ಮತ್ತು ರಾಷ್ಟ್ರೀಯ ಆಯೋಗಗಳಿಂದ ಗ್ರಾಹಕರ ಪರವಾಗಿ ಬಂದಿರುವ ಮಹತ್ವದ ತೀರ್ಪುಗಳ ಕುರಿತು. ನ್ಯಾಯವಾದಿ ಸಾವಿತ್ರಿ ಮುಜುಮದಾರ್ ಅವರು ಗ್ರಾಹಕರ ಜಾಗೃತಿ ಚಳುವಳಿಯಲ್ಲಿ ಮಹಿಳೆಯರ ಪಾತ್ರ ಕುರಿತು ಹಾಗೂ ಆಹಾರ, ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಉಮೇಶ ಅವರು ಆಹಾರ ಕಲಬೆರಕೆ, ತಡೆಗಟ್ಟುವ ವಿಧಾನಗಳು ಮತ್ತು ಕಲಬೆರಕೆಯಲ್ಲಿ ತೊಡಗಿರುವವರಿಗೆ ಕಾನೂನನ್ವಯ ವಿಧಿಸಬಹುದಾದ ಶಿಕ್ಷೆಗಳು ಎಂಬ ವಿಷಯಗಳು ಕುರಿತು ಉಪನ್ಯಾಸ ನೀಡಿದರು.
      ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವೈ.ಹೆಚ್. ಲಂಬು ಸ್ವಾಗತಿಸಿದರು, ಮಹಾಲಕ್ಷ್ಮಿ ಕೇಸರಹಟ್ಟಿ ನಿರೂಪಿಸಿದರು.  ನೇತ್ರಾವತಿ ಪ್ರಾರ್ಥಿಸಿದಿರು.

ಪಟ್ಟರು.

Leave a Reply