ಡಿ.೧೨ ರಂದು ಜಿಲ್ಲಾ ಮಟ್ಟದ ಜಾನಪದ ಗೀತಗಾಯನ ಸ್ಪರ್ಧೆ ಆಹ್ವಾನ.

 ಕೊಪ್ಪಳ-02- ಕರ್ನಾಟಕ ಜಾನಪದ ಪರಿಷತ್ತು ಪ್ರತಿ ವರ್ಷದಂತೆ ಜಿಲ್ಲಾ ಮಟ್ಟದ ಜಾನಪದ ಗೀತಗಾಯನ ಸ್ಪರ್ಧೆಯನ್ನು ಡಿ.೧೨ ರಂದು ನಗರದಲ್ಲಿ ಏರ್ಪಡಿಸಿದೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದಲ್ಲಿ ಕನಿಷ್ಠ ೫ ಜನ, ಗರಿಷ್ಠ ೮ ಜನರಿರಬೇಕು. ಭಾಗವಹಿಸುವ ಕಲಾವಿದರು ೧೫ ರಿಂದ ೩೫ ವರ್ಷದೊಳಗಿನವರಾಗಿರಬೇಕು. ಭಾಗವಹಿಸುವ ಕಲಾವಿದರು ಕಡ್ಡಾಯವಾಗಿ ತಮ್ಮ ವಯಸ್ಸಿನ ದಾಖಲಾತಿ ತರಬೇಕು. ಸ್ಪರ್ಧೆಯಲ್ಲಿ ಚರ್ಮವಾದ್ಯಗಳನ್ನು ಬಳಸಿಕೊಂಡು ಮೂಲ ಜನಪದ ಗೀತೆಗಳನ್ನು ಮಾತ್ರ ಹಾಡಬೇಕು. ಸ್ಪರ್ಧಿಗಳಿಗೆ ೧೦ ನಿಮಿಷ ಕಾಲವಕಾಶ ಒದಗಿಸಲಾಗುವುದು. ಯುವಕ-ಯುವತಿಯರು ಸೇರಿ ಹಾಡಬಹುದು. ಪಾಶ್ಚಾತ್ಯ ವಾದ್ಯಗಳಿಗೆ ಅವಕಾಶ ಇರುವುದಿಲ್ಲ ಜಿಲ್ಲಾ ಮಟ್ಟದಲ್ಲಿ ಗೆದ್ದ ತಂಡಕ್ಕೆ ಪ್ರಥಮ ರೂ.೧೦೦೦ ಹಾಗೂ ದ್ವೀತಿಯ ರೂ.೫೦೦ ಬಹುಮಾನ ನೀಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಗೆದ್ದ ತಂಡಗಳನ್ನು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇರುವ ಜಾನಪದ ಲೋಕದಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು.
    ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ನಗರದ ಸಾಹಿತ್ಯ ಭವನದ ಪಕ್ಕದಲ್ಲಿ ಇರುವ ಸಿರಿಗನ್ನಡ ಪುಸ್ತಕ ಮಳಿಗೆ ಆವರಣದಲ್ಲಿ ಡಿ.೧೨ ರಂದು ಬೆಳಿಗ್ಗೆ ೧೧ ಗಂಟೆಗೆ  ಏರ್ಪಡಿಸಲಾಗಿದೆ. ಭಾಗವಹಿಸಲು ಇಚ್ಚಿಸುವ ತಂಡಗಳು ಡಿ.೧೦ ರ ಒಳಗಾಗಿ ತಮ್ಮ ಹೆಸರನ್ನು ಬಸವರಾಜ ಆಕಳವಾಡಿ, ಜಿಲ್ಲಾ ಅಧ್ಯಕ್ಷರು, ಕರ್ನಾಟಕ ಜಾನಪದ ಪರಿಷತ್ತು, ಸಿರಿಗಂಧ, ವರ್ಣೇಕರ್ ಬಡಾವಣೆ, ವಿವೇಕಾನಂದ ಶಾಲೆ ಹಿಂಭಾಗ ಕೊಪ್ಪಳ-೫೮೩೨೩೧ ಇವರಿಗೆ ಲಿಖಿತ ಅಥವಾ ದೂರವಾಣಿ: ೯೪೮೨೯೩೮೯೧೭ ಮೂಲಕ ನೋಂದಾಯಿಸಿಕೊಳ್ಳಲು ಕೋರಿದೆ.
Please follow and like us:
error