ಥಟ್ ಅಂತ ಹೇಳಿ’ ವಿಶ್ವ ದಾಖಲೆ’ ನಿರ್ಮಿಸಲಿ

ಬೆಂಗಳೂರು ದೂರದರ್ಶನದಲ್ಲಿ (ಚಂದನ ವಾಹಿನಿ) ಪ್ರಸಾರವಾಗುತ್ತಿರುವ ’ಥಟ್ ಅಂತ ಹೇಳಿ’ ಕಾರ್ಯಕ್ರಮ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸಿ ಕನ್ನಡ ಭಾಷಾ ಶುದ್ದೀಕರಿಸುವ ಗುರಿಯೊಂದಿಗೆ ಕಳೆದ ೧೨ ವರ್ಷಗಳಿಂದ ನಿರಂತರವಾಗಿ ಪ್ರಸಾರಗೊಳ್ಳುತ್ತಿದೆ. ಇದನ್ನು ಡಾ. ನಾ. ಸೋಮೇಶ್ವರ ಅವರು ಅಚ್ಚುಕಟ್ಟಾಗಿ ತುಂಬ ವೈಶಿಷ್ಟ್ಯ ಪೂರ್ಣತೆಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಇದುವರೆವಿಗೆ ಸು.೪೦,೦೦೦ಕ್ಕೂ ಹೆಚ್ಚು ಪುಸ್ತಕಗಳನ್ನು ವಿತರಿಸಲಾಗಿದೆ. ವಿದ್ಯುನ್ಮಾನಗಳಿಂದ ಪುಸ್ತಕ ಓದುವ ಹವ್ಯಾಸ ತಗ್ಗಿದೆ ಎನ್ನುವುದಕ್ಕೆ ಅಪವಾದವೆಂಬಂತೆ ಈ ಕಾರ್ಯಕ್ರಮವಿದೆ. ಇದೀಗ ತನ್ನ ೨೫೦೦ ನೇ ಕಂತನ್ನು ಪ್ರಸಾರಗೊಳಿಸಿ ಹೊಸ ’ಲಿಮ್ಕಾ ದಾಖಲೆ’ ನಿರ್ಮಿಸಿದೆ. (ಪ್ರಾದೇಶಿಕ ಭಾಷಾ ರಸಪ್ರಶನೆ ಕಾರ್ಯಕ್ರಮ) ಮುಂದೆಯೂ ಇನ್ನು ಹೆಚ್ಚಿನ ರೀತಿಯಲ್ಲಿ ಯಶಸ್ವಿಗಳಿಸಿ ’ವಿಶ್ವ ದಾಖಲೆ’ ನಿರ್ಮಿಸಲಿ ಎಂದು ಹಾರೈಸೋಣ. . .
– ಕೆ.ಟಿ.ಆರ್.
ಬೆಂಗಳೂರು
Please follow and like us:
error