ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದಿಂದ ಸಂಗೀತದ ಕುರಿತಾದ ವಿಚಾರ ಸಂಕಿರಣ.

 ದಿನಾಂಕ ೦೪-೧೧-೨೦೧೪ರಂದು ಬೆಳಿಗ್ಗೆ ೧೦.೩೦ಕ್ಕೆ ವಿಚಾರ ವೈಭವ ಎಂಬ ಸಂಗೀತದ ಕುರಿತಾದ ವಿಚಾರ ಸಂಕಿರಣವನ್ನು ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದಿಂದ  ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಗೀತ ವಿದ್ವಾಂಸರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಶಂಕರ ಬಿನ್ನಾಳ ಇವರು ವಹಿಸಿಕೊಳ್ಳಲಿದ್ದಾರೆ. 
          ಈ ಸಂಕಿರಣದಲ್ಲಿ ಸಂಗೀತ ವಿದ್ಯಾರ್ಥಿಗಳು ಗಾಯನವನ್ನು ಹಾಡಲಿದ್ದಾರೆ. ಜೊತೆಗೆ ಪ್ರಾಚೀನ ಕಾಲದ ಸಂಗೀತ, ಆಧುನಿಕ ಸಂಗೀತ, ಪಾಶ್ಚಿಮಾತ್ಯ ಸಂಗೀತ, ಸಂಗೀತ ಪ್ರಸಾರದಲ್ಲಿ ಮಾದ್ಯಮಗಳ ಪಾತ್ರ, ಪ್ರಸ್ತುತ ಸಂಗೀತದ ಸ್ಥಿತಿಗತಿ ಮುಂತಾದ ವಿಷಯಗಳನ್ನು ಕುರಿತು ಮಾತನಾಡಲಿದ್ದಾರೆ. ಪಾಲಕರು ಮತ್ತು ಸಂಗೀತ ಪ್ರಿಯರು ಹೆಚ್ಚಿನ ರೀತಿಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ಪ್ರಾಚಾರ್ಯರಾದ  ವೀರೇಶ ಹಿಟ್ನಾಳ್ ಕೋರಿದ್ದಾರೆ.

Leave a Reply