ರೋಟರಿ ಕ್ಲಬ್‌ನ ೩೩ನೇ ಸಂಸ್ಥಾಪನಾ ದಿನಾಚರಣೆ

ರೋಟರ‍್ಯಾಕ್ಟ್ ಕ್ಲಬ್‌ನ ಪುನರ್ ಚಾಲನೆ

ಕೊಪ್ಪಳ  : ಕೊಪ್ಪಳ ನಗರದ ಪಾರ್ಥ ಇಂಟರ್ ನ್ಯಾಷನಲ್ ಹೋಟಲ್‌ನಲ್ಲಿ ಶನಿವಾರ ರೋಟರಿ ಕ್ಲಬ್‌ನ ೩೩ನೇ ಸಂಸ್ಥಾಪನಾ ದಿನಾಚರಣೆ ಹಾಗೂ ರೋಟರ‍್ಯಾಕ್ಟ್‌ನ ಪುನರ್ ಚಾಲನಾ ಸಮಾರಂಭ ಜರುಗಿತು.
ಜಿಲ್ಲಾ ರೋಟರ‍್ಯಾಕ್ಟ್ ಕ್ಲಬ್ ಚೇರಮನ್ ಫಾದರ್ ರೋಟೇರಿಯನ್ ಸಂತೋಷ ಡಯಾಸ ಸಮಾರಂಭದ  ಉದ್ಘಾಟನೆ ನೆರವೇರಿಸಿ ಮಾತನಾಡಿ,ಇಂತಹ ಸಂಸ್ಥೆ ಇಂದಿನ ದಿನಮಾನಗಳಲ್ಲಿ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಈ ಸಂಸ್ಥೆಯ ಸದಸ್ಯರು ಕಡ್ಡಾಯವಾಗಿ ತಿಂಗಳ ಸಭೆಯಲ್ಲಿ ಪಾಲ್ಗೊಳ್ಳಬೇಕು, ಶಿಸ್ತಿನಿಂದಿರಬೇಕು, ಈ ಸಂಸ್ಥೆ ನಮ್ಮದು ಎನ್ನುವ ಭಾವನೆಯಿರಬೇಕು ಹಾಗೂ  ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ನನಗೆ ದೇವರು ನೀಡಿದ ಅವಕಾಶವೆಂದು ಭಾವಿಸಿ ಬೇರೆ ಯಾವುದೇ ಸಂಸ್ಥೆಗಳು ಮಾಡದ ಕೆಲಸವನ್ನು ಸಮಾಜಕ್ಕೆ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಕರೆ ನೀಡಿದರು.
ಪಿ.ಡಿ.ಜಿ ಡಾ.ಕೆ.ಜಿ.ಕುಲಕರ್ಣಿ ಮಾತನಾಡಿ, ೩೩ ವರ್ಷಗಳಿಂದ ಕೊಪ್ಪಳದ ರೋಟರಿ ಕ್ಲಬ್ ನಡೆದು ಬಂದ  ದಾರಿಯ ಕುರಿತು ವಿವರಿಸಿದರಲ್ಲದೇ, ಪ್ರಾರಂಭದ ದಿನಗಳಲ್ಲಿ ರೋಟರಿ ಕ್ಲಬ್ ಸಾಕಷ್ಟು ತೊಂದರೆ ಅನುಭವಿಸದರೂ ೩೩ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯವೆಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷರಾದ ವೀರಣ್ಣ ಕಮತರ ಮಾತನಾಡಿ, ಸುಮಾರು ವರ್ಷದಿಂದ ಕೆಲವೇ ಸದಸ್ಯರನ್ನು ಹೊಂದಿದ ಈ ರೋಟರಿ ಕ್ಲಬ್ ೩೩ನೇ ಸಂಸ್ಥಾಪನಾ ದಿನಾಚರಣೆ ಸಂದರ್ಭದಲ್ಲಿ ೧೦೪ ಸದಸ್ಯರನ್ನು ಹೊಂದಿ ಇತಿಹಾಸವನ್ನು ಮಾಡಿದೆ ಎಂದರು.
ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷರಾದ ಇಂದಿರಾ ಭಾವಿಕಟ್ಟಿ ಅವರಿಗೆ ಉತ್ತಮ ರೋಟರಿ ಕ್ಲಬ್ ಅಧ್ಯಕ್ಷ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು. 
ಈ ಸಂದರ್ಭದಲ್ಲಿ ರೋಟರ‍್ಯಾಕ್ಟ ಕ್ಲಬ್‌ನ ಅಧ್ಯಕ್ಷರಾಗಿ ನಾಗರಾಜ ಪಾಟೀಲ್,ಉಪಾಧ್ಯಕ್ಷರಾಗಿ ರಾಜೇಶ ಯಾವಗಲ್,ಕಾರ್ಯದರ್ಶಿಯಾಗಿ ಮಂಜುನಾಥ ಹಾಗೂ ಇತರ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು.
ಸಮಾರಂಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಡಾ.ಶ್ರೀನಿವಾಸ ಹ್ಯಾಟಿ, ರೋಟರ‍್ಯಾಕ್ಟ್ ಚೇರಮನ್  ಚಂದ್ರು ಪಾಟೀಲ ಹಲಗೇರಿ ಸೇರಿದಂತೆ ರೋಟರಿ ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಡಾ.ಚಂದ್ರಶೇಖರರಡ್ಡಿ ಕರಮುಡಿ ಅವರು ಸ್ವಾಗತಿಸಿದರು, ಖಜಾಂಚಿ ಎ.ಜಿ ಶರಣಪ್ಪ ಸಮಾರಂಭ ನಿರೂಪಿಸಿ, ವಂದಿಸಿದರು. 

Leave a Reply