ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಬೈಕ್‌ರ‍್ಯಾಲಿ

 ಕೊಪ್ಪಳ : ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ಕೊಪ್ಪಳ ನಗರದಲ್ಲಿ ಬೈಕ ರ‍್ಯಾಲಿಯನ್ನು ಮಾಡಲಾಯಿತು. ಈ ಬೈಕ್ ರ‍್ಯಾಲಿ ಬೆಳಿಗ್ಗೆ ೧೦:೦೦ ಗಂಟೆಗೆ ಕೊಪ್ಪಳ ನಗರದ ಬಸ ನಿಲ್ದಾಣದಿಂದ ಆರಂಭವಾಗಿ ಅಶೋಕ ವೃತ್ತ ಮಾರ್ಗವಾಗಿ ಗಡಿಯಾರ ಕಂಬ ಅಂಬೇಡ್ಕರ ವೃತ್ತ ಮಾರ್ಗವಾಗಿ ಅಶೋಕ ವೃತ್ತದಲ್ಲಿ ಘೋಷಣೆಗಳನ್ನು ಕುಗುತ್ತಾ ವಿಜೃಂಬಣೆಯಿಂದ ಆಚರಿಸಲಾಯಿತು. 
ನಂತರ ರಾಕೇಶ ಪಾನಘಂಟಿ, ಯುವಕರು  ಸ್ವಾಮಿ ವಿವೇಕಾನಂದರ ಗುಣಗಳನ್ನು ಬೆಳಸಿಕೊಳ್ಳಬೇಕು ಭಾರತ ಎಂದರೆ ಜಗತ್ತಿಗೆ ಮಾದರಿಯಾಗಬೇಕು ಅಂತಹ ಗುಣಗಳನ್ನು ನಾವು ಬೆಳಸಿಕೊಳ್ಳಬೇಕು ಯುವಕರು ಜಾಗೃತರಾಗಿ ದುಷ್ಟಚಟಗಳಿಂದ ದೂರವಿರಬೇಕು. ಯುವಕರು ದೇಶಕ್ಕಾಗಿ ಒಳ್ಳೆಯ ಕೆಲಸ  ಮಾಡುವ ಹಂಬಲದಲ್ಲಿ  ಇರಬೇಕು ಎಂದು ಮಾತನಾಡಿದರು. 
ಈ ಸಂದರ್ಭದಲ್ಲಿ ಪ್ರವೀಣ ಇಟಗಿ, ರಾಕೇಶ ಪಾನಘಂಟಿ, ಆನಂದ ಆಶ್ರೀತ್, ಮಲ್ಲಿಕಾರ್ಜುನ, ಗುರುಲಿಂಗಪ್ಪ ಆರೇರ, ದೀಪಕ ಹಿರೇಮಠ, ಗವಿ ಹಂಡಿ, ಚಂದ್ರು ಉತ್ತಂಗಿ, ಮಲ್ಲು ಪಲ್ಲೇದ, ಶ್ರೀಧರ ತುರವಿಹಾಳ, ಭಿಮಸೇನ, ನೂರಾರು ಯುವಕರು ಬೃಹತ ರ‍್ಯಾಲಿಯಲ್ಲಿ ಉಪಸ್ಥಿತರಿದ್ದರು. 

Leave a Reply