ಗುರುಸ್ಮರಣೋತ್ಸವದ ಹಲವು ಮೆರಗುಗಳು.

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೦೪-೦೪-೨೦೧೩ ರ ಗುರುವಾರದಂದು  ಶ್ರೀ ಮ.ನಿ.ಪ್ರ.ಜ.ಲಿಂ.ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವದ ನಿಮಿತ್ಯವಾಗಿ  ಬೆಳಿಗ್ಗೆ  ೭.೩೦ ಗಂಟೆಗೆ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಳೆಮಲ್ಲೇಶ್ವರ ದೇವಸ್ಥಾದಿಂದ ಶ್ರೀಗವಿಮಠದವರೆಗೆ ಪಾದಯಾತ್ರೆ ನಡೆಯಿತು. ಈ ಪಾದಯಾತ್ರೆಯಲ್ಲಿ ಬಳಗಾನೂರಿನ ಶ್ರೀಶಿವಶಾಂತವೀರ ಶರಣರು, ಶ್ರೀಷ.ಬ್ರ.ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ಹೆಬ್ಬಾಳ, ಮತ್ತಿತರ ಹರಗುರುಚರ ಮೂರ್ತಿಗಳು ಭಾಗವಹಿಸಿದ್ದರು. ಬಿಸಿಲನ್ನು ಲೆಕ್ಕಿಸದೇ ಪೂಜ್ಯರ ಜೊತೆಯಾಗಿ ಅಸಂಖ್ಯಾತ  ಸದ್ಭಕ್ತರು,  ಕೊಪ್ಪಳ ಹಾಗೂ ಸುತ್ತಮುತ್ತಲಿನ ಪ್ರಮುಖರು, ರಾಜಕೀಯ ಧುರೀಣರು, ಭಾಗವಹಿಸಿದ್ದರು. ಓಂ ಶಿವಶಾಂತವೀರಾಯ ನಮ: ಎಂಬ ಗುರುನಮನದ ಮೊಳಗು ಎಲ್ಲೆಡೆ ಪಸರಿಸುತ್ತಿತ್ತು. ಹತ್ತು ಏಳೆಂಟು ಸಾವಿರ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ರಸ್ತೆಯುದ್ದಕ್ಕೂ ಭಕ್ತಾಧಿಗಳು ನಿಂತುಕೊಂಡು ಪೂಜ್ಯರಿಗೆ ಹೂಮಳೆ ಸುರಿಸುತ್ತಾ ಸ್ವಾಗತಿಸುತ್ತಿದ್ದರು.  ಪಾದಯಾತ್ರಿಗಳಿಗೆ ದಾರಿಯಲ್ಲಿ ಕೆಲವು ಸಂಘಟನೆಯವರು ಶರಬತ್ ಹಾಗೂ ನೀರಿನ ವ್ಯವಸ್ಥೆ ಮಾಡಿ ಅವರ ದಣಿವಾರಿಸುವಂತಹ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು. ಓಂ ಶಿವಶಾಂತವೀರಾಯ ನಮ: ಎಂಬ ಗುರುನಮನದ ಮೊಳಗು ಎಲ್ಲೆಡೆ ಪಸರಿಸುತ್ತಿತ್ತು.  ಪಾದಯಾತ್ರೆಯು ಮಳೆಮಲ್ಲೇಶ್ವರ ದೇವಸ್ಥಾನದಿಂದ ಬನ್ನಿಕಟ್ಟಿ ಮಾರ್ಗವಾಗಿ ಬಸ್ಸ ಸ್ಟ್ಯಾಂಡ್, ಅಶೋಕಸರ್ಕಲ್, ಜವಾಹರ ರಸ್ತೆ, ಶಾರದಾ ಟಾಕೀಸ್ ಮಾರ್ಗವಾಗಿ ೧೧ ಗಂಟೆಗೆ ಶ್ರೀಗವಿಮಠ ತಲುಪಿತು.

ಕೊತಬಾಳರ ಕೊಡುಗೆ
ಕೊಪ್ಪಳ:  ಡಾ. ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯ ಸಂಶೋಧನೆಗೆ ತಮ್ಮನ್ನು ತಾವು ತೊಡಗಿಸಿಕೊಂಡು  ವಚನ ಶಾಸ್ತದ ಪಿತಾಮಹರಾಗಿದ್ದೂ ಎಲ್ಲರಿಗೂ ತಿಳಿದ ವಿಷಯ. ಇದೇ ರೀತಿ ಸಮಾಜಕ್ಕೆ ಸರ್ವರೀತಿಯಿಂದ ತಮ್ಮನ್ನು ಸಮರ್ಪಿಸಿಕೊಂಡಂತವರು ಹೆಸರಾಂತ ವಕೀಲರಾದ ವಿ.ಜಿ.ಕೊತಬಾಳ. ಇವರು ಶ್ರೀಗವಿಮಠದ ಎಲ್ಲ ಕೆಲಸ ಕಾರ್ಯಗಳಿಗೆ ಬೆನ್ನೆಲುಬಾಗಿದ್ದಾರೆ. ಇವರು ಕೊಪ್ಪಳಕ್ಕೆ ಶ್ರೀಶಿವಶಾಂತ ಮಂಗಲಭವನ, ಶ್ರೀಮತಿ ಶಾರದಮ್ಮ ಕೊತಬಾಳ ಬಿ.ಬಿ.ಎಂ ಹಾಗೂ ಬಿ.ಸಿ.ಎ ಕಾಲೇಜು, ಮತ್ತಿತತರ ಭವ್ಯ ಕೊಡುಗೆಗಳನ್ನು ನೀಡಿದ್ದಾರೆ. ಈಗ ಮತ್ತೊಂದು ಮಹಾನ್ ಕೊಡುಗೆ ನೀಡಲು ಮುಂದಾಗಿದ್ದೂ ಸ್ವಾಗತಾರ್ಹ. ಶಿವಶಾಂತವೀರ ಮಹಾಸ್ವಾಮೀಗಳ ಪುಣ್ಯ ಸ್ಮರಣೆಯ ನಿಮಿತ್ಯ  ವಿ.ಜಿ.ಕೊತಬಾಳರು  ತಮ್ಮ ತಾಯಿಯವರಾದ ಲಿಂ ಶ್ರೀಮತಿ ಚನ್ನಬಸಮ್ಮ ಗುರುಶಿದ್ದಪ್ಪ  ಕೊತಬಾಳ ಇವರ ಸ್ಮರಣಾರ್ಥ ವೃದ್ಧಾಶ್ರಮ  ಕಟ್ಟಡ ನಿರ್ಮಾಣದ ಗುರುತರ ಜವಾಬ್ದಾರಿಯ ಸಂಕಲ್ಪ ತೊಟ್ಟಿದ್ದಾರೆ. ಈ ಕಟ್ಟಡ ನಿರ್ಮಾಣ ಕಾರ್ಯದ ಭೂಮಿ ಪೂಜೆಯನ್ನು ಬೆಳಿಗ್ಗೆ ೧೧.೩೦ ಗಂಟೆಗೆ  ಯಾತ್ರಿ ನಿವಾಸದ ಹತ್ತಿರ  (ಹರ್ಬಲ್ ಗಾರ್ಡನ್) ಹತ್ತಿರ ವಿ.ಜಿ.ಕೊತಬಾಳರು  ಜೀವನ ಸಂಧ್ಯಾಶ್ರಮ ವೃದ್ಧಾಶ್ರಮದ  ಶ್ರೀಮತಿ ಮಣಿಬಾಯಿ ಷಾ  ಅವರೊಂದಿಗೆ ನೆರವೇರಿಸಿದರು. ಪೂಜ್ಯ ಶ್ರೀಗವಿಸಿದ್ದೇಶ್ವರ ಸ್ವಾಮಿಗಳು, ಶ್ರೀಶಿವಶಾಂತವೀರ ಶರಣರು ಹಾಗೂ ಇತರ ಸ್ವಾಮಿಗಳ ಉಪಸ್ಥಿತಿಯಲ್ಲಿ ಜರುಗಿತು. ಶಾಸಕ ಸಂಗಣ್ಣ ಕರಡಿ, ಎಸ್.ಅರ್.ನವಲಿ ಹಿರೇಮಠ,  ಜಿ.ಪಂ.ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್, ಪ್ರದೀಪಗೌಡ ಮಾಲಿಪಾಟೀಲ,ಕೆ.ಎಂ.ಸಯ್ಯದ್, ಪ್ರಭು ಹೆಬ್ಬಾಳ, ಡಾ.ಕೆ.ಜಿ.ಕುಲಕರ್ಣಿ, ಬಸವರಾಜಬಳ್ಳೊಳ್ಳಿ, ಬಸವರಾಜ ಪುರದ, ಸತೀಶ, ಸಂಜಯ ಕೊತಬಾಳ ಹಲವಾರು ಗಣ್ಯರು ಭಾಗವಸಿ

ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಯಶಸ್ವಿ
ಪೂಣ್ಯ ಸ್ಮರಣೆ ಅಂಗವಾಗಿ ಬೆಳಿಗ್ಗೆ ೯.೩೦ ರಿಂದ ಸಾಯಂಕಾಲ ೫.೦೦ ಗಂಟೆಯವರೆಗೆ  ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಶ್ರೀಗವಿಮಠದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಜರುಗಿತು. ಹಲವಾರು ರೋಗಿಗಳು ಇದರ ಸದುಪಯೋಗ ಪಡೆದುಕೊಂಡರು. ಬೆಳಿಗ್ಗೆಯಿಂದ  ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯವು ಜನಜಂಗುಳಿಯಿಂದ ತುಂಬಿತ್ತು. ನಾಡಿನ ಹೆಸರಾಂತ ವೈದ್ಯರು ಆಗಮಿಸಿ ರೋಗಿಗಳ ತಪಾಸಣೆ ನಡೆಸಿದರು. ಡಾ.ಬಸವರಾಜ ಸವಡಿ ಪ್ರಾಚಾರ್ಯರು ಹಾಗೂ ಡೀನ್‌ಗಳಾದ ಡಾ.ಕೆ.ಬಿ.ಹಿರೇಮಠ ಹಾಗೂ ಸಕಲ ಸಿಬ್ಬಂಧಿಗಳ ನೇತೃತ್ವದಲ್ಲಿ ಶಿಬಿರ ಯಶಸ್ವಿಯಾಯಿತು.

Related posts

Leave a Comment