ಪ್ರೀತಿಯೆಂದರೆ….

ಪ್ರೀತಿಯೆಂದರೆ….
ಎಂಜಿ ರಸ್ತೆಯಲಿ ಕೈಗೆ ಕೈ
ಮೈಗೆ ಮೈ ಬೆಸೆದುಕೊಂಡು ಅಡ್ಡಾಡುವುದು
ಪ್ರೀತಿಯೆಂದರೆ
ಸೈಬರ್ ಸೆಂಟರ್ ನ ಕ್ಯಾಬಿನ್ ನೊಳಗೆ ಮುದ್ದಾಡುವುದು
ಪ್ರೀತಿಯೆಂದರೆ
ಫೇಸ್ ಬುಕ್ಕಿನೊಳಗೆ ಇಣುಕಿ
ಐಫೋನ್ ಗಳ ಗೋಡೆಚಿತ್ರವಾಗುವುದು
ಪ್ರೀತಿಯೆಂದರೆ
ಆಕ್ಸ್ ಮತ್ತು ಇವಾಗಳ ಮೇಲಾಟ, ತಡಕಾಟ


ಪ್ರೀತಿಯೆಂದರೆ
ಕಾಲ್ಗೆಜ್ಜೆನಾದಕ್ಕೆ ಸೋತು
ಧ್ವನಿಗೆ ಕಾತರಿಸಿ
ಕಣ್ ಸನ್ನೆಗಳೇ ಭಾಷೆಯಾಗುವುದು

ಪ್ರೀತಿಯೆಂದರೆ
ಕಲ್ಲುಕೋಟೆಗಳ ಮೇಲೆ
ಮರಗಿಡಗಳ ಮೇಲೆ
ಅಮರ ಅಕ್ಷರಗಳಾಗುವುದು

ಪ್ರೀತಿಯೆಂದರೆ
ಮೌನದಲಿ ಮಾತಾಗಿ
ಕಣ್ಣೊಳಗಿನ ಬಿಂಬವಾಗಿ,ಚಿತ್ರಗಳಾಗಿ
ಕಾಲನ ಕೈಯಲ್ಲಿ ಕರಗಿಹೋಗುವುದು

ಪ್ರೀತಿಯೆಂದರೆ……

Leave a Reply