fbpx

ಹಾಲ ಓಕಳಿಯಲ್ಲಿ ಅದ್ಭುತ ರಥೋತ್ಸವ

ಉತ್ತರ ಕರ್ನಾಟಕ ಎಂದಾಕ್ಷಣ ಎಲ್ಲರ ಕಣ್ಣ ಮುಂದೆ ಬರುವುದು ಆ ಭಾಗದ ಆಚರಣೆಯಲ್ಲಿರುವ ವೈವಿಧ್ಯಮಯ, ಜಾತ್ರೆಗಳು ಮತ್ತು ಏಕತೆಯ ಹಬ್ಬಗಳು. 
 ಅಂಥ ವೈಶಿಷ್ಟತೆಯನ್ನು ಹೊಂದಿರುವ ಜಾತ್ರೆ ಕೊಪ್ಪಳ ಜಿಲ್ಲೆಯ

ಯಲಬುರ್ಗಾ ತಾಲೂಕಿನ ಚಿಕ್ಕ ವಂಕಲಕುಂಟಿಯ ಮಾರುತೇಶ್ವರ ಜಾತ್ರೆ.

ಜಾತ್ರೆಯಲ್ಲಿ ಸಾಮಾನ್ಯವಾಗಿ ರಥೋತ್ಸವ ಮತ್ತು ಜೋಗೆರ್ (ಸ್ಟೇಷನರಿ) ಅಂಗಡಿಗಳು, ಸಾಮೂಹಿಕ ಮದುವೆ, ಅನ್ನ ಸಂತರ್ಪಣೆ ಕುಸ್ತಿ, ಮುಂಗೈ ಮತ್ತು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಇರುವುದು ವಾಡಿಕೆ. 
ಚಿಕ್ಕವಂಕಲಕುಂಟಿಯ ಜಾತ್ರೆಯು ಬಿನ್ನತೆಯೊಂದಿಗೆ ವಿಶೇಷವಾದ ಹಾಲ ಒಕಳಿಯನ್ನು ಆಡುವುದು ಕರ್ನಾಟಕದಲ್ಲಿ ಅಪರೂಪದ ಆಚರಣೆಯನ್ನು ಇಂದಿನ ಮಾಹಿತಿ ತಂತ್ರಜ್ಞಾನ ಕಾಲದಲ್ಲಿ ಉಳಿಸಿಕೊಂಡು ಬಂದಿದೆ.
 ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ ಟನ್ ಗಟ್ಟಲೆ ಭಂಡಾರ(ಅರಸಿಣ ಪುಡಿ)ವನ್ನು ಲಕ್ಷ್ಮೀ ದೇವಿಯ ಜಾತ್ರೆಗೆ ಬಂದಿರುವ ಭಕ್ತರ ಮೇಲೆ ಎರಚಿ ಮೂರುದಿನಗಳ ಕಾಲ ಆಚರಣೆ ಮಾಡುವುದನ್ನು ನೋಡಿದ್ದೇವೆ. ಪವಿತ್ರತೆಯ ಸಂಕೇತ ಹಾಗೂ ವೈಜ್ಞಾನಿಕ ದೃಷ್ಟಿಯಿಂದ ಎಲ್ಲಾ ಪೋಷಕಾಂಶಗಳನ್ನು ಹೊಂದಿರುವ ಬಡವರ ಅಂಮೃತ ಎಂದು ಕರೆಯುವ ಹಾಲನ್ನು ಜಾತ್ರೆಯಲ್ಲಿ ಬಂದಿರುವ ಭಕ್ತರಿಗೆ ಎರಚಿ ಒಕಳಿ ಆಡುವುದನ್ನು ನೋಡಲು ಚಿಕ್ಕ ವಂಕಲಕುಂಟಿಯ ಜಾತ್ರೆಯಲ್ಲಿ ಮಾತ್ರ ಸಾಧ್ಯ.
ಈ ವಿಶಿಷ್ಟ ಆಚರಣೆಯ ಕೇಂದ್ರ ಬಿಂದು ಇಲ್ಲಿನ ಹನುಂತದೇವರು. ಈ ಭಾಗದಲ್ಲಿ ಅತ್ಯಂತ ಪ್ರಸಿದ್ಧವಾದ ಮತ್ತು ಭಕ್ತರ ಇಷ್ಟಾರ್ಥಗಳನ್ನು ಇಡೇರಿಸುವ ಏಕೈಕ ಆರಾಧ್ಯ ದೇವನಾಗಿರುವ ಮಾರುತಿ. ಪ್ರತಿಷ್ಠಾಪನೆ ವರ್ಷ ಈ ಭಾಗದ ಜನರಿಗೆ ಮತ್ತು ದನ ಕರುಗಳಿಗೆ ಕಾಡಾಟ(ರೋಗಗಳು) ಬಂದು ತೀವ್ರವಾದ ಪ್ರಾಣ ಹಾನಿಯಾಗಿತ್ತು ಎನ್ನುವುದು ಹಳೆಯ ಪರಂಪರೆ. ಆಗ ಆರಂಭವಾದ ಈ ಹಾಲ ಒಕಳಿ ಆಡುವುದರಿಂದ ತಮಗೆ ಒಳ್ಳೆಯದಾಗಿತ್ತು ಎಂದು ನಂಭಿರುವ ಭಕ್ತರು  ತಮ್ಮ ಜಾನುವಾರುಗಳಿಗೆ ಯಾವುದೆ ರೀತಿಯ ರೋಗಗಳು ಬರುವುದಿಲ್ಲ ಎನ್ನುವುದು ಇವರ ಅಪಾರವಾದ ನಂಭಿಕೆ.
ಹಿನ್ನೆಲೆ: ೨ ನೂರು ವರ್ಷಗಳ ಹಿಂದೆ ವ್ಯಾಸರಾಯರು ಈ ದೇವಾಲಯವನು ಸ್ಥಾಪನೆ ಮಾಡಿದ್ದಾರೆ. ಕೈಯಲ್ಲಿ ಗರಗಸವನ್ನು ಹಿಡಿದ ಆಂಜನೇಯನ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಿದ್ದಕ್ಕೆ ಐತಿಹ ಇದೆ. ಅಂದಿನಿಂದ ಇಂದಿನ ವರೆಗೆ ಪ್ರತಿ ವರ್ಷ ಭಾರತ ಹುಣ್ಣಿಮೆಯಿಂದ ಸಪ್ತಮಿಯವರೆಗೆ ಜಾತ್ರೆಯನ್ನು ಎಳು ದಿನಗಳ ವರೆಗೆ ಆಚರಣೆ ನಡೆಯುತ್ತಿದೆ. ಇದೆ ದಿನಾಂಕ ೨೧-೦೨-೨೦೧೪ ರ ಷಷ್ಟಿಯ ದಿನದಂದು ಶ್ರೀ ಮಾರುತೇಶ್ವರ ಪುಜಾರಿಯಿಂದ ಹೇಳಿಕೆ(ಭಷ್ಯ) ನಡೆಯುತ್ತದೆ. ದಿನಾಂಕ ೨೨-೦೨-೨೦೧೪ರ ಸಪ್ತಮಿಯ ದಿನದಂದು ಇಲ್ಲಿನ ಗೊಲ್ಲರ ಜನಾಂಗವು ಈ ಹಾಲ ಒಕಳಿಯನ್ನು ಸಂಭ್ರಮ ಸಡಗರದಿಂದ ಆಡುತ್ತಾರೆ. ಹಾಲ ಒಕಳಿಯ ನಂತರ ಮಹಾರಥೋತ್ಸವ ನಡೆಯಲಿದೆ. ಇಂಥ ದೇವಸ್ಥಾನ ವಿರುವುದು ಕರ್ನಾಟಕದಲ್ಲಿ ಎರಡು ಕಡೆ ಮಾತ್ರ ಈ ಆಂಜನೇಯನ ದರ್ಶನ ಮಾಡಿದರೆ ಪಾಪ ಕರ್ಮಗಳು ಕಳೆಯುತ್ತವೆ ಎನ್ನುವುದು ಈ ದೇವರ ಭಕ್ತರ ಅಂಭೊಣ. 
ಸಂಗ್ರಹ: ಭಾರತಹುಣ್ಣಿಮೆಯ ಪಾಡ್ಯದಿಂದ ಪವಿತ್ರತೆಯ ಭಾವನೆಯಲ್ಲಿ ತಮ್ಮ ಹಸು ಮತ್ತು ಕುರಿ, ಮೇಕೆಗಳಿಂದ ಹಾಲನ್ನು ಕರೆದು ಮೀಸಲು ಹಾಕಿ ಸಾವಿರಾರು ಲೀಟರ್ ಹಾಲನ್ನು ಸಂಗ್ರಹಿಸಿರುತ್ತಾರೆ. ಜಾತ್ರೆಯ ದಿನದಂದು ತಾವು ಸಂಗ್ರಹಿಸಿದ ಹಾಲನ್ನು ದೊಡ್ಡ ಗಡಿಗಿ(ಮಡಿಕೆ)ಯಲ್ಲಿ ತಂದು ಜಾತ್ರೆಗೆ ಬಂದಿರು ಭಕ್ತರ ಮೇಲೆ ಬಣ್ಣದ ರೀತಿಯಲ್ಲಿ ಹಾಲನ್ನು ಎರಚಿ ಹಾಲೊಕಳಿ ಆಡುವುದರೊಂದಿಗೆ ರಥೋತ್ಸವಕ್ಕೆ ಸಿದ್ಧತೆ ನಡೆಯುತ್ತದೆ.ಇದು ಈ ಜಾತ್ರೆಯ ವಿಶೇಷ.
 ಕೊಪ್ಪಳ ಜಿಲ್ಲೆಯಲ್ಲಿ ಎರಡನೇಯ ದೊಡ್ಡ ಜಾತ್ರೆ ಇದಾಗಿರುವುದರಿಂದ ಲಕ್ಷಾನುಗಟ್ಟಲೆ ಭಕ್ತರು ಸೇರುವುದು ಸಹ ನೋಡುಗರಿಗೆ ಮುದ ನೀಡುವಂತ್ತಿರುತ್ತದೆ.
 ಎಳು ದಿನಗಳ ಕಾಲ ನಡೆಯುವ ವಿಶಿಷ್ಟ ರೀತಿ ಜಾತ್ರೆ ಮತ್ತು ರಥೋತ್ಸವವನ್ನು ನೋಡಲು ನೀವು ಬರುವುದಾದರೆ ಜಿಲ್ಲಾ ಕೇಂದ್ರದಿಂದ ಬಸ್‌ಮುಖಾಂತರ ಕೇವಲ ೪೦ ಕಿ.ಮೀ. ಹಾಗೂ ರೈಲು ಮುಖಾಂತರ ಬರುವುದಾದರೆ ಗಿಣಗೇರಿಯಿಂದ ೩೦ ಕಿ.ಮೀ ದೂರವಿದೆ ಚಿತ್ರದುರ್ಗಾ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ೧೩ ರಿಂದ ಕೇವಲ ೨ ಕಿ. ಮೀ ಅಂತರದಲ್ಲಿರುವ ಚಿಕ್ಕ ವಂಕಲಕುಂಟಿ. ಉತ್ತರ ಕರ್ನಾಟಕದ ವಿಶಿಷ್ಟ ಹಾಲ ಒಕಳಿ ಜಾತ್ರೆಗೆ ನೀವು ಒಮ್ಮೆ ಬನ್ನಿ ಇಲ್ಲಿನ ಭಕ್ತರ ಭಾವನೆಯನ್ನು ಸವಿಯುವ ಅವಕಾಶ ನಿಮಗು ಸಿಗಲಿದೆ.
ಚಿತ್ರ-ಲೇಖನ  :  ರಾಜಾಸಾಬ್ ತಾಳಕೇರಿ :  ೯೫೩೫೮೩೨೯೫೨/೯೯೦೧೬೭೨೩೩೧
ವಿಳಾಸ: ರಾಜಾಸಾಬ್ ಮ್ಯಾಗಳ ಮನೆ  ಸಾ.ಗೆದಗೇರಿ.ತಾ.ಯಲಬುರ್ಗಾ. ಜಿ. ಕೊಪ್ಪಳ
Please follow and like us:
error

Leave a Reply

error: Content is protected !!