ಎಡಗೈ ಉಂಗುರ ಬೆರಳಿಗೆ ಮತದಾನದ ಗುರುತು

 ಈ ಬಾರಿಯ ವಿಧಾನಸಭೆ ಚುನಾವಣೆಗೆ ಮತದಾನ ಮಾಡುವ ಮತದಾರರ ಎಡಗೈ ಉಂಗುರ ಬೆರಳಿಗೆ ಅಳಿಸಲಾಗದ ಇಂಕಿನ ಗುರುತು ಹಾಕಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

  ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆ ಕಳೆದ ತಿಂಗಳ ಹಿಂದಷ್ಟೇ ಜರುಗಿದ್ದು, ಈ ಸಂದರ್ಭದಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಹಾಕಿರುವ ಮತದಾನದ ಗುರುತು ಇನ್ನೂ ಹಾಗೆಯೇ ಇರುವುದರಿಂದ, ಈ ಬಾರಿಯ ವಿಧಾನಸಭೆ ಚುನಾವಣೆಗೆ ಮತದಾರರಿಗೆ ಮತದಾನದ ಗುರುತನ್ನು ಎಡಗೈ ಉಂಗುರ ಬೆರಳಿಗೆ ಹಾಕಲು ಸೂಚನೆ ನೀಡಲಾಗಿದೆ.  ಅಲ್ಲದೆ ಒಂದು ವೇಳೆ ಯಾವುದೇ ಮರು ಚುನಾವಣೆ ನಡೆದಲ್ಲಿ, ಅಂತಹ ಚುನಾವಣೆಗೆ ಮತದಾರರ ಎಡಗೈ ಕಿರು ಬೆರಳಿಗೆ ಮತದಾನದ ಗುರುತು ಹಾಕಲು ಚುನಾವಣಾ ಆಯೋಗ ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.

Leave a Reply