ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟು ಸಾಧ್ಯ

ಕೊಪ್ಪಳ : ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಕೊಪ್ಪಳ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ ಹಾಗೂ ಸಂದೇಶ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮುನಿರಾಬಾದ್ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ೨ ದಿನದ ತರಬೇತಿ ಕಾರ್ಯಕ್ರಮದಲ್ಲಿ ಕುಕನೂರಿನ ಪೋಲಿಸ್ ಸಬ್ ಇನ್ಸಪೆಕ್ಟರಾದ ವಿಶ್ವನಾಥ ಹಿರೇಗೌಡರ ಮಾತನಾಡುತ್ತಾ,
                     

ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಬಾಲ್ಯವಿವಾಹ ನಿಷೆದ ಅಧಿಕಾರಿ ಎಂದು ನೇಮಕಮಾಡಿದ್ದು, ಈಗಾಗಲೇ ಗ್ರಾಮೀಣ ಭಾಗದಲ್ಲಿ ಪೋಲಿಸ ಇಲಾಖೆಯಿಂದ ಪೋಲಿಸ ಇಲಾಖೆಯಿಂದ ತೆರೆದ ಮನೆ, ಪೋಲಿಸ ಇಲಾಖೆ ಕಾಯ್ ಚಟುಇವಟಿಕೆಗಳಬಗ್ಗೆ, ಮಕ್ಕಳ ರಕ್ಷಣೆಯಲ್ಲಿ ಪೋಲಿಸರ ಪಾತ್ರ, ಮಕ್ಕಳ ಹಾಗೂ ಮಹಿಳೆಯರ ರಕ್ಷಣೆಯಲ್ಲಿ ಪೋಲಿಸರ ಪಾತ್ರ, ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡಲು ಹಾಗೂ ಬಾಲ್ಯವಿವಾಹವನ್ನು ತಡೆಗಟ್ಟುವುದು, ಜನಪ್ರತಿನಿಧಿಗಳು , ಸಾರ್ವಜನಿಕರು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ವಿವಿದ ಕ್ಷೇತ್ರ ಮಟ್ಟದ ಸಿಬ್ಬಂದಿಗಳು, ಸ್ವಸಹಾಯ ಸಂಘದ ಮಹಿಳೆಯರು, ಇವರೆಲ್ಲರ ಸಹಕಾರದಿಂದ ಈ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟು ಸಾಧ್ಯ ಎಂದು ಶಿಬಿರಾರ್ಥೀಗಳಿಗೆ  ಮಾಹಿತಿ ನೀಡಿದರು.

 ಈ ತರಬೇತಿಯಲ್ಲಿ ಕೊಪ್ಪಳ ಹಾಗೂ ಗಂಗಾವತಿಯ ಪಂಚಾಯತಿ ಅಭಿವೃದ್ದಿ ಅಧಿಕಾರಿ, ಸಂಪನ್ಮೂಲ ವ್ಯಕ್ತಿಗಳು ಹೆಚ್.ಎಸ್ ಹೊನ್ನುಂಚಿ, ಹನಮಂತರಾವ್ ವಕೀಲರು, ಉಸ್ಮಾನ್ ಪೋಲಿಸ್ ತರಬೇತಿ ಅಧಿಕಾರಿ, ಇತರ ಸಿಬ್ಬಂದಿ ಹಾಜರಿದ್ದರು.  

Leave a Reply