ಜಿಲ್ಲಾ ಮಟ್ಟದ ಯುವಜನೋತ್ಸವ : ಫಲಿತಾಂಶ ಪ್ರಕಟ

 ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಇತ್ತೀಚಿಗೆ ನಡೆಸಿದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸ್ಪರ್ಧಾಳುಗಳ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಶಾಸ್ತ್ರೀಯ ಸಂಗೀತ : (ಹಿಂದೂಸ್ಥಾನಿ) ಪೂಜಾ ಕುಲಕರ್ಣಿ ಹನುಮಸಾಗರ (ಪ್ರಥಮ), ಅಕ್ಷತಾ ಎನ್. ಬಣ್ಣದಬಾವಿ ಕುಕನೂರು (ದ್ವಿತೀಯ). ಕೊಳಲು : ನಾಗರಾಜ್ ಶ್ಯಾವಿ (ಪ್ರಥಮ). ತಬಲಾ ಸೋಲೊ : ಜಲೀಲ್ ಪಾಷಾ ಮುದ್ದಾಬಳ್ಳಿ (ಪ್ರಥಮ), ಶಿವಲಿಂಗಪ್ಪ ಲಚ್ಚಪ್ಪ ಹಳೇಪೇಟಿ ಕಿನ್ನಾಳ (ದ್ವಿತೀಯ). ಭರತ ನಾಟ್ಯ : ಮಹೇಶ್ವರಿ ನೀರಜ್ ಕೊಪ್ಪಳ (ಪ್ರಥಮ), ಗುರುರಾಜ್ ಟಾಕಪ್ಪ ಕಾರಟಗಿ (ದ್ವಿತೀಯ). ಆಶು ಭಾಷಣ : ಮಂಜುನಾಥ ಜಿ. ಗೊಂಡಬಾಳ (ಪ್ರಥಮ). ಜನಪದ ಗೀತೆ : ಜ್ಯೋತಿ ಸಾಂಸ್ಕೃತಿಕ ಸಂಘ ಕುಷ್ಟಗಿ (ಪ್ರಥಮ), ಸುಭಾಷ ಹೆಚ್ ಕಲಾಲ್ ಭಾಗ್ಯನಗರ (ದ್ವಿತೀಯ). ಜನಪದ ನೃತ್ಯ : ಶ್ರೀ ಗೌರಿ ಶಂಕರ ಯುವಕ ಮಂಡಳಿ ಭಾಗ್ಯನಗರ (ಪ್ರಥಮ). ಹಾರ್ಮೋನಿಯಂ : ವಿನೋದ ಪಾಟೀಲ್ (ಪ್ರಥಮ). ಕುಚುಪುಡಿ ನೃತ್ಯ : ಗುರುರಾಜ್ ಟಾಕಪ್ಪ ಕಾರಟಗಿ (ಪ್ರಥಮ).   
 ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ ವೈಯಕ್ತಿಕ ಸ್ಪರ್ಧೆಯಲ್ಲಿ ಪ್ರಥಮ, ದ್ವಿತಿಯ ಸ್ಥಾನ ಪಡೆದವರು ಮತ್ತು ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರು ಡಿ. ೦೩ ರಿಂದ ಹಾವೇರಿಯಲ್ಲಿ ಜರುಗಲಿರುವ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹರಿರುತ್ತಾರೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ರಾಮಕೃಷ್ಣಯ್ಯ ತಿಳಿಸಿದ್ದಾರೆ. 

Leave a Reply