ಕವಲೂರಿನ ಜರುಗಿದ ಸಂಗೀತೋತ್ಸವ ಕಾರ್ಯಕ್ರಮ.

ಕೊಪ್ಪಳ : ದಿನಾಂಕ ೨೩-೭-೨೦೧೫ ರಂದು ಶಿವಶಾಂತ ವೀರ ಶಿಕ್ಷಣ ಗ್ರಾಮೀಣಾಬಿವೃದ್ದಿ ಹಾಗೂ ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಗ್ರಾಮದಲ್ಲಿ ೫ನೇ ವರ್ಷದ ಸಂಗೀತೋತ್ಸವ ಕಾರ್ಯಕ್ರಮ ಜರುಗಿತು.
    ಗ್ರಾಮದ ಹಿರಿಯರಾದ ಪ್ರದೀಪಗೌಡ್ರ ಮಾಲೀಪಾಟೀಲ ಕೊಪ್ಪಳದ ಕೆ.ಎಂ ಸಂಯ್ಯದ್ ಗ್ರಾ. ಪಂ ಅಧ್ಯಕ್ಷರಾದ ಲಕ್ಷ್ಮಮ ಗುಡಿ, ಉಪಾಧ್ಯಕ್ಷರಾದ ವೆಂಕಣ್ಣ ವರಕನಹಳ್ಳಿ ಹಾಗೂ ಪಂಚಾಯಿತಿ ಸದಸ್ಯರು ಎಪಿಯಮ್‌ಸಿ ಉಪಾದ್ಯಕ್ಷರಾದ ಮಾಯಪ್ಪ ಗುಗ್ರಿ, ಜ್ಯೋತಿ ಬೆಳಗಿಸುವದರ ಮೂಲಕ ಉದ್ಘಾಟಿಸಿದರು.
    ಗ್ರಾ.ಪಂ ಅದ್ಯಕ್ಷ ಮತ್ತು ಉಪಾಧ್ಯಕ್ಷ ಸದಸ್ಯರಿಗೆ, ಸನ್ಮಾನ ಮಾಡಿದ ಗೌಡರು ಜನಪ್ರತಿನಿದಿಗಳು ಗ್ರಾಮದ ನೈರ್ಮಲ್ಯ ಅಬಿವೃದಿಯ ಕಡೆಗೆ ಗಮನ ನೀಡಬೇಕೆಂದರು ಅಥಿತಿಗಳಾದ ಸೈಯದ್ ರವರು ಮಾತನಾಡಿ ಸಂಗೀತ ಮಾನವನ ನೆಮ್ಮದಿಯ ಜಿವನಾಡಿ ಇಂತ ಸಂಗೀತ ಕಾರ್ಯಕ್ರಮ ನಿರಂತರ ಜರುಗಲಿ ಎಂದರು. ಗ್ರಾ ಪಂ ಅದ್ಯಕ್ಷರಾದ ಲಕ್ಷ್ಮಮ ಗುಡಿಯವರು ಬಹಳದಿನಗಳಿಂದ ನೆದಗುದಿಗೆ ಬಿದಿರುವ ಗ್ರಾಮದ ಹಿರಿಯ ಕಲಾವಿದರಾದ ನಾಟಕಾಲಂಕಾರ ದಿ|| ಗರುಡ ಸದಾಶಿವರಾಯರ ಮಹಾದ್ವಾರವನ್ನು ಆದಷ್ಟು ಬೆಗನೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದರು
    ಲಚ್ಚಣ ಹಳೇಪೇಟೆ ಸೋಮನಾಥ ತಂಗೋಡ, ಬಸವರಾಜ ಅಡವಳ್ಳಿ, ರಮೇಶ ಹಟ್ಟಿ, ದೊಡ್ಡ ನಿಂಗಪ್ಪ ಕವಲೂರು ಹಾಗೂ ವಿರಪ್ಪ ಮಾಸ್ತರ, ಸಂಗೀತ ಕಾರ್ಯಕ್ರಮ ನೀಡಿದರು ರಾಮಚಂದ್ರಪ್ಪ ಉಪ್ಪಾರ, ಹಾರ್‍ಮೋನಿಯಮ್ ಶಿವಕುಮಾರ ಕುಬಸದ, ಹುಸೇನಸಾಬ ಬೆಳಗಟ್ಟಿ, ಶಿವಲಿಂಗಪ್ಪ ಹಳೇಪೇಟೆ, ತಬಲಾ ಸಾಥಿ ನೀಡಿದರು.
    ಗ್ರಾಮದ ಸಾಧಕರಿಗೆ ಸನ್ಮಾನ ಗೈಯಲಾಯಿತು. ಗ್ರಾ. ಪಂ ಸದಸ್ಯರಾದ ಮಿನಾಕ್ಷಮ್ಮ ಸೀಂದೋಗಿ ವಂದನಾರ್ಪಣೆ ಮಾಡಿದರು.

Leave a Reply