ರೈತರ ಆತ್ಮಹತ್ಯೆ ತಡೆ ಮತ್ತು ಬರ ಕುರಿತು ಲೆಖನ, ಕವಿತೆಗಳ ಆಹ್ವಾನ.

ಕೊಪ್ಪಳ, ಸೆ. ೨೪ ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘವು ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಈ ಸಂದರ್ಭದಲ್ಲಿ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮತ್ತು ಬರ ನಾಡನ್ನು ಕಾಡುತ್ತಿವೆ, ಪ್ರಸ್ತುತ ಸನ್ನಿವೇಶದಲ್ಲಿ ಪರಿಹಾರ ಹುಡುಕುವ ನಿಟ್ಟಿನಲ್ಲಿ ರಾಜ್ಯಮಟ್ಟದ ಕವನ ಸಂಕಲನ ಹಾಗೂ ಲೇಖನಗಳ ಸಂಕಲನವನ್ನು ತರಲು ಉದ್ದೇಶಿಸಲಾಗಿದೆ.
 ರೈತರ ಆತ್ಮಹತ್ಯೆ ತಡೆ ಮತ್ತು ಬರ ಕುರಿತು ನಾಡಿನ ಲೇಖಕರಿಂದ, ಕವಿಗಳಿಂದ, ಆರ್ಥಿಕ ತಜ್ಞರಿಂದ, ಕೃಷಿ ತಜ್ಞರಿಂದ ಕವಿತೆ ಮತ್ತು ಲೇಖನಗಳನ್ನು ಆಹ್ವಾನಿಸಲಾಗಿದೆ. ಲೇಖನ ಮೂರು ಪುಟ ಮೀರದಂತೆ, ಕವಿತೆ ಒಂದು ಪುಟ ಮೀರದಂತೆ ಬರೆದು ಅಲ್ಲಮಪ್ರಭು ಬೆಟ್ಟದೂರು ಕಲ್ಯಾಣ ನಗರ, ಕಿನ್ನಾಳ ರಸ್ತೆ ಕೊಪ್ಪಳ-೫೮೩೨೩೧, ಈ ವಿಳಾಸಕ್ಕೆ ಅಕ್ಟೋಬರ್ ೨೬ರೊಳಗಾಗಿ ಕಳಿಸುವಂತೆ ಬಸವರಾಜ ಆಕಳವಾಡಿ ಹಾಗೂ ವೈ. ಬಿ. ಜೂಡಿ ಅವರು ತಿಳಿಸಿದ್ದಾರೆ.
Please follow and like us:
error