ಮಹಿಳೆ ಕಾಣೆ ಪತ್ತೆಗೆ ಸಹಕರಿಸಲು ಮನವಿ.

ಕೊಪ್ಪಳ, ಡಿ.೩೦
(ಕರ್ನಾಟಕ ವಾರ್ತೆ): ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ.ಬೋದೂರು ಗ್ರಾಮದ ಜಯಶ್ರೀ
ಗಂಡ ಸಂಗಯ್ಯ ಹಿರೇಮಠ (೨೮) ಎಂಬ ಮಹಿಳೆ ಮನೆಯಿಂದ ಹೊರಗಡೆ ಹೋದವಳು ವಾಪಸ್ ಮನೆಗೆ
ಬಾರದೆ ಎಲ್ಲಿಯೋ ಕಾಣೆಯಾಗಿದ್ದು, ಈ ಮಹಿಳೆಯ ಪತ್ತೆಗೆ ಸಹಕರಿಸುವಂತೆ ಕುಷ್ಟಗಿ ಪೊಲೀಸ್
ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
    
ಮಹಿಳೆಯು ಕಳೆದ ಸುಮಾರು ೮ ರಿಂದ ೯ ತಿಂಗಳ ಹಿಂದೆ  ತನ್ನ ಇಚ್ಛೆಯಂತೆ ಮನೆಯಿಂದ ಹೊರಗಡೆ
ಹೋದವಳು ವಾಪಸ್ ಮನೆಗೆ ಬಂದಿಲ್ಲ. ಈ ಕುರಿತಂತೆ ಕುಷ್ಟಗಿ, ಗಂಗಾವತಿ, ಕೊಪ್ಪಳ
ಸೇರಿದಂತೆ ಸಂಬಂಧಿಕರಿರುವೆಡೆಯಲ್ಲ ಇಲ್ಲಿಯವರೆಗೂ ಹುಡುಕಾಡಿದರು ಮಹಿಳೆಯ ಬಗ್ಗೆ ಸುಳಿವು
ಸಿಕ್ಕಿಲ್ಲ.        ಕಾಣೆಯಾದ ಮಹಿಳೆಯ ವಿವರ ಈ ಕೆಳಗಿನಂತಿದೆ: ಹೆಸರು: ಜಯಶ್ರೀ
ಗಂಡ ಸಂಗಯ್ಯ ಹಿರೇಮಠ, ವಯಸ್ಸು: ೨೮, ಸಾ|| ಕೆ.ಬೋದೂರು, ತಾ||ಕುಷ್ಟಗಿ, ಜಿ||ಕೊಪ್ಪಳ,
ತಾಯಿ: ಈರಮ್ಮ ಸಂಗನಬಸಯ್ಯ ಹಿರೇಮಠ, ಎತ್ತರ: ೫ ಫೀಟು, ವಿದ್ಯಾರ್ಹತೆ: ೭ನೇ ತರಗತಿ,
ಕನ್ನಡ ಭಾಷೆ ಮಾತನಾಡುತ್ತಾಳೆ, ದಪ್ಪನೆಯ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ದುಂಡನೆಯ
ಮುಖ, ಮನೆಯಿಂದ ಹೊರಡುವಾಗ ಒಂದು ಗುಲಾಬಿ ಬಣ್ಣದ ನೈಟಿ ತೊಟ್ಟಿರುತ್ತಾಳೆ.

ಮೇಲ್ಕಂಡ ಚಹರೆಯುಳ್ಳ ಮಹಿಳೆಯು ಯಾವುದೇ ಠಾಣಾ ವ್ಯಾಪ್ತಿಯಲ್ಲಿ ಯಾರಿಗಾದರೂ ಕಂಡಲ್ಲಿ
ಅಥವಾ ಮಹಿಳೆಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕುಷ್ಟಗಿ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ:
೦೮೫೩೬-೨೬೭೦೩೩, ಕೊಪ್ಪಳ ನಿಯಂತ್ರಣ ಕೊಠಡಿ, ದೂರವಾಣಿ ಸಂಖ್ಯೆ: ೦೮೫೩೯-೨೩೦೨೨೨ ಇವರಿಗೆ
ಮಾಹಿತಿ ನೀಡುವಂತೆ ಕುಷ್ಟಗಿ ಪೊಲೀಸ್ ಠಾಣೆಯ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರು ತಿಳಿಸಿದ್ದಾರೆ.

Leave a Reply