ಕೊಪ್ಪಳದ ಮಹಿಳೆ ಕಾಣೆ : ಪತ್ತೆಗೆ ಸಹಕರಿಸಲು ಸೂಚನೆ

 ಕೊಪ್ಪಳ ನಗರದ ಪಲ್ಟನ್ ಓಣಿಯ ಫೈರೋಜಬೇಗಂ ಗಂಡ ಇಕ್ಬಾಲಪಾಷಾ  (೩೦) ಎಂಬ ಮಹಿಳೆ, ಓಣಿಯ ಯಮನೂರಪ್ಪ ದರ್ಗಾಕ್ಕೆ ಹೋಗಿ ಬರುವುದಾಗಿ ಮಗಳು ಆಯಿಷಾ ಇವಳಿಗೆ ಹೇಳಿ ಹೋದವಳು ವಾಪಸ್ ಮನೆಗೆ ಬಾರದೇ ಎಲ್ಲಿಯೋ ಕಾಣಿಯಾಗಿದ್ದು, ಈ ಮಹಿಳೆಯ ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಾಣೆಯಾದ ಮಹಿಳೆಯ ಚಹರೆ ಇಂತಿದೆ : ಎತ್ತರ ೦೪ ಫೀಟು ೫ ಇಂಚು, ತೆಳ್ಳನೆಯ ಮೈಕಟ್ಟು, ದುಂಡು ಮುಖ, ಕೆಂಪು ಮೈಬಣ್ಣ, ಕಪ್ಪು ತಲೆ ಕೂದಲು, ಜಾತಿ: ಮುಸ್ಲಿಂ, ಕನ್ನಡ, ಹಿಂದಿ, ಉರ್ದು ಭಾಷೆಯನ್ನು ಮಾತನಾಡುತ್ತಾಳೆ, ಮೈಮೇಲೆ ಕಪ್ಪು ಮತ್ತು ಕೆಂಪು ಕಲರ್ ಚೂಡಿದಾರ, ಕೆಂಪು ಕಲರ್ ವೇಲ್ ಧರಿಸಿರುತ್ತಾಳೆ.
ಈ ಚಹರೆಯುಳ್ಳ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ, ಸಾರ್ವಜನಿಕ

ರು ಕೊಪ್ಪಳ ಕಂಟ್ರೋಲ್ ರೂಂ: ೦೮೫೩೯-೨೩೦೨೨೨, ೨೩೦೧೦೦ ಪೊಲೀಸ್ ಇನ್ಸ್‌ಪೆಕ್ಟರ್ ನಗರ ಪೊಲೀಸ್ ಠಾಣೆ ಕೊಪ್ಪಳ-೯೪೮೦೮೦೩೭೪೫, ನಗರ ಪೊಲೀಸ್ ಠಾಣೆಯ ಪಿಎಸ್‌ಐ ೮೮೬೧೧೧೬೯೯೯ ಈ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ನಗರ ಪೊಲೀಸ್ ಠಾಣೆಯ ಪಿಎಸ್‌ಐ ಅವರು ಮನವಿ ಮಾಡಿದ್ದಾರೆ.

Related posts

Leave a Comment