ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳ ಮೇಲೆ ಹಲ್ಲೆ ಖಂಡಿಸಿ ಮನವಿ

ಕೊಪ್ಪಳ :   ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೊರಟಗೇರಾ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿಯಾದ ರಾಘವೇಂದ್ರ ಗೋಟೂರ ಇವರ ಮೇಲೆ ದಿನಾಂಕ ೧೭-೧೧-೨೦೧೧ ರಂದು ಚನ್ನಪ್ಪ ಅಯ್ಯಪ್ಪ ಪೊರಕಿ ಇವರು ಪಾನ ಮತ್ತರಾಗಿ ಬಂದು ಅವ್ಯಾಚ್ಛ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ ಮಾಡಿರುವ ಘಟನೆಯನ್ನು ಜಿಲ್ಲಾ ಪಂಚಾಯತ ರಾಜ್ಯ ನೌಕರರ ಸಂಘದ ಜಿಲ್ಲಾ ಘಟಕವು ತೀರ್ವವಾಗಿ ಕಂಡಿಸಿ ಇಂದು  ಪಂಚಾಯತ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ವೀರುಪಾಕ್ಷಗೌಡ ಪಾಟೀಲ ಕಾರ್ಯದರ್ಶಿಯಾದ ಶರಣಯ್ಯ ಸಸಿಮಠ ನೇತೃತ್ವದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಕೊಪ್ಪಳ ಇವರುಗೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಇವರಿಗೆ ಮನವಿ ಅರ್ಪಿಸಿ ಅದರಿ ಇಂತಹ ಪ್ರಕರಣಗಳು ಮೇಲಿಂದ ಮೇಲೆ ಜರಗುತ್ತಲಿದ್ದು ಪಂಚಾಯತಿಯಲ್ಲಿ ಸೇವೆಸಲ್ಲಿಸುವುದು ತುಂಬಾ ತೊಂದರೆಯಾಗುತ್ತಿದೆ. ಅಲ್ಲದೆ ಕೊಪ್ಪಳ ತಾಲೂಕಿನ ಹಿರೇಸಿಂದೋಗಿ, ಭಾಗ್ಯನಗರ, ಜಿಲ್ಲೆಯ ಅನೇಕ ಗ್ರಾಮ ಪಂಚಾಯತಿಗಳಲ್ಲಿ ಅಭಿವೃದ್ದಿ ಅಧಿಕಾರಿಗಳಿಗೆ ಸಾರ್ವಜನಿಕರು ಹಾಗೂ ಜನಪ್ರತಿನಿದಿಗಳಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಈ ಬಗ್ಗೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಹೋರಾಟ ಮಾಡಿದ್ದಾಗಲೂ ಕೂಡಾ ಸರಕಾರದಿಂದ ನಮಗೆ ಯಾವುದೇ ರಿತಿಯ ಬದ್ದತೆ ಒದಗಿಸಿರುವುದಿಲ್ಲ. ಈ ಸದರಿ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ತಪ್ಪಿತಸ್ತರಮೇಲೆ ಸೂಕ್ತ ಕ್ರಮ ಕೈಗೊಂಡು ಪಂಚಾಯತ ಅಭಿವೃದ್ದಿ ಅಧಿಕಾರಿಗಳು ಹಾಗೂ ಕಾಯದರ್ಶಿಗಳಿಗೆ  ಮತ್ತು  ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರಿಗೆ  ಸೂಕ್ತ ಭರ್ದತೆ ಒದಗಿಸಬೇಕೆಂದು ಜಿಲ್ಲಾ ಪಂಚಾಯತ ರಾಜ್ಯ ನೌಕರರ ಸಂಘದ ಜಿಲ್ಲಾ ಘಟಕದಿಂದ ಮನವಿ ಅರ್ಪಿಸಲಾಯಿತು. 
ಈ ಸಂದರ್ಭದಲ್ಲಿ ನಿಯೋಗದಲ್ಲಿ ತಾಲೂಕಾ ಅಧ್ಯಕ್ಷರಾದ ಶಿವಪ್ಪ ಕಾತರಕಿ, ಉಪಾಧ್ಯಕ್ಷರಾದ ಜ್ಯೋತಿ ರಡ್ಡೇರ ಕಾರ್ಯದರ್ಶಿಯಾದ ಜಂಬಣ್ಣ ನಂದ್ಯಾಪೂರ, ಪಿ.ಡಿ.ಓ ಸೌಮ್ಯ ಕೆ. ಗೀತಾ, ಮಂಜುಳಾ, ಗ್ರಾಮ ಪಂಚಾಯತಿ ಕಾರ್ಯದಶಿಯಾದ ನಿಂಗನಗೌಡ ಉಪಸ್ಥಿತರಿದ್ದರು. 

Related posts

Leave a Comment