ಬಂಗಾರದ ಗುಣಮಟ್ಟ ಪರಿಶೀಲನೆ ತರಬೇತಿ :

  ಭಾರತ ಸರ್ಕಾರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಅಭಿವೃದ್ಧಿ ಮಂತ್ರಾಲಯದ ಕೌಶಲ್ಯಾಭಿವೃದ್ಧಿ ಸಂಸ್ಥೆಯ ವತಿಯಿಂದ ಬೆಂಗಳೂರಿನಲ್ಲಿ ಬಂಗಾರದ ಗುಣಮಟ್ಟ ಪರಿಶೀಲನೆಗೆ ಸಂಬಂಧಿತ ೧೦ ದಿನಗಳ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
  ತರಬೇತಿಯು ಬೆಂಗಳೂರಿನ ರಾಜಾಜಿನಗರದಲ್ಲಿರುವ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ಭಾರತ ಸರ್ಕಾರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಅಭಿವೃದ್ಧಿ ಮಂತ್ರಾಲಯದ ಕೌಶಲ್ಯಾಭಿವೃದ್ಧಿ ಸಂಸ್ಥೆಯಲ್ಲಿ ಡಿಸೆಂಬರ್ ೦೩ ರಿಂದ ೧೪ ರವರೆಗೆ ನಡೆಯಲಿದೆ.  ತರಬೇತಿ ಸಂದರ್ಭದಲ್ಲಿ ಬಂಗಾರದ ಬಗೆಗಿನ ಪ್ರಾಥಮಿಕ ಮಾಹಿತಿ, ಹಾಲ್-ಮಾರ್ಕ್, ಟಚ್ ಸ್ಟೋನ್ ಬಳಕೆ ಸೇರಿದಂತೆ ಬಂಗಾರದ ಪರಿಶುದ್ಧತೆ ಹಾಗೂ ಗುಣಮಟ್ಟಕ್ಕೆ ಸಂಬಂಧಪಟ್ಟಂತೆ ತಜ್ಞರಿಂದ ತರಬೇತಿ ನೀಡಲಾಗುವುದು.   ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳಲು ಉತ್ತಮ ಅವಕಾಶ ಲಭ್ಯವಾಗಲಿದ್ದು, ತರಬೇತಿ ಪಡೆದವರು ರಾಷ್ಟ್ರೀಕೃತ ಬ್ಯಾಂಕ್, ಸಹಕಾರಿ ಬ್ಯಾಂಕ್‌ಗಳಲ್ಲಿ ಬಂಗಾರದ ಗುಣಮಟ್ಟ ಪರಿಶೀಲಕರಾಗಿ ಕಾರ್ಯ ನಿರ್ವಹಿಸಲು ಸಹಾಯಕಾರಿಯಾಗಲಿದೆ.  ಆಸಕ್ತರು ತಮ್ಮ ವಯಕ್ತಿಕ ವಿವರಗಳನ್ನು ನಿರ್ದೇಶಕರು, ಭಾರತ ಸರ್ಕಾರದ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಅಭಿವೃದ್ಧಿ ಮಂತ್ರಾಲಯದ ಕೌಶಲ್ಯಾಭಿವೃದ್ಧಿ ಸಂಸ್ಥೆ (ಎಂ.ಎಸ್.ಎಮ್.ಇ-ಡಿ.ಐ), ರಾಜಾಜಿನಗರ ಇಂಡಸ್ಟ್ರಿಯಲ್ ಎಸ್ಟೇಟ್, ಬೆಂಗಳೂರು ಇವರಿಗೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕೆ. ಕಂದಸ್ವಾಮಿ, ಸಹಾಯಕ ನಿರ್ದೇಶಕರು- ೮೯೭೧೮೨೮೫೩೩, ೦೮೦೧-೨೩೧೫೧೫೮೧ ಅಥವಾ ಜಿ. ಮುನಿರಾಜು, ತರಬೇತುದಾರರು- ೯೮೮೬೯೫೩೭೧೬ ಇವರಿಗೆ ಸಂಪರ್ಕಿಸಬಹುದಾಗಿದೆ   
Please follow and like us:
error