You are here
Home > Koppal News > ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಒಂಟಿಗೋಡಿಮಠರಿಗೆ ಸನ್ಮಾನ

ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಒಂಟಿಗೋಡಿಮಠರಿಗೆ ಸನ್ಮಾನ

 ನಗರದ ಬನ್ನಿಕಟ್ಟಿ ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷರ ವೀರಯ್ಯ ಒಂಟಿಗೋಡಿಮಠರಿಗೆ ಗುಲ್ಬರ್ಗಾದ ದಿ ಐಡಿಯಲ್ ಫೈನ್ ಆರ್ಟ ಇಸ್ಟಿಟ್ಯೂಟ್ ಹಾಗೂ ಎಂ.ಎಂ.ಕೆ ದೃಶ್ಯಕಲಾ ಕಾಲೇಜು ವತಿಯಿಂದ  ಇತ್ತಿಚಿಗೆ ನಡೆದ  ೪೫ನೇ ಕಲಬುರ್ಗಿಯ ಕಲಾ ಮಹೋತ್ಸವದಲ್ಲಿ ಸನ್ಮಾನಿಸಲಾಯಿತು.
ಕರ್ನಾಟಕ ಲಲಿತಕಲಾ ಅಕಾಡಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ, ಕರ್ನಾಟಕ ಶಿಲ್ಪಕಲಾ ಅಕಾಡಮಿ ಅಧ್ಯಕ್ಷ ಮಹದೇವಪ್ಪ ಶಿಲ್ಪಿ, ಕಲಾವಿದರುಗಳಾದ ವಿಜಯ  ಹಾಗರಗುಂಡಗಿ, ಡಾ|| ವಿ.ಜಿ.ಅಂದಾನಿ, ಪ್ರಾಶುಂಪಾಲೆ ಪೂರ್ಣಿಮಾ ಪಾಟೀಲ್, ಬಸವರಾಜ್ ಜಾನೇ ಕಾರ್ಯಕ್ರಮದಲ್ಲಿ ಇದ್ದರು.

ಬನ್ನಿಕಟ್ಟಿ  ಶಾಲೆಯ ಮುಖ್ಯ ಗುರು ಕರಿಬಸಪ್ಪ ಪಲ್ಲೇದ್ ಹಾಗೂ ಶಾಲಾ ಸಿಬ್ಬಂದಿ, ಶಾಲಾಭಿವೃದ್ಧಿ ಸಮಿತಿ ವೀರಯ್ಯ ಒಂಟಿಗೋಡಿಮಠರಿಗೆ ಅಭಿನಂದಿಸಿದ್ದಾರೆಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ತಿಳಿಸಿದ್ದಾರೆ.

Leave a Reply

Top