fbpx

“ವಂದೇ ಮಾತರಮ್”

ಪಶ್ಚಿಮ ಬಂಗಾಳದ ಪ್ರಮುಖ ಲೇಖಕ ಮತ್ತು ಕವಿ ಬಂಕಿಮ ಚಂದ್ರ ಚಟರ್ಜಿರು ರಚಿಸಿದ ವಂದೇ ಮಾತರಂ ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕೃತಿ. ರಾಷ್ಟ್ರಗೀತೆಯಾಗುವ ಎಲ್ಲ ಅಂಶ,ಅರ್ಹತೆಗಳಿದ್ದರೂ, ರವೀಂದ್ರನಾಥ ಟಾಗೋರ್ ರ ‘ಜನಗಣ ಮನ’ ಕೃತಿಗೆ ಆ ಪಟ್ಟ ದೊರಕಿತು. ವಂದೇ ಮಾತರಂ ಎಂದರೆ, ತಾಯಿಯನ್ನು ನಮಸ್ಕರಿಸುತ್ತೇನೆ ಎಂದರ್ಥ. ಇದನ್ನು ರಾಷ್ಟ್ರೀಯ ಗಾನ ಎಂದು ಕರೆಯಲಾಗುತ್ತದೆ. ಇದು ಬಂಗಾಲಿಮತ್ತು ಸಂಸ್ಕೃತ ಭಾಷೆಗಳಲ್ಲಿದೆ. ಬಂಕಿಮರು ೧೮೮೨ರಲ್ಲಿ ಬರೆದ “ಆನಂದ ಮಠ” ಎಂಬ ಕೃತಿಯ ಭಾಗವಾಗಿದ್ದ ಈ ಗೀತೆ ಅತ್ಯಂತ ಜನಪ್ರಿಯತೆ ಗಳಿಸಿತು. ಇದನ್ನು ೧೮೯೬ರಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಹಾಡಿದರು. ಭಾರತವು ಸ್ವತಂತ್ರವಾದ ನಂತರ ೧೯೫೦ರಲ್ಲಿ ಈ ಗೀತೆಯ ಮೊದಲ ಎರಡು ಪದ್ಯ ಭಾಗಗಳಿಗೆ ಭಾರತೀಯ ಗಣರಾಜ್ಯದ ರಾಷ್ಟ್ರೀಯ ಗಾನ ಎಂಬ ಅಧಿಕೃತ ಮನ್ನಣೆಯನ್ನು ನೀಡಲಾಯಿತು.

Please follow and like us:
error

Leave a Reply

error: Content is protected !!